ಶಿವಣ್ಣನ ‘ಕೂರ್ಮಾವತಾರ’ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ; ಪೌರಾಣಿಕತೆ, ಆ್ಯಕ್ಷನ್ ಝಲಕ್‌ನಿಂದ ಸಿನಿರಸಿಕರಲ್ಲಿ ಹೆಚ್ಚಿದ ನಿರೀಕ್ಷೆ
- BY admin
- September 4, 2026
- 0 Comments
ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಕೂರ್ಮಾವತಾರ’ದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪೌರಾಣಿಕತೆ, ಆಧ್ಯಾತ್ಮಿಕತೆ ಹಾಗೂ ಅದ್ಧೂರಿ ಆ್ಯಕ್ಷನ್ ಅಂಶಗಳೊಂದಿಗೆ ಮೂಡಿಬಂದಿರುವ ಟೀಸರ್ ಚಿತ್ರ ಹೇಗಿರಲಿದೆ ಎಂಬ ನಿರೀಕ್ಷೆ ಹೆಚ್ಚಿಸಿದೆ. ಹರ್ಷವರ್ಧನ್ ಕಡಿಯಾಲ ನಿರ್ದೇಶನದ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಭಿನ್ನ ಯೋಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಸುತ್ತಲಿನ ರಹಸ್ಯವೇ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ. ವಿಷ್ಣುವಿನ ಕೂರ್ಮಾವತಾರದ ಪೌರಾಣಿಕ ಹಿನ್ನೆಲೆಯನ್ನು ಆಧುನಿಕ ಕಥಾಹಂದರದೊಂದಿಗೆ ಬೆಸೆಯುವ ಪ್ರಯತ್ನವನ್ನು ಚಿತ್ರತಂಡ ಮಾಡಿರುವುದು ಟೀಸರ್‌ನಲ್ಲಿ ಗೋಚರಿಸುತ್ತದೆ. […]
ಏಷ್ಯನ್ ಗೇಮ್ಸ್ :ವಿ ವಿ ಎಸ್ ಲಕ್ಷ್ಮಣ್‌ಗೆ ಭಾರತ ತಂಡದ ಕೋಚ್ ಸಾರಥ್ಯ; ಗೌತಮ್ ಗಂಭೀರ್ ಮುಂದಿನ ಹಾದಿ ಏನು?
- BY admin
- September 4, 2026
- 0 Comments
ನವದೆಹಲಿ, ಸೆಪ್ಟೆಂಬರ್ 4: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಕ ಮಾಡಲಾಗಿದೆ. ಇದು ಶಾಶ್ವತ ಮುಖ್ಯ ಕೋಚ್ ನೇಮಕವಲ್ಲ; ಏಷ್ಯನ್ ಗೇಮ್ಸ್‌ಗಾಗಿ ಮಾತ್ರ ಲಕ್ಷ್ಮಣ್ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಏಷ್ಯನ್ ಗೇಮ್ಸ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಏಕದಿನ ಸರಣಿ ಒಂದೇ ಅವಧಿಯಲ್ಲಿ ನಡೆಯುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. […]
ಮಳೆ ಕೈಕೊಟ್ಟ ಬೆನ್ನಲ್ಲೇ ರಾಜ್ಯದಲ್ಲಿ ‘ಮೋಡ ಬಿತ್ತನೆ’ಗೆ ಚಾಲನೆ! ಹೇಗೆ ನಡೆಯಲಿದೆ ಪ್ರಕ್ರಿಯೆ?
- BY Irshad
- September 4, 2026
- 0 Comments
ಬೆಂಗಳೂರು, ಸೆ. 4: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿಯನ್ನು ಎದುರಿಸುವ ಉದ್ದೇಶದಿಂದ ರಾಜ್ಯ ಸರಕಾರ ಮಹತ್ವಾಕಾಂಕ್ಷಿ ‘ಮೋಡ ಬಿತ್ತನೆ’ ಯೋಜನೆಗೆ ಶುಕ್ರವಾರ ಚಾಲನೆ ನೀಡಿದೆ. ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಮೋಡ ಬಿತ್ತನೆಗೆ ಸಿದ್ಧಪಡಿಸಿರುವ ವಿಶೇಷ ಲಘು ವಿಮಾನಕ್ಕೆ ಚಾಲನೆ ನೀಡಿದರು. ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗದಿದ್ದರೆ ಮುಂದಿನ ಜೂನ್‌ವರೆಗೂ ಕುಡಿಯುವ […]
ನೇಪಾಳ ಪ್ರವಾಹ: 9 ದಿನಗಳ ಬಳಿಕ ಸುರಂಗ ಕುಸಿದ ಮಣ್ಣಿನಡಿಯಿಂದ ಮನುಷ್ಯರ ಶಬ್ದ! ಅಗೆದು ಶೋಧ ಕಾರ್ಯ,ಇಬ್ಬರು ಕಾರ್ಮಿಕರು ಪವಾಡ ಸದೃಶ ಜೀವಂತ ಪಾರು! ಇನ್ನೂ ಹಲವು ಕಾರ್ಮಿಕರು ಸುರಂಗದಡಿಯಲ್ಲಿ..!!
- BY admin
- September 4, 2026
- 0 Comments
ಕಠ್ಮಂಡು, ಸೆ. 4: ನೇಪಾಳದ ರಸುವಾ ಜಿಲ್ಲೆಯಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದ ಬಳಿಕ ತ್ರಿಶೂಲಿ–3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಬರೋಬ್ಬರಿ 9 ದಿನಗಳ ಬಳಿಕ ಶುಕ್ರವಾರ ಜೀವಂತವಾಗಿ ರಕ್ಷಿಸಲಾಗಿದೆ. ಸುರಂಗದೊಳಗೆ ನೀರು, ಮಣ್ಣು ಹಾಗೂ ಅವಶೇಷಗಳು ನುಗ್ಗಿದ್ದರಿಂದ ಕಾರ್ಮಿಕರು ಹೊರಬರಲಾಗದೆ ಸಿಲುಕಿಕೊಂಡಿದ್ದರು. ರಕ್ಷಿಸಲ್ಪಟ್ಟವರನ್ನು ಮೆಕ್ಯಾನಿಕಲ್ ಫೋರ್‌ಮ್ಯಾನ್ ಸಂಜಯ್ ಸಾಹ್ ಹಾಗೂ ಮೆಕ್ಯಾನಿಕಲ್ ಮೇಲ್ವಿಚಾರಕ ಕಬೀರ್ ಮಹಾರ್ಜನ್ ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೂ ಮುನ್ನ ಸುರಂಗದೊಳಗಿನಿಂದ ಜನರ ಧ್ವನಿ ಕೇಳಿಬಂದಿದ್ದು, ರಕ್ಷಣಾ […]
ಸ್ಪೇನ್ : ಲಸಿಗರ ದೋಣಿ ದುರಂತ; 88 ಮಂದಿ ನಾಪತ್ತೆ, 5 ಮೃತ್ಯು! ಉಳಿದ 83 ಮಂದಿಯೂ ಬಲಿಯಾಗಿರುವ ಶಂಕೆ! ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಕೆ!
- BY Irshad
- September 4, 2026
- 0 Comments
ಆಂಧ್ರಪ್ರದೇಶ : ಮಲೇರಿಯಾ ತಡೆಗಟ್ಟಲು ಮಾತ್ರೆ ಸೇವನೆ; 7 ವರ್ಷದ ಬಾಲಕಿ ಮೃತ್ಯು! 50ಕ್ಕೂ ಅಧಿಕ ಮಂದಿ ಅಸ್ವಸ್ಥ ತನಿಖೆಗೆ ಆದೇಶ
- BY Irshad
- September 3, 2026
- 0 Comments







