News

ನಿನ್ನೆ 7 ಅಮಾಯಕ ಕಾರ್ಮಿಕರನ್ನು ಬಲಿ ಪಡೆದ ಉತ್ತರಾಖಂಡ ಸುರಂಗ ದುರಂತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ? : ಗಂಭೀರ ಆರೋಪ!

ಡೆಹ್ರಾಡೂನ್, ಆ.14: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಬಳಿಯ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಏಕಾಏಕಿ ನೀರು ಮತ್ತು ಅವಶೇಷಗಳು ನುಗ್ಗಿ ಸಂಭವಿಸಿದ ಭೀಕರ ದುರಂತದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 22 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನಾಪತ್ತೆಯಾಗಿರುವ ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಗುರುವಾರ ಸಂಜೆ ಸುಮಾರು 7.05ರ ವೇಳೆಗೆ ಸುರಂಗದ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿ, ಸುಮಾರು 1.4 ಕಿ.ಮೀ. ದೂರದಲ್ಲಿ ಗುಂಡಿಯೊಂದು ನಿರ್ಮಾಣವಾಗಿದ್ದು, ಅದರ ಮೂಲಕ […]

Health + News

ಪ್ಯಾಕೆಟ್‌ ಆಹಾರದ ಎಚ್ಚರಿಕೆ ಲೇಬಲ್‌ ವಿಚಾರ: ‘ಕಾರ್ಪೊರೇಟ್‌ ಒತ್ತಡಕ್ಕೆ ಮಣಿಯುತ್ತಿದ್ದೀರಾ?’ FSSAIಗೆ ಸುಪ್ರೀಂ ಕೋರ್ಟ್‌ ತರಾಟೆ

ನವದೆಹಲಿ, ಆಗಸ್ಟ್‌ 14: ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್‌ ಕೊಬ್ಬಿನಂಶ ಹೆಚ್ಚಿರುವ ಪ್ಯಾಕೆಟ್‌ ಆಹಾರಗಳ ಮೇಲೆ ಮುಂಭಾಗದಲ್ಲೇ ಎಚ್ಚರಿಕೆ ಲೇಬಲ್‌ ಅಳವಡಿಸುವ ವಿಚಾರದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಮಹತ್ವದ ವಿಚಾರದಲ್ಲಿ ಆಹಾರ ಉತ್ಪಾದನಾ ಕಂಪನಿಗಳ ಒತ್ತಡಕ್ಕೆ ಮಣಿಯುತ್ತಿದ್ದೀರಾ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್‌ ಚಂದ್ರನ್‌ ಅವರ ಪೀಠ FSSAIಯನ್ನು […]

Business News

ಕಳೆದ ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಲಘು ಇಳಿಕೆ; ಗ್ರಾಹಕರಲ್ಲಿ ತುಸು ನಿರಾಳ. ಇಂದಿನ ಬೆಲೆಯೆಷ್ಟು?

ಬೆಂಗಳೂರು, ಆಗಸ್ಟ್ 14: ಕಳೆದ ಕೆಲ ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಶುಕ್ರವಾರ ಮತ್ತೆ ಇಳಿಕೆ ಕಂಡುಬಂದಿದ್ದು, ಆಭರಣ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಕೊಂಚ ನಿರಾಳತೆ ಸಿಕ್ಕಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಪ್ರತಿ ಗ್ರಾಂಗೆ ₹71ರಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ದರ ₹1,52,890ಕ್ಕೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ ₹65ರಷ್ಟು ಕುಸಿದು, 10 ಗ್ರಾಂಗೆ ₹1,40,150 ಆಗಿದೆ. 18 […]

News

ತೆಲಂಗಾಣದಲ್ಲಿ ಮತದಾರರ ಪಟ್ಟಿಗೆ SIR ಶಾಕ್; ಶೇ.21ಕ್ಕೂ ಹೆಚ್ಚು ಮತಗಳು ಅಳಿಸುವ ಆತಂಕ: ಸಿಎಂ ಹೇಮಂತ್ ರೆಡ್ಡಿ ಕಳವಳ

ಹೈದರಾಬಾದ್, ಆಗಸ್ಟ್ 14: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಒಟ್ಟು ಮತದಾರರ ಪೈಕಿ ಶೇ.21ಕ್ಕೂ ಹೆಚ್ಚು ಮತಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಅವರು ಕಾಂಗ್ರೆಸ್ ನಾಯಕರ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣದಲ್ಲಿ ಒಟ್ಟು ಸುಮಾರು 3.38 ಕೋಟಿ ಮತದಾರರಿದ್ದು, 73.39 ಲಕ್ಷಕ್ಕೂ ಹೆಚ್ಚು ಮತದಾರರ ಗಣತಿ ನಮೂನೆಗಳು ಸಂಗ್ರಹವಾಗಿಲ್ಲ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft