ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಿಪಿ, ಮಧುಮೇಹ! ಬದಲಾಗುತ್ತಿರುವ ಜೀವನಶೈಲಿ ಬಗ್ಗೆ ವೈದ್ಯರ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 28: ಕರ್ನಾಟಕದಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಆತಂಕ ಹೆಚ್ಚುತ್ತಿದ್ದು, ಇದೀಗ ಯುವಜನತೆಯೂ ಇದರ ಅಪಾಯಕ್ಕೆ ಸಿಲುಕುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ವೇಗದ ನಗರೀಕರಣ, ದೈಹಿಕ ಚಟುವಟಿಕೆಯ ಕೊರತೆ, ಅತಿಯಾದ ಮಾನಸಿಕ ಒತ್ತಡ, ಅಸಮರ್ಪಕ ಆಹಾರ ಪದ್ಧತಿ ಹಾಗೂ ದೀರ್ಘಕಾಲದ ಕುಳಿತುಕೊಳ್ಳುವ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವೈದ್ಯಕೀಯ ಅಧ್ಯಯನಗಳು ಎಚ್ಚರಿಸಿವೆ. ಕರ್ನಾಟಕದ ಬಾಗಲಕೋಟೆಯಲ್ಲಿ ನಡೆದ ಅಧ್ಯಯನವೊಂದರಲ್ಲಿ 20ರಿಂದ 40 ವರ್ಷದವರ ಪೈಕಿ ಶೇ.17.9ರಷ್ಟು ಮಂದಿಯಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದಿದ್ದು, […]







