News

ಹತ್ತು ನಿಮಿಷಗಳಲ್ಲಿ ಡೆಲಿವಲಿ’ ಎಂಬ ಸೇವೆ , ಜಾಹಿರಾತುಗಳನ್ನು ರದ್ದುಗೊಳಿಸಬೇಕು ; ರಾಘವ್ ಚಡ್ಡಾ!!

“ಡೆಲಿವರಿ ಬಾಯ್‌‌ಗಳು ರೋಬೋಟ್‌ಗಳಲ್ಲ , ಇವರು ಸಹ ಯಾರೋ ಒಬ್ಬರ ತಂದೆ, ಗಂಡ, ಸಹೋದರ ಅಥವಾ ಮಗ. ಸದನವು ಅವರ ಬಗ್ಗೆ ಯೋಚಿಸಬೇಕು ,ಅವರೂ ಮನುಷ್ಯರೇ. ಈ 10 ನಿಮಿಷದ ಡೆಲಿವರಿ ಎಂಬ ಸೇವೆಯನ್ನೇ ನಿಲ್ಲಿಸಬೇಕು” ಎಂದು ಸಂಸದ ರಾಘವ್ ಚಡ್ಡಾ ಮಹತ್ವದ ಹೇಳಿಕೆ!!

GULF News

Japan Earthquake: ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, 30 ಮಂದಿಗೆ ಗಾಯ

ಜಪಾನ್, ಡಿಸೆಂಬರ್ 09: ಉತ್ತರ ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ನೆಲಸಮಗೊಂಡಿವೆ. ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ 11.15 ಕ್ಕೆ ಭೂಕಂಪ ಸಂಭವಿಸಿದೆ. ಹಲವು ವಿಡಿಯೋಗಳು ವೈರಲ್ ಆಗಿವೆ.ಹಚಿನೋಹೆಯ ಹೋಟೆಲ್‌ನಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಇವಾಟೆ ಪ್ರಿಫೆಕ್ಚರ್‌ನ ಕುಜಿ ಬಂದರಿನಲ್ಲಿ 70 ಸೆಂ.ಮೀ.ವರೆಗಿನ ಸುನಾಮಿ ಅಲೆಗಳು ಎದ್ದಿವೆ.ಮುನ್ನೆಚ್ಚರಿಕೆಯಾಗಿ ದುರ್ಬಲ ಪ್ರದೇಶಗಳಲ್ಲಿರುವ ನಿವಾಸಿಗಳು ಎತ್ತರದ ಪ್ರದೇಶಗಳಿಗೆ […]

News

ಮಂಗಳೂರು: ಆನ್‌ಲೈನ್ ಹೂಡಿಕೆ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ವಿದ್ಯಾರ್ಥಿ !!

ಹೋಮಿಯೋಪತಿ ಶಿಕ್ಷಣದ ಜತೆ ಪೌರೋಹಿತ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಆನ್‌ಲೈನ್ ಮೂಲಕ 31.99 ಲಕ್ಷ ರೂ. ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sports

ಭರ್ಜರಿ ಸೆಂಚುರಿ ಸಿಡಿಸಿ ಪಂದ್ಯ ಗೆಲ್ಲಿಸಿದ ಸಾಯಿ ಸುದರ್ಶನ್

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ಸಾಯಿ ಸುದರ್ಶನ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ತಮಿಳುನಾಡು ಹಾಗೂ ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ತಂಡದ ಬ್ಯಾಟರ್​ಗಳು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿದ್ದರು. 184 ರನ್​ಗಳ ಕಠಿಣ ಗುರಿ ಬೆನ್ನತ್ತಿದ ತಮಿಳುನಾಡು ಪರ ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಆಕರ್ಷಕ ಬ್ಯಾಟಿಂಗ್​ನೊಂದಿಗೆ ಗಮನ […]

Health +

ಚಳಿಗಾಲದಲ್ಲಿ ಬರುವ ಹಲ್ಲು, ಗಂಟಲು ನೋವಿನಿಂದ ಪರಿಹಾರ ಕಂಡುಕೊಳ್ಳಲು ಈ ಸುಲಭ ಟ್ರಿಕ್ ಪಾಲಿಸಿ

ಡಿಸೆಂಬರ್ ಆರಂಭವಾಗುತ್ತಿದ್ದಂತೆ ಚಳಿ ಇನ್ನಷ್ಟು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಅದರಲ್ಲಿಯೂ ಹವಾಮಾನದಲ್ಲಿನ ಬದಲಾವಣೆ ಹಲ್ಲು ಮತ್ತು ಗಂಟಲು ನೋವು ಮತ್ತು ಕೆರತಕ್ಕೆ ಕಾರಣವಾಗುತ್ತದೆ. ಈ ರೀತಿಯಾದಾಗ ಔಷಧಿಗಳ ಮೊರೆ ಹೋಗುವ ಬದಲು ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ವಸ್ತುಗಳನ್ನು ಔಷಧಿಯಂತೆ ಬಳಸಿಕೊಳ್ಳಬಹುದು ಇದು ಗಂಟಲು ನೋವನ್ನು ನಿವಾರಿಸುವುದಲ್ಲದೆ, ಕೆಮ್ಮು ಮತ್ತು ಶೀತದಿಂದ ಪರಿಹಾರ ನೀಡುತ್ತವೆ. ಹಾಗಾದರೆ ಹಲ್ಲು ಮತ್ತು ಗಂಟಲು ನೋವಿನಿಂದ ಪರಿಹಾರ ಕಂಡುಕೊಳ್ಳಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ […]

News

ವಿದೇಶದಲ್ಲಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ; ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವಾಗಲೇ ಆರೋಪಿಯ ಬಂಧನ !

ಆರೋಪಿ ವಿದೇಶದಲ್ಲಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ , ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .

Business Technology

Kaynes Technology ಷೇರು ಕುಸಿತ: ಮ್ಯೂಚುಯಲ್ ಫಂಡುಗಳಿಗೆ ₹5,000 ಕೋಟಿ ನಷ್ಟ !!

ಡಿಸೆಂಬರ್ 8: ದೇಶದ ಹೂಡಿಕೆ ಮಾರುಕಟ್ಟೆಯನ್ನು ನಡುಗಿಸುವಂತ ಘಟನೆ “Kaynes Technology” ಕಂಪನಿಯ ಷೇರುಗಳಲ್ಲಿ ಭಾರೀ ಕುಸಿತವಾಗಿದ್ದು, ಒಂದೇ ದಿನದೊಳಗೆ ಕಂಪನಿಯ ಮೌಲ್ಯ ಅರ್ಧಕ್ಕಿಂತ ಹೆಚ್ಚು ಇಳಿದಿದೆ. ಈ ಆಕಸ್ಮಿಕ ಕುಸಿತದಿಂದ ದೇಶದ ವಿವಿಧ ಮ್ಯೂಚುಯಲ್ ಫಂಡುಗಳು ಹೊಂದಿದ್ದ ಹೂಡಿಕೆ ಮೌಲ್ಯದಲ್ಲಿ ಸುಮಾರು ಐದು ಸಾವಿರ ಕೋಟಿಗಿಂತ ಹೆಚ್ಚು ನಷ್ಟವಾಗಿರುವುದು ದೃಢಪಟ್ಟಿದೆ. ಕಳೆದ ಕೆಲವು ತಿಂಗಳುಗಳ ಕಾಲ ಮೇಲೇರಿದ್ದ ಈ ಕಂಪನಿಯ ಷೇರುಗಳು, ಅಕ್ಟೋಬರ್ ತಿಂಗಳಲ್ಲಿ ದಾಖಲಿಸಿದ್ದ ಗರಿಷ್ಠ ಮಟ್ಟದಿಂದ ಸುಮಾರು ಐವತ್ತು ಪ್ರತಿಶತ ಕುಸಿದಿವೆ. ಮಾರುಕಟ್ಟೆಯಲ್ಲಿ […]

GULF

ಟ್ರಂಪ್ ಶಾಂತಿ ಪಾಠ ಕೇಳೋರಿಲ್ಲ ಮತ್ತೆ ಥೈಲ್ಯಾಂಡ್, ಕಾಂಬೋಡಿಯಾ ನಡುವೆ ಯುದ್ಧ ಶುರು

ಟ್ರಂಪ್ ಶಾಂತಿ ಪಾಠವನ್ನು ಕೇಳುವವರೇ ಇಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಥೈಲ್ಯಾಂಡ್, ಕಾಂಬೋಡಿಯಾ ಎರಡೂ ದೇಶಗಳೂ ಉಲ್ಲಂಘಿಸಿವೆ. ಥೈಲ್ಯಾಂಡ್ ಕಾಂಬೋಡಿಯಾದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಥಾಯ್ ಮಿಲಿಟರಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯದ ಉಬೊನ್ ರಾಟ್ಚಥಾನಿಯ ಎರಡು ಪ್ರದೇಶಗಳಲ್ಲಿ ನಡೆದ ಹೊಸ ಘರ್ಷಣೆಯಲ್ಲಿ ಒಬ್ಬ ಥಾಯ್ ಸೈನಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಥಾಯ್ ಸೇನೆಯ ಹೇಳಿಕೆ ತಿಳಿಸಿದೆ. ಥೈಲ್ಯಾಂಡ್, […]

ಸಿನಿಮಾ

ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ; ಕೋರ್ಟ್ ತೀರ್ಪು

ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಲಾಗಿದೆ. ಆದರೆ ಇದೇ ಪ್ರಕರಣದ ಪ್ರಮುಖ 6 ಆರೋಪಿಗಳು ತಪ್ಪು ಮಾಡಿರುವುದು ಸಾಬೀತಾಗಿದೆ. ಡಿ.12ಕ್ಕೆ ಶಿಕ್ಷೆ ಪ್ರಕಟ ಆಗಲಿದೆ. 2017ರಿಂದ ಇಲ್ಲಿಯ ತನಕ ಒಟ್ಟು 261 ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಇಂದು (ಡಿ.8) ತೀರ್ಪು ನೀಡಿದೆ. ಖ್ಯಾತ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ (Malayalam Actor Dileep) ನಿರ್ದೋಷಿ ಎಂದು ಕೇರಳ ಕೋರ್ಟ್ ತೀರ್ಪು ನೀಡಿದೆ. 2017ರಲ್ಲಿ […]

Business

ನೆಟ್​ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್​ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?

Why Indian film industry worried over Netflix acquiring Warner Bros: ವಾರ್ನರ್ ಬ್ರೋಸ್ ಡಿಸ್ಕವರಿ ಸಂಸ್ಥೆಯನ್ನು ನೆಟ್​ಫ್ಲಿಕ್ಸ್ ಖರೀದಿಸಲಾಗುತ್ತಿರುವ ಸುದ್ದಿಗೆ ಭಾರತದ ಮಲ್ಟಿಪ್ಲೆಕ್ಸ್​ಗಳು ಆತಂಕಗೊಂಡಿವೆ. ಈ ಬೆಳವಣಿಗೆಯಿಂದ ಚಿತ್ರಮಂದಿರಗಳಿಗೆ ಹಿನ್ನಡೆಯಾಗಬಹುದು ಎಂಬುದು ಮಲ್ಟಿಪ್ಲೆಕ್ಸ್​ಗಳ ಸಂಘಟನೆಯಾದ ಎಂಎಐ ಹೇಳಿಕೊಂಡಿದೆ. ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಕಂಪನಿಯಾದ ನೆಟ್​ಫ್ಲಿಕ್ಸ್ 83 ಬಿಲಿಯನ್ ಡಾಲರ್​ಗೆ ವಾರ್ನರ್ ಬ್ರೋಸ್ ಅನ್ನು ಖರೀದಿಸುತ್ತಿದೆ. ನವದೆಹಲಿ, ಡಿಸೆಂಬರ್ 8: ವಿಶ್ವದ ನಂಬರ್ ಒನ್ ಸ್ಟ್ರೀಮಿಂಗ್ ಕಂಪನಿ ಎನಿಸಿದ ನೆಟ್​ಫ್ಲಿಕ್ಸ್ (Netflix) ಇದೀಗ ಜಾಗತಿಕ ಚಿತ್ರೋದ್ಯಮ ದೈತ್ಯ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft