News

ಕೆಜಿಎಫ್ ಚಾಚಾ ಖ್ಯಾತಿಯ ಹಿರಿಯ ಖಳನಟ ಹರೀಶ್ ರಾಯ್ ಇನ್ನಿಲ್ಲ:

ಉಡುಪಿ : ಕೆಜಿಎಫ್ ಚಾಚ ಖ್ಯಾತಿಯ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ..!!ಉಡುಪಿ :ಸುಮಾರು 2 ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅನೇಕ ಚಿತ್ರದಲ್ಲಿ ವಿಲನ್ ಪಾತ್ರದ ಮೂಲಕವೇ ಪ್ರಸಿದ್ದಿಗೆ ಬಂದ ನಟರಾಗಿದ್ದಾರೆ ಹರೀಶ್ ರಾಯ್.ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರು ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. ಓಂ ಸಿನಿಮಾದಲ್ಲಿ ಡಾನ್ ಪಾತ್ರದ ಮೂಲಕ ಖ್ಯಾತಿ […]

Business News

ಅನಿಲ್ ಅಂಬಾನಿಗೆ ಮುಂದುವರಿದ ಇಡಿ ಕಂಟಕ; ಮತ್ತೆ ಸಮನ್ಸ್ ನೀಡಿದ ಈಡಿ

ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ಇಡಿ ಕಂಟಕ ಮುಂದುವರಿದಿದೆ. ಫೆಮಾ ಕಾಯ್ದೆ ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಈ ಸಮನ್ಸ್ ಕೊಟ್ಟಿರುವುದು ತಿಳಿದುಬಂದಿದೆ. ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್​ಗೆ ಕೊಡಲಾಗಿದ್ದ ರಸ್ತೆ ನಿರ್ಮಾಣ ಗುತ್ತಿಗೆಯನ್ನು ಅಕ್ರಮವಾಗಿ ಬೇರೆ ಸಂಸ್ಥೆಗೆ ಉಪಗುತ್ತಿಗೆ ಕೊಡಲಾಗಿದೆ ಎಂಬುದು ತನಿಖಾ ಸಂಸ್ಥೆಗಳ ಆರೋಪ. ನವದೆಹಲಿ, ನವೆಂಬರ್ 6: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರಿಗೆ ಜಾರಿ ನಿರ್ದೇಶನಾಲಯದಿಂದ ಮತ್ತೊಮ್ಮೆ ಸಮನ್ಸ್ ಕೊಡಲಾಗಿದೆ. ಫೆಮಾ ಅಡಿಗೆ ಬರುವ ಪ್ರಕರಣವೊಂದರ ತನಿಖೆ ನಡೆಯುತ್ತಿದ್ದು, ಈ […]

GULF News

ನವದೆಹಲಿಯಲ್ಲಿ ಸಲಹಾ ಸೇವೆಗಳನ್ನು ತೆರೆಯಲಿರುವ :ಯುಎಇಯ ಹಬೀಬ್ ಅಲ್ ಮುಲ್ಲಾ

ನವದೆಹಲಿ, ಯುಎಇ : ಯುಎಇ ಮೂಲದ ಕಾನೂನು ಸಂಸ್ಥೆ ಹಬೀಬ್ ಅಲ್ ಮುಲ್ಲಾ ಮತ್ತು ಪಾಲುದಾರರು ಈ ವರ್ಷದ ಮೇ ತಿಂಗಳಿನಲ್ಲಿ ಹಲವು ಯೋಜನೆಗಳನ್ನು ಘೋಷಿಸಿತ್ತು. ಇದೀಗ  ಆರು ತಿಂಗಳ ನಂತರ , ಟರ್ಕಿ, ರಷ್ಯಾ, ಇರಾಕ್ ಮತ್ತು ಈಜಿಪ್ಟ್‌ಗಳ ಜೊತೆಗೆ ತನ್ನ ಜಾಗತಿಕ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡು, ನವದೆಹಲಿಯಲ್ಲಿ ತನ್ನ ಭಾರತ-ಕೇಂದ್ರಿತ ಸಲಹಾ ಸೇವೆಗಳನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. “ಭಾರತದಲ್ಲಿ ಹೂಡಿಕೆ ಮತ್ತು ವ್ಯವಹಾರಗಳನ್ನು ಹೊಂದಿರುವ ನಮ್ಮ ಗ್ರಾಹಕರು ಮತ್ತು ಯುಎಇಯಲ್ಲಿ ವ್ಯಾಪಾರ ಅಥವಾ ವ್ಯಾಪಾರ ಹೊಂದಿರುವ ಯಾವುದೇ ಭಾರತೀಯ […]

Health +

ನಿಮ್ಮ ಆಹಾರದಲ್ಲಿ ನಾರಿನಾಂಶ ಇದೆಯೇ? ಆರೋಗ್ಯಕರ ದೇಹಕ್ಕೆ FIBRE ಎಷ್ಟು ಮುಖ್ಯ…?

ಪೌಷ್ಠಿಕಾಂಶದ ಕುರಿತಾ ಯಾರೇ ಮಾತನಾಡಿದರು ಪ್ರೋಟೀನ್ ಮತ್ತು ನ್ಯೂಟ್ರಿಷಿಯನ್ ಕುರಿತು ಹೆಚ್ಚಾಗಿ ಮಾತನಾಡುತ್ತಾರೆ. ಆದರೆ, ಫೈಬರ್ ಎಂಬ ಅಂಶವನ್ನು ಮರೆತೇ ಹೋಗುತ್ತಾರೆ. ಯಾವುದೇ ವ್ಯಕ್ತಿ ನಿಮಗಿಷ್ಟವಾದ ಆಹಾರ ಯಾವುದು ಎಂದರೆ, ಐಸ್ ಕ್ರೀಮ್, ಕೇಕ್, ಚಿಕನ್, ಮಟನ್ ಸೇರಿದಂತೆ ಇನ್ನಿತರ ಹೆಸರುಗಳನ್ನು ಹೇಳುವುದುಂಟು.ಇನ್ನು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲವು ಮಂದಿ ಮಾತ್ರ ಓಟ್ಸ್, ಮೊಸರು, ಹಣ್ಣು, ತರಕಾರಿಗಳಿಂದ ಮಾಡಿದ ಆಹಾರಗಳ ಹೆಸರು ಹೇಳುತ್ತಾರೆ. ಆದರೆ, ನಾವು ಸೇವಿಸುವ ಆಹಾರ ಹೇಗಿರಬೇಕು ಮತ್ತು ನಾವು ಈಗ ಸೇವಿಸುತ್ತಿರುವ […]

GULF News

ಮೇಯರ್ ಜೊಹ್ರಾನ್ ಕಟು ಭಾಷಣ, ನನ್ನ ಸಹಿಯೂ ಬೇಕು, ಸ್ವಲ್ಪ ವಿಧೇಯತೆಯಿಂದ ವರ್ತಿಸಿ ಎಂದ ಟ್ರಂಪ್

ವಾಷಿಂಗ್ಟನ್, ನವೆಂಬರ್ 06: ಭಾರತದ ಪ್ರಮುಖ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ(Zohran Mamdani) ನ್ಯೂಯಾರ್ಕ್​ನ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಟ್ರಂಪ್ ವಿರೋಧದ ನಡುವೆಯೂ ಅವರು ಗೆದ್ದು ಬೀಗಿದ್ದಾರೆ. ಎಷ್ಟರ ಮಟ್ಟಿಗೆ ಟ್ರಂಪ್ ಅವರನ್ನು ದ್ವೇಷಿಸುತ್ತಿದ್ದರೆಂದರೆ ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ ಮಮ್ದಾನಿಯವರನ್ನು ನ್ಯೂಯಾರ್ಕ್​ನಿಂದ ಹೊರಗಟ್ಟುವುದಾಗಿಯೂ ಎಚ್ಚರಿಕೆ ನೀಡಿದ್ದರು. ಜೊಹ್ರಾನ್ ಮೇಯರ್ ಆದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಟ್ರಂಪ್ ವಿರುದ್ಧ ಕಹಿ ನುಡಿಗಳನ್ನು ಆಡಿದ್ದಾರೆ. ನಿಮಗೆ ನಾಲ್ಕು ಮಾತು ಹೇಳೋದಿದೆ ಟರ್ನ್​ ದಿ ವಾಲ್ಯೂಮ್ […]

ಸಿನಿಮಾ

“ಟಾಕ್ಸಿಕ್” ಬಿಡುಗಡೆಯ ಅಂದೇ ನನ್ನ ಚಿತ್ರವನ್ನೂ ರಿಲೀಸ್ ಮಾಡುತ್ತೇನೆ, ನನ್ನ ಚಿತ್ರ ಗೆದ್ದೇ ಗೆಲ್ಲುತ್ತದೆ: ಹಠದಲ್ಲಿ “ಡಖಾಯಿತ್” ನಟ..!!

ಸಿನಿಮಾ ಹಂಗಾಮಿ :ಭಾರತದ ಎಲ್ಲಾ ಸಿನಿಮಾ ಇಂಡಸ್ಟ್ರಿಗಳ ದೊಡ್ಡ ದೊಡ್ಡ ಸಿನಿಮಾಗಳೇ ‘ಟಾಕ್ಸಿಕ್’ ಜೊತೆಗೆ ಬಾಕ್ಸ್ ಆಫೀಸ್ ಕ್ಲ್ಯಾಷ್ ತಪ್ಪಿಸಿಕೊಳ್ಳಲು ಈಗಿನಿಂದಲೇ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ನಟ, ನನ್ನ ಸಿನಿಮಾವನ್ನು ‘ಟಾಕ್ಸಿಕ್’ ಎದುರೇ ಬಿಡುಗಡೆ ಮಾಡುತ್ತೀನಿ ಎಂದು ಹಠಕ್ಕೆ ಬಿದ್ದಂತಿದೆ.ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದಿನ ವರ್ಷ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಬಹಳ ಹಿಂದೆಯೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ‘ಟಾಕ್ಸಿಕ್’ […]

News

ರಿಚಾ ಘೋಷ್‌ಗೆ ಚಿನ್ನದ ಬ್ಯಾಟ್ ಮತ್ತು ಚೆಂಡು!!: ಈಡನ್ ಗಾರ್ಡನ್ಸ್‌ನಲ್ಲಿ ನೀಡಿ ಸನ್ಮಾನಿಸಲಿರುವ ಸೌರವ್ ಗಂಗೂಲಿ.

ಕೊಲ್ಕತ್ತಾ : ಈ ವಾರಾಂತ್ಯದಲ್ಲಿ ಅದ್ದೂರಿಯಾಗಿ ತವರಿಗೆ ಮರಳಲಿರುವ ರಿಚಾ ಘೋಷ್ ಅವರಿಗೆ, 2025 ರ ಮಹಿಳಾ ವಿಶ್ವಕಪ್ ಗೆಲುವಿನಲ್ಲಿನ ಗಮನಾರ್ಹ ಪಾತ್ರಕ್ಕಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ ಸನ್ಮಾನಿಸಲಿದೆ. ಪಂದ್ಯಾವಳಿಯ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾದ ವಿಕೆಟ್ ಕೀಪರ್-ಬ್ಯಾಟರ್ ಅವರನ್ನು ನವೆಂಬರ್ 8 ರ ಶನಿವಾರ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಒತ್ತಡದ ಪರಿಸ್ಥಿತಿಯಲ್ಲೂ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ 21 ವರ್ಷದ ಆಟಗಾರನಿಗೆ ಈ ಕಾರ್ಯಕ್ರಮದ ಭಾಗವಾಗಿ ಚಿನ್ನದ ಲೇಪಿತ […]

News

ಬಿಜೆಪಿ ಮತಗಳ್ಳತನದಲ್ಲಿ ರಾಹುಲ್ ಗಾಂಧಿ ತೋರಿಸಿದ್ದ ಬ್ರೆಜಿಲ್ ಮಹಿಳೆ ಪ್ರತಿಕ್ರಿಯೆ: ಇದು ನನ್ನ ಹಳೆಯ ಫೋಟೋ.!!

ಹೊಸದಿಲ್ಲಿ‌ :ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಮೂರನೇ ಬಾರಿ ಹೈಡ್ರೋಜನ್ ಬಾಂಬ್, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪದಲ್ಲಿ ತೋರಿಸಿದ್ದ ಬ್ರೆಝಿಲ್ ಮಾಡೆಲ್ ಲಾರಿಸ್ಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಳೆಯ ಫೋಟೋ ವೈರಲ್ ಆಗಿರುವ ಕುರಿತು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿ ಬಿಜೆಪಿ ಚುನಾವಣಾ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. ಮತದಾರರ ಪಟ್ಟಿಗಳಲ್ಲಿ ಒಂದೇ ಮಹಿಳೆಯ ಫೊಟೋ ಹಲವು ಬಾರಿ ಕಾಣಿಸಿಕೊಂಡಿದೆ, “ಇದು ಯಾರು?” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪ್ರದರ್ಶಿಸಿದ್ದರು. […]

Sports

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಶಮಿ ಔಟ್  ರಿಷಬ್ ಪಂತ್ ಗೆ ಮತ್ತೆ ಅವಕಾಶ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಫಿಟ್ನೆಸ್ ಕೊರತೆ ಕಾರಣದಿಂದ ಇತ್ತೀಚೆಗೆ ತಂಡದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ ಅವರನ್ನು ತಂಡ ಆಯ್ಕೆ ಮಾಡಿಕೊಂಡಿಲ್ಲ. ಅವರೊಂದಿಗೆ ತಂಡದಲ್ಲಿದ್ದ ಪ್ರಸಿದ್ಧ್ ಕೃಷ್ಣ ಅವರನ್ನೂ ತಂಡದಿಂದ ಡ್ರಾಪ್ ಮಾಡಲಾಗಿದೆ. ಬಂಗಾಳದ ವೇಗಿ ಆಕಾಶ್ ದೀಪ್ ಅವರಿಗೆ ಅವಕಾಶ ಕೊಡಲಾಗಿದೆ. ಮುಂಬೈ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ಇದೇ ನ. 14ರಿಂದ ಆರಂಭವಾಗುವ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕೆಲಕಾಲ ತಂಡದಿಂದ ದೂರವಿದ್ದ ವಿಕೆಟ್ ಕೀಪರ್-ಕಂ-ಬ್ಯಾಟ್ಸ್ […]

GULF News

ಮೋದಿ ವಿರೋಧಿಯಾಗಿದ್ದ ಭಾರತೀಯ ಮೂಲದ ಯುವಕ “ಝೊಹ್ರಾನ್ ಮಮ್ದಾನಿಗೆ” ನ್ಯೂಯಾರ್ಕ್‌ನ ಮೇಯರ್ ಪಟ್ಟ..!!

ಇಸ್ರೇಲ್ ನರಮೇಧವನ್ನು ತೀವ್ರವಾಗಿ ವಿರೋಧಿಸಿದ್ದ, “2002ರಲ್ಲಿ ಮೋದಿ ಗುಜರಾತ್‌ನಲ್ಲಿ ನಡೆಸಿದ್ದ ನರಹತ್ಯೆ ಘೋರ ಅಪರಾಧ!!” ಎಂದು ಖಂಡಿಸಿದ್ದ , ಭಾರತೀಯ ಮೂಲದ ಅಮೇರಿಕಾದ ಶ್ರೇಷ್ಠ ಎಡಪಂಥೀಯ ಹೋರಾಟಗಾರ “ಝೊಹ್ರಾನ್ ಮಮ್ದಾನಿ” ವಿಶ್ವದ ಶಕ್ತಿಶಾಲಿ ನಗರಗಳಲ್ಲೊಂದಾದ “ನ್ಯೂಯಾರ್ಕ್ ಸಿಟಿ”ಯ ಮೇಯರ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಮೂಲದ ಝೋಹ್ರಾನ್, ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಶಿಕ್ಷಣತಜ್ಞ ಮಹಮೂದ್ ಮಮ್ದಾನಿಯವರ ಪುತ್ರ.

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft