News ಸಿನಿಮಾ

ಕುಂಭಮೇಳದ ಮೋನಾಲಿಸಾ ಗರ್ಭಿಣಿ: ಪೊಲೀಸರಿಗೆ ಮಾಹಿತಿ ನೀಡಿದ ಪತಿ ಫರ್ಮಾನ್

Monalisa Bhosle: ಇತ್ತೀಚೆಗಷ್ಟೆ ಮೊನಲಿಸಾ, ಫರ್ಮಾನ್ ಎಂಬಾತನನ್ನು ಕೇರಳದಲ್ಲಿ ವಿವಾಹವಾದರು. ಕೇರಳದ ಕೆಲವು ರಾಜಕೀಯ ಮುಖಂಡರು ಮುಂದೆ ನಿಂತು ಇವರ ಮದುವೆ ಮಾಡಿಸಿದ್ದರು. ಆದರೆ ಇದನ್ನು ಲವ್ ಜಿಹಾದ್ ಎಂದು ಮೊನಲಿಸಾ ಕುಟುಂಬದವರು ಆರೋಪಿಸಿದ್ದರು. ಅದಾದ ಬಳಿಕ ಮೊನಲಿಸಾ, ಅಪ್ರಾಪ್ತೆ ಎಂದು ಆರೋಪಿಸಿ ಪತಿ ಫರ್ಮಾನ್ ಮೇಲೆ ಪೋಕ್ಸೊ ಸಹ ದಾಖಲಾಯ್ತು. ಬಳಿಕ ಮೊನಲಿಸಾ ನಾಪತ್ತೆ ಆಗಿದ್ದಾಳೆ ಎಂದು ಪತಿ ಫರ್ಮಾನ್ ಪೊಲೀಸರಿಗೆ ದೂರು ನೀಡಿದರು. ಇದೀಗ ಮೊನಲಿಸಾ ಗರ್ಭಿಣಿ ಎಂದು ಫರ್ಮಾನ್ ಪೊಲೀಸರ ಬಳಿ ಹೇಳಿದ್ದಾರೆ.

ಕುಂಭಮೇಳದ ಮೋನಾಲಿಸಾ ಗರ್ಭಿಣಿ: ಪೊಲೀಸರಿಗೆ ಮಾಹಿತಿ ನೀಡಿದ ಪತಿ ಫರ್ಮಾನ್

ಕುಂಭಮೇಳದಲ್ಲಿ ರುದ್ರಾಕ್ಷಿ ಮಾಡುತ್ತಿದ್ದ ಯುವತಿ ಮೊನಲಿಸಾ ಭೋಸ್ಲೆಯ (Monalisa Bhosle) ಫೋಟೋಗಳು ವೈರಲ್ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿದ್ದ ಯುವತಿ ಇದೀಗ ಒಂದರ ಹಿಂದೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಮೊನಲಿಸಾ, ಫರ್ಮಾನ್ ಎಂಬಾತನನ್ನು ಕೇರಳದಲ್ಲಿ ವಿವಾಹವಾದರು. ಕೇರಳದ ಕೆಲವು ರಾಜಕೀಯ ಮುಖಂಡರು ಮುಂದೆ ನಿಂತು ಇವರ ಮದುವೆ ಮಾಡಿಸಿದ್ದರು. ಆದರೆ ಇದನ್ನು ಲವ್ ಜಿಹಾದ್ ಎಂದು ಮೊನಲಿಸಾ ಕುಟುಂಬದವರು ಆರೋಪಿಸಿದ್ದರು. ಅದಾದ ಬಳಿಕ ಮೊನಲಿಸಾ, ಅಪ್ರಾಪ್ತೆ ಎಂದು ಆರೋಪಿಸಿ ಪತಿ ಫರ್ಮಾನ್ ಮೇಲೆ ಪೋಕ್ಸೊ ಸಹ ದಾಖಲಾಯ್ತು. ಬಳಿಕ ಮೊನಲಿಸಾ ನಾಪತ್ತೆ ಆಗಿದ್ದಾಳೆ ಎಂದು ಪತಿ ಫರ್ಮಾನ್ ಪೊಲೀಸರಿಗೆ ದೂರು ನೀಡಿದರು. ಇದೀಗ ಮೊನಲಿಸಾ ಗರ್ಭಿಣಿ ಎಂದು ಫರ್ಮಾನ್ ಪೊಲೀಸರ ಬಳಿ ಹೇಳಿದ್ದಾರೆ.

ಮೋನಾಲಿಸಾ ಮತ್ತು ಫರ್ಮನ್ ಖಾನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಸ್ಥಳೀಯ ನಾಯಕರು ಮತ್ತು ಪೊಲೀಸರ ಸಮ್ಮುಖದಲ್ಲೇ ಈ ವಿವಾಹ ನಡೆದಿತ್ತು. ಆದರೆ, ಈ ಮದುವೆ ಮೊದಲಿನಿಂದಲೂ ಹಲವು ವಿವಾದಗಳಿಗೆ ಕಾರಣವಾಗಿದೆ. ಮೋನಾಲಿಸಾ ಅವರ ಕುಟುಂಬದವರು ಆಕೆ ಇನ್ನೂ ಅಪ್ರಾಪ್ತ ವಯಸ್ಕಳು (Minor) ಎಂದು ಆರೋಪಿಸಿದ್ದರು. ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯಲ್ಲಿ, ಮದುವೆಯ ಸಮಯದಲ್ಲಿ ಆಕೆಗೆ ಸುಮಾರು 16 ವರ್ಷ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತನ್ನ ಕುಟುಂಬದವರು ತನ್ನನ್ನು ಅಣ್ಣನಂತಿರುವ ಸೋದರ ಸಂಬಂಧಿಯ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದರು ಎಂದು ಮೋನಾಲಿಸಾ ಈ ಹಿಂದೆ ಆರೋಪಿಸಿದ್ದರು. ಆ ಕಷ್ಟದ ಸಮಯದಲ್ಲಿ ಫರ್ಮನ್ ತನಗೆ ಬೆನ್ನೆಲುಬಾಗಿ ನಿಂತರು ಎಂದು ಆಕೆ ಹೇಳಿಕೊಂಡಿದ್ದರು. ಮೋನಾಲಿಸಾ ತಂದೆ ನೀಡಿದ ದೂರಿನ ಮೇರೆಗೆ ಮಧ್ಯಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಕೇರಳ ಹೈಕೋರ್ಟ್ ಫರ್ಮನ್ ಖಾನ್ ಅವರ ಬಂಧನಕ್ಕೆ ಮೇ 20 ರವರೆಗೆ ತಡೆಯಾಜ್ಞೆ ನೀಡಿದೆ.

ಮೊನಲಿಸಾರನ್ನು ವಿಚಾರಣೆಗೆಂದು ಮಧ್ಯ ಪ್ರದೇಶ ಪೊಲೀಸರು ಕರೆದಿದ್ದು, ಮೊನಲಿಸಾ ಗರ್ಭಿಣಿ ಆಗಿರುವ ಕಾರಣ ಪ್ರಯಾಣ ಸಾಧ್ಯವಿಲ್ಲ ಎಂದು ಫರ್ಮಾನ್ ಹೇಳಿದ್ದಾರೆ. ಫರ್ಮಾನ್ ಖಾನ್ ನೀಡಿರುವ ‘ಗರ್ಭಿಣಿ’ ಎಂಬ ಮಾಹಿತಿಯನ್ನು ಪೊಲೀಸರು ಈಗ ವೈದ್ಯಕೀಯ ವರದಿಗಳ ಮೂಲಕ ಪರಿಶೀಲಿಸುತ್ತಿದ್ದಾರೆ. ವರದಿ ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಮೋನಾಲಿಸಾ ಭೋಸಲೆ ಮತ್ತು ಫರ್ಮಾನ್ ಖಾನ್ ಅವರ ಈ ಅಂತರಧರ್ಮೀಯ ವಿವಾಹ ಮತ್ತು ವಯಸ್ಸಿನ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft