ಹವಾಮಾನ ಬದಲಾವಣೆಯಿಂದ ವ್ಯಾಪಕವಾಗಿ ಹೆಚ್ಚಿದ ಕೆಮ್ಮು, ಶೀತ–ಗಂಟಲು ನೋವು: ನಿರ್ಲಕ್ಷ್ಯ ಬೇಡ
ಬೆಂಗಳೂರು, ಆಗಸ್ಟ್ 17: ಹವಾಮಾನ ಬದಲಾವಣೆ, ಕಾಲೋಚಿತ ವೈರಲ್ ಸೋಂಕುಗಳು, ಮಾಲಿನ್ಯ ಹಾಗೂ ಅಲರ್ಜಿಗಳ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಕೆಮ್ಮು, ಶೀತ ಮತ್ತು ಗಂಟಲು ನೋವಿನಂತಹ ಉಸಿರಾಟದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ನೆಗಡಿ ಮತ್ತು ಫ್ಲೂ ಸೇರಿದಂತೆ ವೈರಲ್ ಸೋಂಕುಗಳು ಈ ಲಕ್ಷಣಗಳಿಗೆ ಪ್ರಮುಖ ಕಾರಣವಾಗಿದ್ದು, ಉಸಿರಾಟದ ನಾಳಗಳಲ್ಲಿ ಕಫ ಹಾಗೂ ಉರಿಯೂತವೂ ಕೆಮ್ಮು ಹೆಚ್ಚಾಗಲು ಕಾರಣವಾಗಬಹುದು. ಆರಂಭಿಕ ಹಂತದಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಉಗುರುಬೆಚ್ಚಗಿನ ನೀರಿಗೆ ಉಪ್ಪು […]







