ಚಾಬಹಾರ್ ಮೇಲೆ ಅಮೆರಿಕದ ಕ್ಷಿಪಣಿ ದಾಳಿ; ಪ್ರತಿಯಾಗಿ ಇರಾನ್‌ನಿಂದಲೂ ಗಲ್ಫ್ ರಾಷ್ಟ್ರದಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಭಾರೀ ಪ್ರತಿದಾಳಿ
ಚಾಬಹಾರ್: ಇರಾನ್‌ನ ಪ್ರಮುಖ ಬಂದರು ನಗರವಾದ ಚಾಬಹಾರ್‌ನಲ್ಲಿರುವ ವಾಚ್‌ಟವರ್‌ವೊಂದನ್ನು ಅಮೆರಿಕದ ಪಡೆಗಳು ಕ್ಷಿಪಣಿ ದಾಳಿಯಲ್ಲಿ ಗುರಿಯಾಗಿಸಿಕೊಂಡಿರುವುದಾಗಿ ವರದಿಯಾಗಿದೆ. ದಾಳಿಯಲ್ಲಿ ವಾಚ್‌ಟವರ್‌ಗೆ ಹಾನಿಯಾಗಿದ್ದು, ಈ ಬೆಳವಣಿಗೆ ಅಮೆರಿಕ–ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿರುವುದನ್ನು ಸೂಚಿಸಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾನ್‌ನ ಪ್ರತಿದಾಳಿಯಲ್ಲಿ ಅಮೆರಿಕದ ಮಿತ್ರ ರಾಷ್ಟ್ರಗಳ ಪ್ರದೇಶಗಳು ಹಾಗೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿದುಬಂದಿದೆ. ಎರಡೂ ದೇಶಗಳ ನಡುವಿನ ದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ […]






