ಮ್ಯಾನ್ಮಾರ್ ಸೇನೆಯಿಂದಲೇ ಮ್ಯಾನ್ಮಾರ್‌ನಲ್ಲಿ ವೈಮಾನಿಕ ದಾಳಿ!ಬೌದ್ಧ ಮಠವೇ ದಾಳಿಯ ಗುರಿ; 14 ಮಂದಿ ಬಲಿ!
ಯಾಂಗಾನ್, ಆಗಸ್ಟ್ 21: ಮ್ಯಾನ್ಮಾರ್‌ನ ಸಗೈಂಗ್ ಪ್ರದೇಶದಲ್ಲಿರುವ ಬೌದ್ಧ ಮಠದ ಮೇಲೆ ಶುಕ್ರವಾರ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಮ್ಯಾಂಡಲೇ ನಗರದಿಂದ ಸುಮಾರು 75 ಕಿಲೋಮೀಟರ್ ಪಶ್ಚಿಮದಲ್ಲಿರುವ ಮ್ಯಾಂಗ್ ಟೌನ್‌ಶಿಪ್‌ನ ಸ್ವೆಲ್ ಲೇವೊ ಗ್ರಾಮದ ಬೌದ್ಧ ಮಠದ ಆವರಣಕ್ಕೆ ಯುದ್ಧ ವಿಮಾನದಿಂದ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ವಾರದ ಧ್ಯಾನ […]




