News Sports

ವಿಂಬಲ್ಡನ್‌ನಲ್ಲಿ ಭಾರತದ ಹೊಸ ಇತಿಹಾಸ: 36 ವರ್ಷಗಳ ಬಳಿಕ ಬಾಲಕರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ಅರವ್ ಪಾಪರ್ಕರ್ ಭರ್ಜರಿ ಎಂಟ್ರಿ

ಭಾರತದ ಯುವ ಟೆನಿಸ್ ಆಟಗಾರ ಅರವ್ ಪಾಪರ್ಕರ್ ವಿಂಬಲ್ಡನ್ ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಪಾನ್‌ನ ರಿಯೋ ತಬಾಟಾ ವಿರುದ್ಧ 6-2, 6-1 ನೇರ ಸೆಟ್‌ಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಅವರು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಈ ಸಾಧನೆಯೊಂದಿಗೆ ಕಳೆದ 36 ವರ್ಷಗಳಲ್ಲಿ ವಿಂಬಲ್ಡನ್ ಜೂನಿಯರ್ ಬಾಲಕರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅರವ್ ಪಾತ್ರರಾಗಿದ್ದಾರೆ. ಈ ಹಿಂದೆ 1990ರಲ್ಲಿ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈ ಸಾಧನೆ ಮಾಡಿದ್ದು, ಬಳಿಕ ಇಷ್ಟು ವರ್ಷಗಳ ನಂತರ ಮತ್ತೊಮ್ಮೆ ಭಾರತೀಯ ಆಟಗಾರ ಈ ಹಂತ ತಲುಪಿರುವುದು ಭಾರತೀಯ ಟೆನಿಸ್‌ಗೆ ಮಹತ್ವದ ಮೈಲಿಗಲ್ಲಾಗಿದೆ.

ಕೇವಲ 18 ವರ್ಷದ ಅರವ್ ಪಾಪರ್ಕರ್ ಈ ಟೂರ್ನಿಯಲ್ಲಿ ಆತ್ಮವಿಶ್ವಾಸಭರಿತ ಪ್ರದರ್ಶನ ನೀಡುತ್ತಿದ್ದು, ತಮ್ಮ ವೇಗದ ಆಟ, ನಿಖರ ಸರ್ವ್ ಹಾಗೂ ಆಕ್ರಮಣಕಾರಿ ಶೈಲಿಯಿಂದ ಎದುರಾಳಿಗಳನ್ನು ಮಣಿಸುತ್ತಿದ್ದಾರೆ. ಕ್ವಾರ್ಟರ್‌ಫೈನಲ್ ಪ್ರವೇಶದೊಂದಿಗೆ ಅಂತರರಾಷ್ಟ್ರೀಯ ಟೆನಿಸ್ ವಲಯದ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

ಅರವ್ ಅವರ ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಭವಿಷ್ಯದಲ್ಲಿ ಭಾರತದ ಟೆನಿಸ್ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿ ಹೊರಹೊಮ್ಮಲಿದ್ದಾರೆ ಎಂಬ ವಿಶ್ವಾಸ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft