ಒರಾಕಲ್‌ನಲ್ಲಿ ಮತ್ತೊಮ್ಮೆ ಭಾರೀ ಉದ್ಯೋಗ ಕಡಿತದ ಆತಂಕ; AI ಡೇಟಾ ಸೆಂಟರ್‌ಗಳಿಗೆ ಹಣ ಹೊಂದಿಸಲು 30 ಸಾವಿರ ಉದ್ಯೋಗಗಳಿಗೆ ಕತ್ತರಿ?
- BY Irshad
- September 1, 2026
- 0 Comments
ನವದೆಹಲಿ, ಸೆ. 1: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಜಾಗತಿಕ ಸಾಫ್ಟ್‌ವೇರ್ ದಿಗ್ಗಜ ಇದೀಗ ಉದ್ಯೋಗ ಕಡಿತದ ಆತಂಕ ಎದುರಿಸುತ್ತಿದೆ. AI ಡೇಟಾ ಸೆಂಟರ್‌ಗಳ ವಿಸ್ತರಣೆಗೆ ಅಗತ್ಯವಿರುವ ಭಾರೀ ಹಣಕಾಸು ಒತ್ತಡದ ಹಿನ್ನೆಲೆಯಲ್ಲಿ ಕಂಪನಿಯು 20,000ರಿಂದ 30,000 ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎಂಬ ವರದಿಗಳು ಈ ಹಿಂದೆ ಹೊರಬಿದ್ದಿದ್ದವು. ಇಂಡಿಯಾ ಟುಡೇ ಕೂಡ ಒರಾಕಲ್‌ನ ಭಾರೀ ಉದ್ಯೋಗ ಕಡಿತದ ಹಿಂದಿನ ಕಾರಣವಾಗಿ AI ಹೂಡಿಕೆ ಮತ್ತು ಹೆಚ್ಚುತ್ತಿರುವ ಸಾಲದ ಒತ್ತಡವನ್ನು ಉಲ್ಲೇಖಿಸಿದೆ. […]
ಟಾಕ್ಸಿಕ್‌ನ ಭರ್ಜರಿ ಸದ್ದಿನ ನಡುವೆ ಸೈಲೆಂಟ್ ಆಗಿ ಸದ್ದು ಮಾಡಿದ ‘ಬೆತ್ಲಹೆಂ’; ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್
- BY admin
- September 1, 2026
- 0 Comments
ಬೆಂಗಳೂರು, ಸೆ. 1: ದೊಡ್ಡ ಬಜೆಟ್ ಹಾಗೂ ಕಮರ್ಷಿಯಲ್ ಸಿನಿಮಾಗಳ ಭರ್ಜರಿ ಪ್ರಚಾರದ ನಡುವೆ ಮಲಯಾಳಂ ಚಿತ್ರರಂಗದ ‘ಬೆತ್ಲಹೆಂ ಕುಟುಂಬ ಯುನಿಟ್’ ಸದ್ದಿಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸಿನತ್ತ ಮುನ್ನಡೆಯುತ್ತಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ‘ಪ್ರೇಮಲು’ ಖ್ಯಾತಿಯ ಗಿರೀಶ್ ಎ.ಡಿ. ನಿರ್ದೇಶಿಸಿದ್ದಾರೆ. ಆಗಸ್ಟ್ 21ರಂದು ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರವು ಆರಂಭದಲ್ಲಿ ಸಾಧಾರಣ ವೇಗದಲ್ಲಿ […]
ಚಿನ್ನದ ಬೆಲೆಯಲ್ಲಿ ಮತ್ತೆ ಸಣ್ಣ ಏರಿಕೆ; ಸಣ್ಣ ವ್ಯಾಪಾರಸ್ಥರಿಗೆ ಬೆಲೆ ಏರು ಇಳಿತದ ಚಿಂತೆ! ಇಂದಿನ ದರವೆಷ್ಟು?
- BY admin
- September 1, 2026
- 0 Comments
ಹೊಸದಿಲ್ಲಿ, ಸೆ. 1: ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದ ಇಳಿಕೆಯ ಪ್ರವೃತ್ತಿಯ ನಡುವೆ ಸೆಪ್ಟೆಂಬರ್ 1ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ದಾಖಲಾಗಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗಳು, ಬಡ್ಡಿದರದ ನಿರೀಕ್ಷೆಗಳು, ಆರ್ಥಿಕ ದತ್ತಾಂಶ ಹಾಗೂ ಭೌಗೋಳಿಕ-ರಾಜಕೀಯ ಬೆಳವಣಿಗೆಗಳು ಚಿನ್ನದ ದರದ ಮೇಲೆ ನಿರಂತರ ಪರಿಣಾಮ ಬೀರುತ್ತಿವೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16ರಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ ₹1,56,930ಕ್ಕೆ ತಲುಪಿದೆ. ಆಭರಣಗಳಿಗೆ ಸಾಮಾನ್ಯವಾಗಿ ಬಳಸುವ 22 ಕ್ಯಾರೆಟ್ ಚಿನ್ನದ […]
ಜಲಪ್ರಳಯಕ್ಕೆ ನಲುಗಿದ ನೇಪಾಳ–ಟಿಬೆಟ್: ಸಾವಿರ ದಾಟಿದೆ ಸಾವಿನ ಸಂಖ್ಯೆ! ರಕ್ಷಣಾ ಕಾರ್ಯಕ್ಕೆ ಹೊಸ ಸವಾಲು! ಜಲಸುರಂಗದೊಳಗೆ ಸಿಲುಕಿರುವ 900ಕ್ಕೂ ಅಧಿಕ ಕಾರ್ಮಿಕರ ಸ್ಥಿತಿ ಇನ್ನೂ ದಾರುಣ!
- BY admin
- September 1, 2026
- 0 Comments
ಕಠ್ಮಂಡು, ಸೆ. 1: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಉಂಟಾದ ದುರಂತದಲ್ಲಿ ಸಾವಿನ ಸಂಖ್ಯೆ 1,000 ದಾಟಿದೆ. ನೇಪಾಳದಲ್ಲಿ 987 ಮಂದಿ ಹಾಗೂ ಟಿಬೆಟ್‌ನಲ್ಲಿ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಆಗಸ್ಟ್ 26ರಂದು ಹಿಮನದಿ ಕುಸಿತದಿಂದ ಉಂಟಾದ ಭಾರೀ ಪ್ರವಾಹವು ಹಲವು ಪ್ರದೇಶಗಳಲ್ಲಿ ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಕೊಚ್ಚಿಕೊಂಡು ಹೋಗಿದೆ. ನೇಪಾಳದಲ್ಲಿ 11,814ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವವರ ಪತ್ತೆಗಾಗಿ […]
ಚಿನ್ನ ಖರೀದಿಸಬೇಡಿ, ವಿದೇಶದಲ್ಲಿ ವಿವಾಹ ಆಗಬೇಡಿ! ಪ್ರವಾಸ ಕಡಿಮೆಗೊಳಿಸಿ : ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ವೀಡಿಯೊ ಮೂಲಕ ಕರೆ
- BY admin
- September 1, 2026
- 0 Comments
ಹೊಸದಿಲ್ಲಿ, ಸೆ. 1: ಭಾರತೀಯರು ಅನಗತ್ಯ ವಿದೇಶ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದೆ ವಿದೇಶಗಳಿಂದ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಮಂಗಳವಾರ ವಿಡಿಯೋ ಸಂದೇಶದ ಮೂಲಕ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಪ್ರಗತಿಗೆ ಸ್ವದೇಶಿ ವಸ್ತುಗಳ ಬಳಕೆ ಹಾಗೂ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ಗೆ ತೆರಳಿರುವ ಪ್ರಧಾನಿ ಮೋದಿ, ಭಾರತವು […]






