ಕಾಸರಗೋಡು: ‘ಮೋದಿ ಗುಂಡು ಹಾರಿಸಿದರೂ ವಂದೇ ಮಾತರಂ ಪೂರ್ಣವಾಗಿ ಹಾಡುವುದಿಲ್ಲ’ – ಕಾಂಗ್ರೆಸ್ ಸಂಸದ ರಾಜ್‌ಮೋಹನ್ ಉನ್ನಿಥಾನ್
ಕಾಸರಗೋಡು, 10 ಆಗಸ್ಟ್ 2026: ಸ್ವಾತಂತ್ರ್ಯ ದಿನಾಚರಣೆಯ ಸನ್ನಿಹದಲ್ಲಿ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ಸಂಪೂರ್ಣ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದ ವಿರುದ್ಧ ಕಾಸರಗೋಡಿನ ಕಾಂಗ್ರೆಸ್ ಸಂಸದ ರಾಜ್‌ಮೋಹನ್ ಉನ್ನಿಥಾನ್ ತೀವ್ರ ವಾಗ್ದಾಳಿ ನಡೆಸಿದ್ದು, ಹೊಸ ರಾಜಕೀಯ ಚರ್ಚೆಗೆ ಕಾರಣರಾಗಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದರೂ ಸರಿ, ಈ ಜನ್ಮದಲ್ಲಿ ಕೇರಳದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಲು ಸಾಧ್ಯವೇ ಇಲ್ಲ” ಎಂದು ಉನ್ನಿಥಾನ್ […]





