News ಸಿನಿಮಾ

‘ಸಟ್ಲುಜ್’ ಚಿತ್ರ ಒಟಿಟಿಯಿಂದ ತೆರವು; “ಪೈರೇಟೆಡ್ ಆದರೂ ನೋಡಿ” ಎಂದು ಪ್ರೇಕ್ಷಕರಿಗೆ ಕರೆ ನೀಡಿದ ಅನುರಾಗ್ ಕಶ್ಯಪ್! “ಅವರ” ಇಚ್ಚೆಗಾಗಿ ಕೆಲವು ಕೆಲವು ‘ಸ್ಟೋರಿ’ ಸಿನಿಮಾಗಳಿಗೆ ಪ್ರೋತ್ಸಾಹ! ಕೆಲವು ವಾಸ್ತವದ ಸಿನಿಮಾಗಳಿಗೆ ಕತ್ತರಿಯೇ..!?

ಮುಂಬೈ | ಜುಲೈ 8: ನಟ ದಿಲ್ಜಿತ್ ದೋಸಾಂಜ್ ಅಭಿನಯದ ಸಟ್ಲುಜ್ ಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕಿರುವ ಬೆಳವಣಿಗೆ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿ, ಚಿತ್ರವನ್ನು ತಡೆಹಿಡಿಯುವುದರಿಂದ ಜನರ ಕುತೂಹಲ ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಿದ್ದು, “ಅಗತ್ಯವಿದ್ದರೆ ಪೈರೇಟೆಡ್ ಪ್ರತಿಯ ಮೂಲಕವಾದರೂ ಈ ಚಿತ್ರವನ್ನು ನೋಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ. ಈ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಅನುರಾಗ್ ಕಶ್ಯಪ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಯಾವುದೇ ಕೃತಿಯನ್ನು ನಿಷೇಧಿಸಿದಷ್ಟೂ ಜನ ಅದನ್ನು ನೋಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ನಾನು ಈ ಚಿತ್ರವನ್ನು ನೋಡುವ ಯೋಚನೆಯೇ ಇರಲಿಲ್ಲ. ಆದರೆ ಈಗ ಯಾಕೆ ತೆಗೆದುಹಾಕಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ನೋಡಲೇಬೇಕು” ಎಂದು ಬರೆದುಕೊಂಡಿದ್ದಾರೆ. ನಂತರ ಮತ್ತೊಂದು ಪೋಸ್ಟ್‌ನಲ್ಲಿ ಚಿತ್ರವನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ಸಟ್ಲುಜ್ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಒಟಿಟಿ ವೇದಿಕೆಯಿಂದ ತೆಗೆದುಹಾಕಲ್ಪಟ್ಟಿದ್ದು, ಇದರ ಹಿಂದಿನ ಕಾರಣಗಳ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಈ ಬೆಳವಣಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸೆನ್ಸಾರ್ ಹಾಗೂ ಸೃಜನಶೀಲತೆಯ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಆದರೆ ಕಾಪಿರೈಟ್ ಹೊಂದಿರುವ ಚಿತ್ರದ ಪೈರೇಟೆಡ್ ಪ್ರತಿಗಳನ್ನು ವೀಕ್ಷಿಸುವುದು ಅಥವಾ ಹಂಚಿಕೊಳ್ಳುವುದು ಭಾರತೀಯ ಕಾನೂನಿನ ಪ್ರಕಾರ ಕಾನೂನುಬಾಹಿರವಾಗಿದೆ. ಅನುರಾಗ್ ಕಶ್ಯಪ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದ್ದು, ಚಿತ್ರರಂಗದಲ್ಲಿಯೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft