2027ರ ವಿಶ್ವಕಪ್‌ಗೂ ಮುನ್ನ ರೋಹಿತ್–ಕೊಹ್ಲಿ ಭವಿಷ್ಯದ ಚರ್ಚೆಯ ಬಗ್ಗೆ ಆರ್. ಅಶ್ವಿನ್‌ರಿಂದ ಮಹತ್ವದ ಪ್ರಶ್ನೆ
ಹೊಸದಿಲ್ಲಿ, ಜುಲೈ 18: 2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ನಡೆಯುತ್ತಿರುವ ಚರ್ಚೆಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ಆಟಗಾರರನ್ನು ತಂಡದಿಂದ ಹೊರಗಿಡುವ ಉದ್ದೇಶ ಆಯ್ಕೆ ಸಮಿತಿಗೆ ಇದ್ದರೆ, ಈ ವಿಚಾರವನ್ನು ಬಹಳ ಹಿಂದೆಯೇ ಸ್ಪಷ್ಟಪಡಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದು ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಮಾತ್ರಕ್ಕೆ ಆಟಗಾರರ ವೃತ್ತಿಜೀವನದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು […]







