GULF News

ಮಕ್ಕಾದಲ್ಲೂ ವಾಯುದಾಳಿ ಎಚ್ಚರಿಕೆ: ಸೌದಿಯಲ್ಲಿ ಹೆಚ್ಚಿದ ಹೌದಿ ದಾಳಿ ಆತಂಕ! ಮಕ್ಕಾದಾದ್ಯಂತ ಮೊಳಗಿದ ಅಪಾಯದ ವಾರ್ನಿಂಗ್ ಬೆಲ್!

ಸ್ಥಳ, ದಿನಾಂಕ : ಮಕ್ಕಾ, ಸೆಪ್ಟೆಂಬರ್ 16 :
ಯೆಮನ್‌ನ ಹೌದಿ ಪಡೆಗಳು ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ನಡುವೆ ಸೌದಿ ಅರೇಬಿಯಾದ ಪವಿತ್ರ ನಗರ ಮಕ್ಕಾದಲ್ಲೂ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ (Air Raid Alert) ಜಾರಿಗೊಳಿಸಲಾಗಿದೆ. ಮಕ್ಕಾ, ಜೆಡ್ಡಾ ಮತ್ತು ತಾಯಿಫ್ ನಗರಗಳಲ್ಲಿ ಮಂಗಳವಾರ ತುರ್ತು ಭದ್ರತಾ ಎಚ್ಚರಿಕೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದರು. ಕೆಲವೇ ನಿಮಿಷಗಳ ಬಳಿಕ ಎಚ್ಚರಿಕೆಯನ್ನು ಹಿಂಪಡೆಯಲಾಗಿತ್ತು.

ಇದರ ಬೆನ್ನಲ್ಲೇ, ಮಕ್ಕೆ ನಗರದ ದಕ್ಷಿಣ ಭಾಗದಲ್ಲಿ ಹೌದಿ ಪಡೆಗಳಿಗೆ ಸೇರಿದ ಡ್ರೋನ್‌ವೊಂದನ್ನು ಸೌದಿ ವಾಯು ರಕ್ಷಣಾ ವ್ಯವಸ್ಥೆ ಪತ್ತೆಹಚ್ಚಿ ಹೊಡೆದುರುಳಿಸಿದೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ. ಡ್ರೋನ್ ಮಕ್ಕಾದ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ಅದನ್ನು ತಡೆದಿರುವುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ 2017ರ ಬಳಿಕ ಮಕ್ಕಾ ಪ್ರದೇಶವನ್ನು ಗುರಿಯಾಗಿಸಿಕೊಂಡ ಎರಡನೇ ಪ್ರಯತ್ನ ಎಂದು ಸೌದಿ ಒಕ್ಕೂಟ ಆರೋಪಿಸಿದೆ.

ಹೌತಿ ಸಂಘಟನೆ ಮಾತ್ರ ಮಕ್ಕಾ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿ ಸೌದಿ ಆರೋಪವನ್ನು ನಿರಾಕರಿಸಿದೆ. ಮತ್ತೊಂದೆಡೆ, ಸೌದಿ ಅರೇಬಿಯಾದ ಖಮೀಸ್ ಮುಶೈತ್, ಅಬ್ಹಾ ಮತ್ತು ತಾಯಿಫ್ ಪ್ರದೇಶಗಳ ಮೇಲೆ ನಡೆದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಲ್ಲಿ 13 ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ದಾಳಿಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಹೌತಿಗಳ ವಿರುದ್ಧ “ದೃಢವಾಗಿ” ಪ್ರತಿಕ್ರಿಯಿಸುವುದಾಗಿ ಎಚ್ಚರಿಸಿದೆ.

ಪಶ್ಚಿಮ ಯೆಮನ್‌ನ ರೆಡ್ ಸೀ ಕರಾವಳಿ ಮತ್ತು ಬಾಬ್ ಎಲ್-ಮಂದೆಬ್ ಜಲಸಂಧಿ ಪ್ರದೇಶದಲ್ಲಿ ಹೌತಿ ಪಡೆಗಳ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕ ವ್ಯಕ್ತವಾಗಿದೆ. ಈ ಬೆಳವಣಿಗೆ ಸೌದಿ ಅರೇಬಿಯಾದ ಭದ್ರತೆ ಮಾತ್ರವಲ್ಲದೆ, ರೆಡ್ ಸೀ ಮೂಲಕ ಸಾಗುವ ಇಂಧನ ಮತ್ತು ವಾಣಿಜ್ಯ ಸಾಗಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೊಂದಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft