Health +

ಮಾವು ತಿಂದರೆ ಶುಗರ್ ಹೆಚ್ಚಾಗುತ್ತಾ? ಮಧುಮೇಹಿಗಳು ಈ ಹಣ್ಣನ್ನು ಯಾವಾಗ ಸೇವನೆ ಮಾಡಬೇಕು?

ಬೇಸಿಗೆ ಆರಂಭವಾದಾಗ ಮಾವಿನ ಹಣ್ಣಿನ ಸೀಸನ್ ಕೂಡ ಆರಂಭವಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣುಗಳಲ್ಲಿ ಮಾವು ಕೂಡ ಒಂದು. ಆದರೆ ಮಧುಮೇಹಿಗಳು ಮಾತ್ರ ಈ ಹಣ್ಣನ್ನು ಸೇವನೆ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಏಕೆಂದರೆ ಇದರ ಸೇವನೆಯಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎಂಬ ಭಯ ಹಲವರನ್ನು ಕಾಡುತ್ತದೆ. ಹಾಗಾದರೆ ನಿಜವಾಗಿಯೂ ಮಾವು ತಿಂದರೆ ಶುಗರ್ ಹೆಚ್ಚಾಗುತ್ತದೆಯೇ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಾವು ತಿಂದರೆ ಶುಗರ್ ಹೆಚ್ಚಾಗುತ್ತಾ? ಮಧುಮೇಹಿಗಳು ಈ ಹಣ್ಣನ್ನು ಯಾವಾಗ ಸೇವನೆ ಮಾಡಬೇಕು?

ಬೇಸಿಗೆ ಆರಂಭವಾದ ಕೂಡಲೇ ಮಾವಿನ ಹಣ್ಣುಗಳ (Mango) ಸೀಸನ್ ಶುರುವಾಗುತ್ತದೆ. ಮಾವು ಬಹುತೇಕ ಎಲ್ಲರಿಗೂ ಇಷ್ಟವಾದ ಹಣ್ಣು. ಆದರೆ, ವಿಶೇಷವಾಗಿ ಮಧುಮೇಹ (Diabetes) ಇರುವವರು ಮಾವು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಎಲ್ಲಿ ಮಾವಿನಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತದೆಯೋ ಎಂಬ ಭಯ ಇದ್ದೆ ಇರುತ್ತದೆ. ಈ ಗೊಂದಲದಲ್ಲಿ ಮಾವಿನಹಣ್ಣು ಇಷ್ಟವಾದರೂ ತಿನ್ನುವ ಗೋಜಿಗೆ ಹೋಗುವುದಿಲ್ಲ. ಹಾಗಾದರೆ ನಿಜವಾಗಿಯೂ ಮಾವು ತಿಂದರೆ ಶುಗರ್ ಹೆಚ್ಚಾಗುತ್ತದೆಯೇ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಾವಿನ ಗ್ಲೈಸೆಮಿಕ್ ಇಂಡೆಕ್ಸ್ ಏನು ಹೇಳುತ್ತದೆ?

ಮಾವಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಸಾಮಾನ್ಯವಾಗಿ 51 ರಿಂದ 60 ರ ನಡುವೆ ಇರುತ್ತದೆ. ಇದು ಮಧ್ಯಮ ಮಟ್ಟವಾಗಿದ್ದು, ಮಾವು ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುವುದಿಲ್ಲ. ಆದರೆ, ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಶುಗರ್ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ತಜ್ಞರ ಪ್ರಕಾರ, ಮಾವನ್ನು ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ತಿಂದರೆ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ.

ಮಾವು ತಿಂದರೆ ಶುಗರ್ ಹೆಚ್ಚುತ್ತದೆಯೇ?

ತಜ್ಞರ ಪ್ರಕಾರ, ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಹೆಚ್ಚು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಮುಖ್ಯ. ಸಾಮಾನ್ಯವಾಗಿ ದಿನಕ್ಕೆ ಒಂದು ಮಾವು ಸೇವಿಸುವುದು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಜೊತೆಗೆ ಮಾವನ್ನು ತಿನ್ನುವ ಮೊದಲು ವೈದ್ಯರು ಅಥವಾ ಡೈಟಿಷಿಯನ್ ಸಲಹೆ ಪಡೆಯುವುದು ಉತ್ತಮ. ಪ್ರತಿಯೊಬ್ಬರ ದೇಹದ ಸ್ಥಿತಿ ವಿಭಿನ್ನವಾಗಿರುವುದರಿಂದ, ವೈಯಕ್ತಿಕ ಆಹಾರ ಕ್ರಮ ಬಹಳ ಮುಖ್ಯ.

ಮಧುಮೇಹ ಇರುವವರು ಯಾವ ರೀತಿ ಸೇವನೆ ಮಾಡಬೇಕು?

ಮಧುಮೇಹ ಇರುವವರು ಮಾವನ್ನು ಸಂಪೂರ್ಣವಾಗಿ ಬಿಟ್ಟು ಬಿಡುವ ಅಗತ್ಯವಿಲ್ಲ. ಆದರೆ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ:

  • ಒಂದೇ ಬಾರಿ 100 ಗ್ರಾಂ ಗಿಂತ ಹೆಚ್ಚು ಮಾವು ತಿನ್ನಬಾರದು
  • ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸಬೇಕು
  • ಮಾವಿನ ಜ್ಯೂಸ್ ಅಥವಾ ಶೇಕ್ ಮಾಡದೆ ಹಣ್ಣನ್ನೇ ಸೇವಿಸಬೇಕು
  • ನಟ್‌ಗಳು ಅಥವಾ ಫೈಬರ್ ಇರುವ ಆಹಾರಗಳ ಜೊತೆ ಸೇವಿಸುವುದು ಉತ್ತಮ
  • ಇವು ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ನಿಯಂತ್ರಿಸಲು ಸಹಕಾರಿ.
Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft