Sports

ಮತ್ತೊಮ್ಮೆ ಅತಿವೇಗದ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ !!

ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಟೂರ್ನಿಯ ಭಾರತ ಹಾಗೂ ಯುಎಇ ನಡುವಿನ ಟಿ -ಟ್ವೆಂಟಿ ಪಂದ್ಯದಲ್ಲಿ 32 ಎಸೆತಕ್ಕೆ ಶತಕ ಸಿಡಿಸಿ ವಿಶ್ವದಾಖಲೆ!!ಇದಲ್ಲದೆ ,ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅಭಿಷೇಕ್ ಶರ್ಮಾ (28), ಉರ್ವಿಲ್ ಪಟೇಲ್ (28) ಹಾಗೂ ರಿಷಭ್ ಪಂತ್ (32) ಬಳಿಕ ಟಿ20 ಪಂದ್ಯದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಏಷ್ಯಾ ಕಪ್ […]

Sports

IPL 2026: ಕಳೆದ ವರ್ಷದ ಕಳಪೆ ಪ್ರದರ್ಶನ !! ಸ್ಟಾರ್ ಆಲ್ರೌಂಡರ್ ಲಿಯಾಂ ಲಿವಿಂಗ್‌ಸ್ಟನ್ ಅನ್ನು ಕೈಬಿಟ್ಟ RCB !!

ಬೆಂಗಳೂರು, ನವೆಂಬರ್ 15, 2025:ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಮುನ್ನಡೆ ಸಿದ್ಧತೆಗಳಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಲಿಯಾಂ ಲಿವಿಂಗ್‌ಸ್ಟನ್ ಅವರನ್ನು ತಂಡದಿಂದ ಹೊರಗಿಟ್ಟಿದೆ. ಕಳೆದ ಸೀಸನ್‌ದಲ್ಲಿ ಲಿವಿಂಗ್‌ಸ್ಟನ್ ನೀಡಿದ ಕಳಪೆ ಪ್ರದರ್ಶನ ಮತ್ತು ನಿರೀಕ್ಷೆಗಳನ್ನು ಪೂರೈಸಲು ವಿಫಲವಾದುದು ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. RCB ತಂಡವು 2025ರ ಮಿನಿ-ಔಕ್ಷನ್‌ನಲ್ಲಿ ಸುಮಾರು ₹8.75 ಕೋಟಿಗೆ ಲಿವಿಂಗ್‌ಸ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಹೆಚ್ಚಿನ ಬೆಲೆಗೆ ಸೇರಿದ ಆಟಗಾರನಿಂದ ದೊಡ್ಡ ಮಟ್ಟದ ಮಿಡ್-ಆರ್ಡರ್ […]

Business GULF

162 ಬಿಲಿಯನ್ ಡಾಲರ್ ತಲುಪಿದ ಭಾರತ -ಜಿಸಿಸಿ ನಡುವಿನ ವ್ಯವಹಾರ!! ಮತ್ತಷ್ಟು ಗಟ್ಟಿಯಾದ ಭಾರತ-ಜಿಸಿಸಿ ಸಂಬಂಧ!

ಜಿಸಿಸಿ , ಇಂಡಿಯಾ. ನವೆಂಬರ್ 15 : ಭಾರತ ಮತ್ತು ಗಲ್ಫ್ ಸಮನ್ವಯ ಮಂಡಳಿ (GCC) ರಾಷ್ಟ್ರಗಳ ಮಧ್ಯೆ ವಾಣಿಜ್ಯ ಸಂಬಂಧಗಳು ಕಳೆದ ವರ್ಷ ಗಮನಾರ್ಹವಾಗಿ ವಿಸ್ತರಿಸಿದ್ದು, 2023–24 ಹಣಕಾಸು ವರ್ಷದ ಅಂತ್ಯಕ್ಕೆ ದ್ವಿಪಕ್ಷೀಯ ವ್ಯಾಪಾರವು 162 ಬಿಳಿಯನ್ ಅಮೆರಿಕನ್ ಡಾಲರ್‌ ಮಟ್ಟ ತಲುಪಿದೆ.ಜಿಸಿಸಿ ರಾಷ್ಟ್ರಗಳು-ಸೌದಿ ಅರೇಬಿಯಾ, ಯುಎಇ, ಕುವೈತ್, ಓಮಾನ, ಬಹ್ರೈನ್ ಹಾಗೂ ಖತಾರ್-ಭಾರತದ ಒಟ್ಟು ಅಂತರಾಷ್ಟ್ರೀಯ ವ್ಯಾಪಾರದ ಸುಮಾರು 15% ಪಾಲು ಹೊಂದಿದ್ದು, ದೇಶದ ಅತ್ಯಂತ ದೊಡ್ಡ ವಾಣಿಜ್ಯ ಪಾಲುದಾರಗಳಲ್ಲಿ ಒಂದಾಗಿ ಮುಂದುವರಿದಿವೆ. ತಜ್ಞರ […]

Health +

ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ನಿದ್ರೆ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಊಟ, ತಿಂಡಿಯನ್ನಾದರೂ ಬಿಡಬಹುದು ಆದರೆ ನಿದ್ರೆ ಬಿಡಲು ಸಾಧ್ಯವೇ ಇಲ್ಲ. ಅದರಲ್ಲಿಯೂ ದಿನವಿಡೀ ಸುಸ್ತಾಗಿ ಬಂದ ವ್ಯಕ್ತಿಗೆ ಹಾಸಿಗೆ ನೋಡಿದಾಗ ಆಗುವಂತಹ ಖುಷಿ ಬೇರಾವುದರಲ್ಲಿಯೂ ಆಗಲು ಸಾಧ್ಯವೇ ಇಲ್ಲ. ಆದರೆ ನಿದ್ರೆಯಿಲ್ಲದೆ ಒಬ್ಬ ವ್ಯಕ್ತಿಯು ಎಷ್ಟು ಸಮಯದ ವರೆಗೆ ಎಚ್ಚರವಾಗಿರಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಈ ರೀತಿಯ ಪ್ರಶ್ನೆ ಎಂದಾದರೂ ಬಂದಿದ್ಯಾ? ಇದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೂ ಕೂಡ ಈ ಕುರಿತು ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಹಾಗಾದರೆ ಒಬ್ಬ ವ್ಯಕ್ತಿ ನಿದ್ದೆಯಿಲ್ಲದೆ […]

News

ಮುಧೋಳದಲ್ಲಿ ರೈತರ ಹೋರಾಟ ಸುಖಾಂತ್ಯ !

ಬಾಗಲಕೋಟೆ:ರಿಕವರಿ ಪರಿಗಣಿಸದೆ ಟನ್ ಕಬ್ಬಿಗೆ 3300 ರೂ. ದರ ನೀಡುವುದಾಗಿ ಒಪ್ಪಿಗೆ !!ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿ !ಬಾಕಿ ಹಣ ಪಾವತಿಗೆ ಸಮ್ಮತಿ ಸೂಚಿಸಿದ 4 ಸಕ್ಕರೆ ಕಾರ್ಖಾನೆಗಳು !!ಇದರೊಂದಿಗೆ, ಎಡೆಬಿಡದೆ ಮುಂದುವರೆದಿದ್ದ ರೈತರ ಆಕ್ರೋಶ , ಕಿಚ್ಚು, ಪ್ರತಿಭಟನೆಗಳು ಸುಖಾಂತ್ಯ ಕಂಡಿದೆ.

ಸಿನಿಮಾ

ಬಿಡುಗಡೆಯ ಮೊದಲ ದಿನವೇ ಪ್ರೇಕ್ಷಕರ ಗಮನ ಸೆಳೆದ “ಗತವೈಭವ” ಚಿತ್ರ, ಎಲ್ಲೆಡೆ “ಗತವೈಭವ”ದ ವೈಭವ !!

ಬೆಂಗಳೂರು , ನವೆಂಬರ್ 14: ಗತವೈಭವ ಸಿನಿಮಾ ಇಂದು ಪ್ರೇಕ್ಷಕರ ಮುಂದೆ ತೆರೆ ಕಂಡಿದ್ದು, ಬಿಡುಗಡೆಯ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದೆ. ಬೆಳಗಿನ ಶೋಗಳಿಂದಲೇ ಚಿತ್ರಮಂದಿರಗಳಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು. ಮೊದಲ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಚಿತ್ರದ ವಿಷಯ, ನಿರ್ದೇಶನ ಮತ್ತು ನಟರ ಅಭಿನಯವನ್ನು ಮೆಚ್ಚಿದ್ದಾರೆ. ವೈವಿಧ್ಯಮಯ ಕಥಾಹಂದರ, ಗಟ್ಟಿಯಾದ ಭಾವನಾತ್ಮಕ ಬಿಂಬನೆ ಹಾಗೂ ಮನಸೂರೆಗೊಂಡಿರುವ ತಾಂತ್ರಿಕ ಕೌಶಲ್ಯದಲ್ಲಿ ಸಿನಿಮಾ ತನ್ನದೇ ಛಾಪು ಮೂಡಿಸಿದೆ ಎಂದು ಪ್ರೇಕ್ಷಕರ ಅಭಿಪ್ರಾಯ. […]

GULF

ಯುಎಇ–ಜಿಸಿಸಿ ದೇಶಗಳಲ್ಲಿರುವ ಭಾರತೀಯ ಶಾಲೆಗಳಿಗೆ ಹೊಸ CBSE ಗ್ಲೋಬಲ್ ಪಠ್ಯಕ್ರಮ: 2026ರಿಂದ ಜಾರಿಗೆ !

ಯುಎಇ , ಇಂಡಿಯನ್. ನವೆಂಬರ್ 14 :ಗಲ್ಫ್ ಪ್ರದೇಶದಲ್ಲಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳ ಶಿಕ್ಷಣ ವಲಯದಲ್ಲಿ ಮಹತ್ತರ ಬದಲಾವಣೆಗೆ CBSE ಮುಂದಾಗಿದೆ. 2026ರ ಏಪ್ರಿಲ್‍ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹಾಗೂ ಇತರೆ ಗಲ್ಫ್ ಸಹಕಾರ ಪರಿಷತ್ (GCC) ದೇಶಗಳಲ್ಲಿನ ಎಲ್ಲಾ CBSE ಶಾಲೆಗಳು “CBSE Global Curriculum” ಅನುಸರಿಸಬೇಕಾಗಿದೆ ಎಂದು ಕೇಂದ್ರ ಶಿಕ್ಷಣ ಮಂಡಳಿ ಘೋಷಿಸಿದೆ. ಹೊಸ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿದ್ದು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪಾಠ್ಯಕ್ರಮ […]

News

ಬಿಹಾರ ವಿಧಾನಸಭಾ ಚುನಾವಣೆ: ಭರ್ಜರಿ ಜಯದತ್ತ ಬಿಜೆಪಿ!!

ಬಿಹಾರ , ನವೆಂಬರ್ 14 :ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಇಂದು ಘೋಷಿತವಾಗುತ್ತಲೇ ರಾಜ್ಯದ ರಾಜಕೀಯ ವಾತಾವರಣದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಭರ್ಜರಿ ಗೆಲುವಿನ ದಾಖಲೆಯೊಂದಿಗೆ ಅಧಿಕಾರದತ್ತ ಧೃಡವಾಗಿ ಹೆಜ್ಜೆ ಇಟ್ಟಿದೆ. ಆರಂಭಿಕ ಲೆಕ್ಕಾಚಾರದಿಂದಲೇ ಸ್ಪಷ್ಟವಾಗಿದ್ದ ಮುನ್ನಡೆ ಕೊನೆಯ ಘಟ್ಟದಲ್ಲೂ ಮುಂದುವರಿಯುತ್ತಾ, ಎನ್‌ಡಿಎ 200ಕ್ಕೂ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ ಕೆಲ ವಾರಗಳಿಂದ ನಡೆದ ಬಿರುಸಿನ ಪ್ರಚಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯ ಬೃಹತ್ ರ್ಯಾಲಿಗಳು ಮತ್ತು ಸ್ಥಳೀಯ ಮಟ್ಟದಲ್ಲಿ ನೀಡಲಾಗಿದ್ದ ಅಭಿವೃದ್ಧಿ […]

News

ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ ತಮಿಳುನಾಡು, ಪುದುಚೆರಿಗೂ ಸಂದ ಜಯ : ಡಿ.ಕೆ.ಶಿವಕುಮಾರ್ !

ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಕಷ್ಟ ಕಾಲದಲ್ಲಿ ಅವರ ಪಾಲಿನ ನೀರನ್ನು ಬಿಡಲು ಈ ಯೋಜನೆ ನೆರವಾಗಲಿದೆ. ಹೀಗಾಗಿ, ಸುಪ್ರೀಂ ಕೋರ್ಟಿನ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೆರಿಗೂ ಸಂದ ಜಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

News

385 ಮರಗಳು ತಮ್ಮ ತಾಯಿಯನ್ನು ಕಳೆದುಕೊಂಡಿತು: ಪದ್ಮಶ್ರೀ ಪುರಸ್ಕೃತೆ ‘ಸಾಲುಮರದ’ ತಿಮ್ಮಕ್ಕ ಇನ್ನಿಲ್ಲ !!

ಬೆಂಗಳೂರು , ನವೆಂಬರ್ 14 :ಪರಿಸರವಾದಿ ಹಾಗೂ ಪದ್ಮಶ್ರೀ ಪುರಸ್ಕೃತೆ ‘ಸಾಲುಮರದ’ ತಿಮ್ಮಕ್ಕ ಅವರು ಇಂದು ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ದಿವಂಗತ ಪತಿಯೊಂದಿಗೆ, ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಆಲದ ಮರಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಇದಕ್ಕಾಗಿ ಅವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ತಿಮ್ಮಕ್ಕ ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ಬಿಕ್ಕಳ ಚಿಕ್ಕಯ್ಯ ಅವರನ್ನು ಮದುವೆಯಾದ ನಂತರ, ಅವರು ಮಾಗಡಿ ತಾಲ್ಲೂಕಿನ ಹುಲಿಕಲ್ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft