Technology

ಸೈಬರ್ ವಂಚನೆಗೆ ಕರ್ನಾಟಕ ಮೈನ್ ಟಾರ್ಗೆಟ್: ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ಬೆಂಗಳೂರು, ಸೆ.16 : ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2024ರಲ್ಲಿ ಒಟ್ಟು 1,01,928 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಶೇ.17.9ರಷ್ಟು ಏರಿಕೆಯಾಗಿದೆ. ಈ ಪೈಕಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಪ್ರಕಾರ, 2024ರಲ್ಲಿ ಕರ್ನಾಟಕದಲ್ಲಿ ಒಟ್ಟು 21,993 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 27,230 ಪ್ರಕರಣಗಳೊಂದಿಗೆ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕದ ಬಳಿಕ ಉತ್ತರ ಪ್ರದೇಶದಲ್ಲಿ 11,073, ಮಹಾರಾಷ್ಟ್ರದಲ್ಲಿ 9,922 ಹಾಗೂ ಬಿಹಾರದಲ್ಲಿ 6,380 ಪ್ರಕರಣಗಳು ದಾಖಲಾಗಿವೆ.

ದೇಶಾದ್ಯಂತ ದಾಖಲಾಗಿರುವ ಸೈಬರ್ ಅಪರಾಧಗಳಲ್ಲಿ ವಂಚನೆಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಒಟ್ಟು ಪ್ರಕರಣಗಳ ಪೈಕಿ ಶೇ.72.6ರಷ್ಟು ಅಂದರೆ 73,987 ಪ್ರಕರಣಗಳು ವಂಚನೆಯ ಉದ್ದೇಶದವುಗಳಾಗಿವೆ. ಇದರ ಜೊತೆಗೆ 3,190 ಪ್ರಕರಣಗಳು ಆನ್‌ಲೈನ್ ಲೈಂಗಿಕ ಶೋಷಣೆಗೆ ಹಾಗೂ 2,536 ಪ್ರಕರಣಗಳು ಸುಲಿಗೆಗೆ ಸಂಬಂಧಿಸಿವೆ ಎಂದು NCRB ವರದಿ ತಿಳಿಸಿದೆ.

ತಂತ್ರಜ್ಞಾನ ಬಳಕೆ ಹೆಚ್ಚುತ್ತಿರುವಂತೆಯೇ ಆನ್‌ಲೈನ್ ವಂಚನೆಗಳ ಸ್ವರೂಪವೂ ಬದಲಾಗುತ್ತಿದ್ದು, ಸಾರ್ವಜನಿಕರು ಅಪರಿಚಿತ ಲಿಂಕ್‌ಗಳು, ಕರೆಗಳು, ಸಂದೇಶಗಳು ಹಾಗೂ ಅನುಮಾನಾಸ್ಪದ ಆನ್‌ಲೈನ್ ವಹಿವಾಟುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕರ್ನಾಟಕದಲ್ಲಿ ದಾಖಲಾಗಿರುವ 21,993 ಪ್ರಕರಣಗಳ ಅಂಕಿ-ಅಂಶವು ಸೈಬರ್ ಸುರಕ್ಷತೆ ಮತ್ತು ಜನಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft