ಅಮೆರಿಕದ ಖ್ಯಾತ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ನಿಧನ
ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ ‘ಅಕ್ಕರೆಯ ನ್ಯಾಯಾಧೀಶ’ ಎಂದು ಜನಪ್ರಿಯರಾಗಿದ್ದ ಫ್ರಾಂಕ್ ಕ್ಯಾಪ್ರಿಯೊ (88) ಅವರು ಬುಧವಾರ (ಆಗಸ್ಟ್ 20) ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ದೀರ್ಘಕಾಲದ ಹೋರಾಟದ ಬಳಿಕ ನಿಧನರಾದರು. ಅವರ ಸಹಾನುಭೂತಿಯ ನಡವಳಿಕೆ ಮತ್ತು ಮಾನವೀಯ ನ್ಯಾಯದಾನದಿಂದಾಗಿ ‘ಕಾಟ್ ಇನ್ ಪ್ರಾವಿಡೆನ್ಸ್’ ಎಂಬ ಟಿವಿ ಕಾರ್ಯಕ್ರಮದ ಮೂಲಕ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದರು. 1936ರಲ್ಲಿ ರೋಡ್ ಐಲ್ಯಾಂಡ್‌ನಲ್ಲಿ ಇಟಲಿ-ಅಮೆರಿಕನ್ ಕುಟುಂಬದಲ್ಲಿ ಜನಿಸಿದ ಕ್ಯಾಪ್ರಿಯೊ, ತಮ್ಮ ವೃತ್ತಿಜೀವನವನ್ನು ರೋಡ್ ಐಲ್ಯಾಂಡ್‌ನ ಮುಖ್ಯ ಮುನಿಸಿಪಲ್ ನ್ಯಾಯಾಧೀಶರಾಗಿ […]











