News

ಬಿಜೆಪಿ ಮತಗಳ್ಳತನದಲ್ಲಿ ರಾಹುಲ್ ಗಾಂಧಿ ತೋರಿಸಿದ್ದ ಬ್ರೆಜಿಲ್ ಮಹಿಳೆ ಪ್ರತಿಕ್ರಿಯೆ: ಇದು ನನ್ನ ಹಳೆಯ ಫೋಟೋ.!!

ಹೊಸದಿಲ್ಲಿ‌ :ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಮೂರನೇ ಬಾರಿ ಹೈಡ್ರೋಜನ್ ಬಾಂಬ್, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪದಲ್ಲಿ ತೋರಿಸಿದ್ದ ಬ್ರೆಝಿಲ್ ಮಾಡೆಲ್ ಲಾರಿಸ್ಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಳೆಯ ಫೋಟೋ ವೈರಲ್ ಆಗಿರುವ ಕುರಿತು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿ ಬಿಜೆಪಿ ಚುನಾವಣಾ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. ಮತದಾರರ ಪಟ್ಟಿಗಳಲ್ಲಿ ಒಂದೇ ಮಹಿಳೆಯ ಫೊಟೋ ಹಲವು ಬಾರಿ ಕಾಣಿಸಿಕೊಂಡಿದೆ, “ಇದು ಯಾರು?” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪ್ರದರ್ಶಿಸಿದ್ದರು. […]

Sports

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಶಮಿ ಔಟ್  ರಿಷಬ್ ಪಂತ್ ಗೆ ಮತ್ತೆ ಅವಕಾಶ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಫಿಟ್ನೆಸ್ ಕೊರತೆ ಕಾರಣದಿಂದ ಇತ್ತೀಚೆಗೆ ತಂಡದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ ಅವರನ್ನು ತಂಡ ಆಯ್ಕೆ ಮಾಡಿಕೊಂಡಿಲ್ಲ. ಅವರೊಂದಿಗೆ ತಂಡದಲ್ಲಿದ್ದ ಪ್ರಸಿದ್ಧ್ ಕೃಷ್ಣ ಅವರನ್ನೂ ತಂಡದಿಂದ ಡ್ರಾಪ್ ಮಾಡಲಾಗಿದೆ. ಬಂಗಾಳದ ವೇಗಿ ಆಕಾಶ್ ದೀಪ್ ಅವರಿಗೆ ಅವಕಾಶ ಕೊಡಲಾಗಿದೆ. ಮುಂಬೈ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ಇದೇ ನ. 14ರಿಂದ ಆರಂಭವಾಗುವ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕೆಲಕಾಲ ತಂಡದಿಂದ ದೂರವಿದ್ದ ವಿಕೆಟ್ ಕೀಪರ್-ಕಂ-ಬ್ಯಾಟ್ಸ್ […]

GULF News

ಮೋದಿ ವಿರೋಧಿಯಾಗಿದ್ದ ಭಾರತೀಯ ಮೂಲದ ಯುವಕ “ಝೊಹ್ರಾನ್ ಮಮ್ದಾನಿಗೆ” ನ್ಯೂಯಾರ್ಕ್‌ನ ಮೇಯರ್ ಪಟ್ಟ..!!

ಇಸ್ರೇಲ್ ನರಮೇಧವನ್ನು ತೀವ್ರವಾಗಿ ವಿರೋಧಿಸಿದ್ದ, “2002ರಲ್ಲಿ ಮೋದಿ ಗುಜರಾತ್‌ನಲ್ಲಿ ನಡೆಸಿದ್ದ ನರಹತ್ಯೆ ಘೋರ ಅಪರಾಧ!!” ಎಂದು ಖಂಡಿಸಿದ್ದ , ಭಾರತೀಯ ಮೂಲದ ಅಮೇರಿಕಾದ ಶ್ರೇಷ್ಠ ಎಡಪಂಥೀಯ ಹೋರಾಟಗಾರ “ಝೊಹ್ರಾನ್ ಮಮ್ದಾನಿ” ವಿಶ್ವದ ಶಕ್ತಿಶಾಲಿ ನಗರಗಳಲ್ಲೊಂದಾದ “ನ್ಯೂಯಾರ್ಕ್ ಸಿಟಿ”ಯ ಮೇಯರ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಮೂಲದ ಝೋಹ್ರಾನ್, ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಶಿಕ್ಷಣತಜ್ಞ ಮಹಮೂದ್ ಮಮ್ದಾನಿಯವರ ಪುತ್ರ.

News

ಡಿಸೆಂಬರ್ 31 ಕ್ಕೆ ಕೊನೆಯ ಗಡುವು ನೀಡಿದ ಸಿಬಿಡಿಟಿ..! ಆಧಾ‌ರ್‌ಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜನವರಿ ಒಂದರಿಂದ ನಿಷ್ಕ್ರಿಯ.

ನವದೆಹಲಿ : 2025ರ ಡಿಸೆಂಬರ್ 31ರೊಳಗೆ ಆಧಾರ್ಗೆ ಲಿಂಕ್ ಆಗದಿರುವ ಪ್ಯಾನ್ ನಂಬರ್ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಸಿಬಿಡಿಟಿ ಹೇಳಿದೆ. ನಿಷ್ಕ್ರಿಯಗೊಂಡ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಅಸಾಧ್ಯವಾಗುತ್ತದೆ. ನಿಷ್ಕ್ರಿಯಗೊಂಡ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಅಸಾಧ್ಯವಾಗುತ್ತದೆ. ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಇದೀಗ ಡಿಸೆಂಬರ್ 31ಕ್ಕೆ ಡೆಡ್ಲೈನ್ ಕೊಟ್ಟಿದೆ. ಹೀಗೆ ಆಧಾರ್ಗೆ ಲಿಂಕ್ ಆಗದ ಪ್ಯಾನ್ ಕಾರ್ಡ್ಗಳು ಮುಂದಿನ ವರ್ಷದಿಂದ ನಿಷ್ಕ್ರಿಯಗೊಳ್ಳಲಿವೆ. […]

News

PU ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮಕ್ಕಳ ದಿನಾಚರಣೆಯಂದೇ ಬಂಪರ್ ಗಿಫ್ಟ್

ಬೆಂಗಳೂರು, (ನವೆಂಬರ್ 05): ಇಷ್ಟು ದಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬಿಸಿಯೂಟ ಯೋಜನೆಯನ್ನು (midday meal scheme )ಇದೀಗ ಪಿಯುಸಿ ವಿದ್ಯಾರ್ಥಿಗಳಿಗೂ (PUC Students) ಸಹ ನೀಡಲು ಕರ್ನಾಟಕ ಸರ್ಕಾರ (Karnataka Governmnet) ಚಿಂತನೆ ನಡೆಸಿದೆ. ಹೌದು…ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ತೀರ್ಮಾನಿಸಿದ್ದು, ನವೆಂಬರ್ 14 ಮಕ್ಕಳ ದಿನಾಚರಣೆದಂದು ಸರ್ಕಾರದಿಂದ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ ಸದ್ಯ 1 ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಈ ಯೋಜನೆಯನ್ನು ಪಿಯು ವಿದ್ಯಾರ್ಥಿಗಳಿಗೆ […]

News

ರಾಷ್ಟ್ರಮಟ್ಟದಲ್ಲಿ ವಂಚನೆಯ ಚುನಾವಣೆ ನಡೆಯುತ್ತಿದೆ: ರಾಹುಲ್ ಗಾಂಧಿ ಸ್ಫೋಟಕ ಆರೋಪ

ಹೊಸದಿಲ್ಲಿ : “ಮತಗಳ್ಳತನ ಈಗ ಸ್ಥಳೀಯ ಮಟ್ಟಕ್ಕೆ ಸೀಮಿತವಾಗದೆ ರಾಷ್ಟ್ರಮಟ್ಟದಲ್ಲಿನಡೆಯುತ್ತಿರುವ ಯೋಜಿತ ಷಡ್ಯಂತ್ರವಾಗಿದೆ” ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿಯೂ ಮತಗಳ್ಳತನ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿ,ಹಾಗೂ ಇವಿಎಂ ದುರುಪಯೋಗದಂತಹ ಘಟನೆಗಳು ನಡೆದಿರುವುದುಬಹಿರಂಗ ಪಡಿಸಿದ್ದಾರೆ “ಅಳಂದ, ಮಹದೇವಪುರದಲ್ಲಿ ಈ ಮಾದರಿಯ ವಂಚನೆ ಕಂಡಿದ್ದವು. ಇದೀಗ ಹರ್ಯಾಣದಲ್ಲೂ ಅದೇ ರೀತಿಯ ಮತಗಳ್ಳತನ ನಡೆದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನೇರ ದಾಳಿ,” ಎಂದು ರಾಹುಲ್ ಗಾಂಧಿ ಯವರು ಪತ್ರಿಕಾ […]

News

ಬ್ಯಾರಿ ಸೆಂಟ್ರಲ್ ಕಮಿಟಿಯ ನೂತನ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್‌ರವರಿಂದ ಬ್ಯಾರಿಗಳಿಗೆ ಸಿಹಿಸುದ್ದಿ: ಬೆಂಗಳೂರಿನಲ್ಲಿ ಶೀಘ್ರದಲ್ಲೇ ‘ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ ಆರಂಭ..!!

ಬೆಂಗಳೂರು : ನಿನ್ನೆ (ಮಂಗಳವಾರ)ಸಂಜೆ ಮೆಜೆಸ್ಟಿಕ್ ನಲ್ಲಿ (ಬಿಸಿಸಿ) ಬ್ಯಾರಿ ಸೆಂಟ್ರಲ್ ಕಮಿಟಿಯ ನೂತನ ಕಛೇರಿಯನ್ನು ಉದ್ಘಾಟನೆಗೈದ ಸ್ಪೀಕರ್ ಯು ಟಿ ಖಾದರ್ ರವರು ಹಲವು ಮಾತುಗಳನ್ನಾಡಿದರು. ಬೆಂಗಳೂರಿನಲ್ಲಿರುವ ಬ್ಯಾರಿಗಳ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ‘ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ ಆರಂಭವಾಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು. ಮಂಗಳವಾರ ಸಂಜೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಲ್‌ನಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರಾವಳಿಯ ಬ್ಯಾರಿ ಸಮುದಾಯದ ಮಂದಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳುವವರು. ಇತ್ತೀಚಿನ […]

ಸಿನಿಮಾ

‘ಡೆವಿಲ್’ ಚಿತ್ರದಲ್ಲಿ ಗಿಲ್ಲಿ ನಟ; ಪೋಸ್ಟರ್ ರಿಲೀಸ್ ಮಾಡಿದ ದರ್ಶನ್ ಟೀಂ

ಬಿಗ್ ಬಾಸ್ ಕನ್ನಡ 12ರಲ್ಲಿ ಮಿಂಚುತ್ತಿರುವ ಗಿಲ್ಲಿ ನಟ, ದರ್ಶನ್ ಅವರ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದರ್ಶನ್ ಜಾಮೀನಿನ ನಂತರ ಶೂಟಿಂಗ್ ಪೂರ್ಣಗೊಳಿಸಿದ್ದು, ಗಿಲ್ಲಿಯ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಡಿಸೆಂಬರ್ 12ಕ್ಕೆ ‘ಡೆವಿಲ್’ ತೆರೆಗೆ ಬರಲಿದ್ದು, ರೇಣುಕಾಸ್ವಾಮಿ ಕೇಸ್ ನಂತರ ದರ್ಶನ್ ಮೊದಲ ಚಿತ್ರ ಇದಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಅವರು ಮಿಂಚುತ್ತಿದ್ದಾರೆ. ಅವರು ಒಳಗೆ ಉತ್ತಮ ಆಟ ಆಡುತ್ತಿರುವಾಗಲೇ ಹೊರಗೆ ಒಂದು ವಿಶೇಷ ವಿಚಾರ ರಿವೀಲ್ ಆಗಿದೆ. […]

News

ನವೆಂಬರ್ ತಿಂಗಳಿಂದ ಯುಎಇಯಲ್ಲಿ ಜಾರಿಯಾದ ಹೊಸ ನಿಯಮಗಳು: ಯುಎಇಯಲ್ಲಿರುವ ಭಾರತೀಯರು ತಿಳಿಯಲೇಬೇಕಾದ ಅಂಶಗಳು!

ಯುಎಇ :ಬ್ಯಾಂಕಿಂಗ್ ಕಾನೂನು ಕಾಯ್ದೆಗೆ ತಿದ್ದುಪಡಿಗಳು ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದಗಳನ್ನು ತಪ್ಪಿಸಲು ಬ್ಯಾಂಕ್ ನಾಮನಿರ್ದೇಶನ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಿವೆ.ನವೆಂಬರ್ , 2025 ರಿಂದ, ಭಾರತದಲ್ಲಿ ಹಲವಾರು ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿದ್ದು, ಇದು ಬ್ಯಾಂಕಿಂಗ್, ಆಧಾರ್ , GST ಮತ್ತು ಕ್ರೆಡಿಟ್ ಕಾರ್ಡ್ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಯುಎಇ ಮೂಲದ ಭಾರತೀಯರು ಗಮನಿಸಬೇಕು, ಏಕೆಂದರೆ ಈ ನವೀಕರಣಗಳು ನಿಮ್ಮ ಭಾರತೀಯ ಖಾತೆಗಳನ್ನು ನೀವು ಹೇಗೆ ನಿರ್ವಹಿಸುತ್ತೀರಿ, ಮನೆಗೆ ಹಣವನ್ನು ಕಳುಹಿಸುತ್ತೀರಿ ಅಥವಾ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತೀರಿ […]

News Sports

ಕರ್ನಾಟಕದಲ್ಲಿ ಪವರ್ ಷೇರಿಂಗ್ ಖಚಿತ..! ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ..?ದ.ಕ ಜಿಲ್ಲೆಯಿಂದ ಖಾದರ್vsಭಂಡಾರಿ ಪೈಪೋಟಿ..?

ನವೆಂಬರ್ ಕ್ರಾಂತಿ : ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಚರ್ಚೆಗಳಿಗೆ ಹೊಸ ವರ್ಷಾರಂಭಕ್ಕೆ ಮುನ್ನವೇ ತೆರೆ ಬೀಳುವ ಸಾಧ್ಯತೆ ನಿಚ್ಚಳವಾಗಿದೆ. ಶೀಘ್ರದಲ್ಲಿ ಅಧಿಕಾರ ಹಂಚಿಕೆ ನಡೆಯುವುದು ಖಚಿತ ಮತ್ತು ಸಿಎಂ ಬದಲಾವಣೆ ನಿಶ್ಚಿತ ಎನ್ನಲಾಗುತ್ತಿದೆ. ಸಿಎಂ‌ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಪದತ್ಯಾಗ ಮಾಡಲಿದ್ದು, ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಿದ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft