News

ಬೆಳಗಾವಿಯ ಕನ್ನಡ ರಾಜ್ಯೋತ್ಸವ ಕಂಡೀರಾ..!! ಮಧ್ಯರಾತ್ರಿಯಿಂದಲೇ ಆಚರಣೆಗೆ ಚಾಲನೆ, ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಸಾವಿರಾರು ಜನ..!!

ಬೆಳಗಾವಿ : ತಡರಾತ್ರಿಯಿಂದಲೇ ಬೆಳಗಾವಿಯ ಬೀದಿಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಝೇಂಕಾರಗಳು ಮುಗಿಲು ಮುಟ್ಟಿವೆ.ಪ್ರತಿವರ್ಷದಂತೆ ಈ ಬಾರಿಯೂ ಗಡಿನಾಡ ಕನ್ನಡಿಗರು ರಾತ್ರಿಯೇ ಉತ್ಸವಕ್ಕೆ ಸಮಾವೇಶಗೊಂಡರು. ರಾತ್ರಿ 10ರ ನಂತರ ಏಕಾಏಕಿ ಸೇರಿದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರದ ಜನರಿಂದ ಇಡೀ ವೃತ್ತ ಕಿಕ್ಕಿರಿದು ತುಂಬಿತು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್‌ ಆಯಿತು.ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಇದೇ ಮೊದಲ ಬಾರಿಗೆ ಸಿಡಿ ಮದ್ದಿನ […]

News

ನವೆಂಬರ್ 10,12 ರಂದು ದಕ್ಷಿಣ ಕನ್ನಡದಲ್ಲಿ ಸರ್ದಾರ್@150 ಯುನಿಟಿ ವಾಕ್ : ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡದ ಎರಡು ಕಡೆಗಳಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆದೇಶದ ಮೇರೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ನವೆಂಬರ್ 10 ರಂದು ಮಂಗಳೂರಿನಲ್ಲಿ ಮತ್ತು ನವೆಂಬರ್ 12 ರಂದು ಪುತ್ತೂರಿನಲ್ಲಿ ಸರ್ದಾರ್@150 ಯುನಿಟಿ ವಾಕ್ ಆಯೋಜಿಸಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಪ್ಟನ್ ಚೌಟ, ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ […]

ಸಿನಿಮಾ

ಒಟಿಟಿ ಪ್ರೇಕ್ಷಕರಿಗೆ ಹಬ್ಬ..!! ಕಾಂತಾರ ಎ ಲೆಜೆಂಡ್,ಲೋಕ ಚಾಪ್ಟರ್ 1,ಬ್ಲಾಕ್‌ಮೇಲ್ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯ ಬಿಸಿಯಲ್ಲಿ ..!!

ಸಿನಿಮಾ ಅಭಿಮಾನಿಗಳ ಲೋಕವನ್ನು ತುದಿಗಾಲಲ್ಲಿ ನಿಲ್ಲಿಸಿದ ತ್ರಿಲ್ಲರ್ ,ಡ್ರಾಮಾ , ಸೂಪರ್ ಹೀರೋ ಚಿತ್ರಗಳಾದ ಕಾಂತಾರ ಎ ಲೆಜೆಂಡ್,ಲೋಕ ಚಾಪ್ಟರ್ 1, ಬ್ಲಾಕ್ ಮೇಲ್ ಚಿತ್ರಗಳು ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು‌ ಒಟಿಟಿ ಸೇರುವ ಹಾದಿಯಲ್ಲಿದೆ. ಹಬ್ಬದ ಋತು ಮುಗಿಯುತ್ತಿದ್ದಂತೆ, ದಕ್ಷಿಣ ಭಾರತದ ಕೆಲವು ದೊಡ್ಡ ಮತ್ತು ವೈವಿಧ್ಯಮಯ ಬಿಡುಗಡೆಗಳೊಂದಿಗೆ OTT ಜಾಗವು ಬಿಸಿಯಾಗುತ್ತಿದೆ. ಸೂಪರ್‌ಹೀರೋ ಸಾಹಸಗಳು ಮತ್ತು ಪೌರಾಣಿಕ ನಾಟಕಗಳಿಂದ ಹಿಡಿದು ಭಾವನಾತ್ಮಕ ಸಂಕಲನಗಳು ಮತ್ತು ಸೆರೆಹಿಡಿಯುವ ಥ್ರಿಲ್ಲರ್‌ಗಳವರೆಗೆ, ಈ ವಾರ ಪ್ರತಿಯೊಂದು […]

News

ಶೃಂಗೇರಿಯಲ್ಲೊಂದು ದುರ್ಘಟನೆ!! ಇಬ್ಬರನ್ನು ತುಳಿದು ಕೊಂದ‌ ಕಾಡಾನೆ!!

ಚಿಕ್ಕಮಗಳೂರು: ದನದ ಕೊಟ್ಟಿಗೆಗೆ ಎಲೆಯನ್ನು ತರಲು ಕಾಡಿಗೆ ಹೋದ ಇಬ್ಬರನ್ನು ಕಾಡಾನೆ ದಾಳಿ ಮಾಡಿ ತುಳಿದು ಕೊಂದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಮೃತರನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿರುವ ಹಳ್ಳಿಯ ನಿವಾಸಿಗಳಾದ ಉಮೇಶ್ (43) ಮತ್ತು ಹರೀಶ್ (42) ಎಂದು ಗುರುತಿಸಲಾಗಿದೆ. ಶುಕ್ರವಾರ ಕಾಡು ಆನೆಯೊಂದು ಇಬ್ಬರು ಪುರುಷರನ್ನು ತುಳಿದು ಕೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಘಟನೆಯಲ್ಲಿ ಭಾಗಿಯಾದ ಆನೆಯನ್ನು ಪತ್ತೆ ಹಚ್ಚಿ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು […]

News

ಮುಂಬೈನಲ್ಲೊಂದು ಸಿನಿಮೀಯ ಘಟನೆ, ಆಡಿಷನ್‌ಗೆಂದು ಕರೆಸಿ 17 ಮಕ್ಕಳ ಕಿಡ್ನ್ಯಾಪ್..!! ಆರೋಪಿಯ ಎನ್ ಕೌಂಟರ್..!

ಮುಂಬೈ :ವೆಬ್ ಸೀರೀಸ್ಗೆ ಆಡಿಷನ್ ನಡೆಸಲಾಗುತ್ತಿದೆ ಎಂದು 17 ಮಕ್ಕಳನ್ನು ಕರೆಸಿದ್ದ ರೋಹಿತ್ ಆರ್ಯ ಎಂಬ ವ್ಯಕ್ತಿ ಮುಂಬೈನ (Mumbai) ಆರ್ಎಸ್ ಸ್ಟುಡಿಯೋದಲ್ಲಿ ಆ ಮಕ್ಕಳು ಮತ್ತು ಇನ್ನಿಬ್ಬರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ನಂತರ ಪೊಲೀಸರಿಗೆ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದರು. ಕೊನೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆ ಎಲ್ಲ ಮಕ್ಕಳನ್ನು ರಕ್ಷಿಸಿದ್ದರು. ಆದರೆ, ರೋಹಿತ್ ಆರ್ಯನ ಮೇಲೆ ಗುಂಡು ಹಾರಿಸಲಾಗಿದೆ. ಎನ್ಕೌಂಟರ್ನಲ್ಲಿ ಸಾವನ್ನಪ್ಪುವ ಮೂಲಕ ಈ ಕಿಡ್ನಾಪ್ ಡ್ರಾಮಾ ಅಂತ್ಯ ಕಂಡಿದೆ. ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಮುಂಬೈನ ಪೊವೈ […]

News

ತನ್ನ ಮಗನಿಗೆ ಉಪಮುಖ್ಯಮಂತ್ರಿಯವರ ಹೆಸರನ್ನೇ ಇಟ್ಟ ಕಾಂಗ್ರೆಸ್ ಶಾಸಕ: ಸ್ವತಃ ಡಿಕೆಶಿಯವರಿಂದಲೇ ಮಗುವಿಗೆ ನಾಮಕರಣ.

ಕುಡಚಿ ಕಾಂಗ್ರೆಸ್‌ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಮಗನಿಗೆ ಡಿಕೆ ಶಿವಕುಮಾರ್ ಅವರಿಂದ ನಾಮಕರಣ ಮಾಡಿಸಿದ್ದು, ಮಗನಿಗೂ ʻಶಿವಕುಮಾರ್ʼ ಅಂತಲೇ ನಾಮಕರಣ ಮಾಡಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರು ಪಾಪುವಿಗೆ ತಮ್ಮ ಹೆಸರನ್ನೇ ನಾಮಕಾರಣ ಮಾಡಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಚಿತ್ರವು ಕಾಂಗ್ರೆಸ್ ಅಭಿಮಾನಿಗಳ ಸಾಮಾಜಿಕ ತಾಣಗಳ ಪೇಜ್‌ಗಳಲ್ಲಿ ವೈರಲ್ ಆಗಿದೆ. ಮಗುವಿಗೆ ತಮ್ಮ ಹೆಸರು ಇಟ್ಟು ಮಗು ಶಿವಕುಮಾರ್ ಗೆ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಮನತುಂಬಿ ಹಾರೈಸಿದ್ದಾರೆ. ಈ ಬಗ್ಗೆ ಡಿಕೆ […]

News

ತೆಲಂಗಾಣ ಸರ್ಕಾರದಿಂದ ಮಹತ್ವದ ನಡೆ ,ಸಂಪುಟದ 16 ನೇ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ

ತೆಲಂಗಾಣ: ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು , ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರ ಉಪಸ್ಥಿತಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ರವರು ತೆಲಂಗಾಣ ಸರ್ಕಾರದ ಹದಿನಾರನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಸಮಾರಂಭದಲ್ಲಿ ರಾಜ್ಯಪಾಲರು ಪ್ರಮಾಣ ಬೋಧಿಸಿದರು. ಆದರೆ, ತಮ್ಮ ನೇಮಕವನ್ನು ಉಪಚುನಾವಣೆಗೆ ಜೋಡಿಸಿರುವ ಆರೋಪಗಳನ್ನು ಅಜರುದ್ದೀನ್ ತಳ್ಳಿಹಾಕಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಅವರು, “ನಾನು ಸಂತೋಷವಾಗಿದ್ದೇನೆ. ನನ್ನ ಪಕ್ಷದ ಹೈಕಮಾಂಡ್, ಜನತೆ ಮತ್ತು ನನ್ನ ಬೆಂಬಲಿಗರಿಗೆ ಧನ್ಯವಾದ ಹೇಳುತ್ತೇನೆ. ಇದು ಜುಬಿಲಿ ಉಪಚುನಾವಣೆಗೆ ಸಂಬಂಧಿಸಿದ್ದಲ್ಲ. […]

News

ಉತ್ತರ ಪ್ರದೇಶ: ದೇವಸ್ಥಾನ ಗೋಡೆಗಳ ಮೇಲೆ ಮೇಲೆ ‘ಐ ಲವ್ ಮುಹಮ್ಮದ್’ ಎಂದು ಬರೆದ ಆಕಾಶ್, ದಿಲೀಪ್, ಅಭಿಷೇಕ್ ಸೇರಿದಂತೆ ನಾಲ್ವರ ಬಂಧನ.

ಉ.ಪ್ರ ,ಅಲಿಘರ್ : ದೇವಾಲಯಗಳ ಗೋಡೆಗಳ ಮೇಲೆ “ಐ ಲವ್ ಮುಹಮ್ಮದ್” ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಜೀಶಾಂತ್ ಸಿಂಗ್, ಆಕಾಶ್ ಸಾರಸ್ವತ್, ದಿಲೀಪ್ ಶರ್ಮಾ ಮತ್ತು ಅಭಿಷೇಕ್ ಸಾರಸ್ವತ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಕುಮಾರ್ ಜದೌನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಹುಲ್ ಎಂಬ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಆದರೆ ಎಸ್‌ಎಸ್‌ಪಿ ಪ್ರಕಾರ, ತನಿಖೆಯಲ್ಲಿ ಗೀಚುಬರಹವು ಕೋಮುವಾದಿ ಕೃತ್ಯವಲ್ಲ, ಬದಲಾಗಿ ನಡೆಯುತ್ತಿರುವ ಭೂ ವೈಷಮ್ಯದಿಂದಾಗಿ ಇತರರ […]

News

“ಲಾಲ್‌ಬಾಗ್ ಉಳಿಸಿ, ಬೆಂಗಳೂರು ಉಳಿಸಿ” :ಸುರಂಗ ರಸ್ತೆಯ ವಿರುದ್ಧ ನವೆಂ 2 ರಂದು ಬಿಜೆಪಿ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೆಚ್ಚಿನ ಯೋಜನೆಯಾದ ಬೆಂಗಳೂರು ಸುರಂಗ ರಸ್ತೆಯು ನಗರದ ಸಂಚಾರ ಸಮಸ್ಯೆಗಳನ್ನು ಕಡಿಮೆ ಮಾಡಲು ಭೂಗತ ರಸ್ತೆಗಳ ಜಾಲವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ 17.7 ಕಿಮೀ ಅವಳಿ-ಟ್ಯೂಬ್ ಸುರಂಗವನ್ನು ಸುಮಾರು 18,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂಬುವುದಾಗಿದೆ ಪ್ರಸ್ತುತ ಯೋಜನೆ. ಆ ಸುರಂಗ ರಸ್ತೆಯು ನಗರವನ್ನು ಅಸ್ತವ್ಯಸ್ತ ಮಾಡಲಿದೆ ,ಈ ಯೋಜನೆಯು ಬೆಂಗಳೂರಿಗೆ ಸೂಕ್ತವಲ್ಲ […]

News

ಸೈಕ್ಲೋನ್ ಮೋಂತೊ: ರಾಜ್ಯದಲ್ಲಿ ಅಕಾಲಿಕ ಮಳೆ; ಗಗನಕ್ಕೇರಿದ ತರಕಾರಿ ಬೆಲೆ

ಹಲವು ದಿನಗಳಿಂದ ಸೈಕ್ಲೋನ್ ಎಫೆಕ್ಟ್ನಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲ ಭಾಗದಲ್ಲೂ ಭಾರೀ ಮಳೆಯಾಗಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಅಕಾಲಿಕ ಮಳೆಯಾಗಿತ್ತು. ಇದರಿಂದ ತರಕಾರಿ ಬೆಳೆ ಹಾಳಾಗಿದ್ದು, ಸರಿಯಾಗಿ ಬೆಳೆ ಬಂದಿಲ್ಲ. ಬೆಳೆದ ಬೆಳೆ ಕೈಗೆ ಬರದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿದೆ.ಯಾವ ತರಕಾರಿ ಬೆಲೆ ಕೇಳಿದರೂ ಗ್ರಾಹಕರು ಕಂಗಾಲಾಗುತ್ತಿದ್ದಾರೆ. ಇದರಿಂದ ಯಾರು ತರಕಾರಿ ಕೊಳ್ಳಲು ಬರುತ್ತಿಲ್ಲ, ವ್ಯಾಪಾರ ಸರಿಯಾಗಿ ನಡೆಯದೇ ಇದ್ದರೆ ಜೀವನ ಸಾಗಿಸುವುದು ಕಷ್ಟ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft