GULF News

ಫ್ರಾನ್ಸ್‌ನಲ್ಲಿ ತೀವ್ರ ಹವಾಮಾನ: ಬಿಸಿಲಿನ ಝಳದಿಂದ ಪಾರಾಗುವ ಪ್ರಯತ್ನದಲ್ಲಿ 40 ಮಂದಿ ನೀರುಪಾಲು

ಪ್ಯಾರಿಸ್, ಜೂನ್ 24, 2026: ದಾಖಲೆ ಮಟ್ಟದ ತಾಪಮಾನದಿಂದ ಕಂಗೆಟ್ಟಿರುವ ಫ್ರಾನ್ಸ್‌ನಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ನದಿ ಮತ್ತು ಕಾಲುವೆಗಳ ನೀರಿಗೆ ಇಳಿದಿದ್ದವರ ಪೈಕಿ ಕನಿಷ್ಠ 40 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಫ್ರಾನ್ಸ್ ಪ್ರಧಾನಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜಾಗತಿಕ ಸರಾಸರಿ ತಾಪಮಾನದ ದುಪ್ಪಟ್ಟು ಉಷ್ಣಾಂಶದಿಂದಾಗಿ ಇಡೀ ಯೂರೋಪ್ ಖಂಡವೇ ಪ್ರಸ್ತುತ ತೀವ್ರ ಹವಾಮಾನ ವೈಪರೀತ್ಯವನ್ನು ಎದುರಿಸುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

​ಫ್ರಾನ್ಸ್‌ನಲ್ಲಿ ಮಂಗಳವಾರ ದಾಖಲೆಯ 44.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ದೇಶದ ಒಟ್ಟು 54 ಇಲಾಖೆಗಳಿಗೆ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಬುಧವಾರದ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ರೆಡ್ ಅಲರ್ಟ್ ಘೋಷಿಸಲಾದ ಇಲಾಖೆಗಳ ಸಂಖ್ಯೆ 58ಕ್ಕೇರಿದೆ. ಅಸಹನೀಯ ಸೆಖೆಯಿಂದ ಮುಕ್ತಿ ಪಡೆಯುವ ಧಾವಂತದಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿ ಜಲಮೂಲಗಳತ್ತ ಧಾವಿಸುತ್ತಿರುವುದು ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ.

​ಈ ಅಭೂತಪೂರ್ವ ಉಷ್ಣಾಂಶದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಶಾಲೆಗಳನ್ನು ಮುಚ್ಚಲಾಗಿದ್ದು, ಸಾರಿಗೆ ವ್ಯವಸ್ಥೆ ಕೂಡ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಐಫೆಲ್ ಟವರ್ ಸೇರಿದಂತೆ ಪ್ರಮುಖ ಸಾರ್ವಜನಿಕ ಮತ್ತು ಪ್ರವಾಸಿ ಕೇಂದ್ರಗಳನ್ನು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಫ್ರಾನ್ಸ್ ಮಾತ್ರವಲ್ಲದೆ ನೆರೆಹೊರೆಯ ಬ್ರಿಟನ್, ಇಟಲಿ, ಸ್ವಿಟ್ಜರ್‌ಲೆಂಡ್ ಮತ್ತು ಸ್ಪೇನ್ ದೇಶಗಳಲ್ಲೂ ತಾಪಮಾನವು ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ.

​ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಫ್ರಾನ್ಸ್‌ನ ಕ್ರೀಡಾ ಸಚಿವೆ ಮರೀನಾ ಫೆರಾರಿ ಅವರು, ಬಿಸಿಲಿನ ಬೇಗೆಯಿಂದ ಪಾರಾಗಲು ಸಾರ್ವಜನಿಕರು ಪಡುತ್ತಿರುವ ತವಕವನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಯಾವುದೇ ಮುನ್ನೆಚ್ಚರಿಕೆ ಇಲ್ಲದ ಅನಧಿಕೃತ ಹಾಗೂ ಅಪಾಯಕಾರಿ ಜಲಪ್ರದೇಶಗಳಲ್ಲಿ ಈಜಲು ಮುಂದಾಗಬಾರದು ಮತ್ತು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft