ಕೇರಳ ಪೊಲೀಸ್ ಇಲಾಖೆಯ ಆಂತರಿಕ ಫೈಲ್ ವ್ಯವಸ್ಥೆ ನಾಲ್ಕು ದಿನಗಳಿಂದ ಸ್ಥಗಿತ; ಸೈಬರ್ ದಾಳಿಯ ಶಂಕೆ, ತನಿಖೆ ಆರಂಭ
ಕೇರಳ ಪೊಲೀಸ್ ಇಲಾಖೆಯ ಆಂತರಿಕ ಕಡತ ನಿರ್ವಹಣಾ ವ್ಯವಸ್ಥೆ ಕಳೆದ ನಾಲ್ಕು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೈಬರ್ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಇಲಾಖೆಯ ಆಂತರಿಕ ದಾಖಲೆಗಳು ಹಾಗೂ ಕಡತಗಳ ನಿರ್ವಹಣೆಗೆ ಬಳಸಲಾಗುವ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿಲ್ಲ. ಈ ತಾಂತ್ರಿಕ ವೈಫಲ್ಯದ ಹಿಂದೆ ಹ್ಯಾಕಿಂಗ್ ಅಥವಾ ಸೈಬರ್ ದಾಳಿ ಇರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಈ ವ್ಯವಸ್ಥೆಯ ನಿರ್ವಹಣೆಯನ್ನು ಸರ್ಕಾರಿ ಸ್ವಾಮ್ಯದ ಕೆಲ್ಟ್ರಾನ್ […]





