Business

ಡ್ರೀಮ್ ಡೀಲ್ ಗ್ರೂಪ್ ; ರಾಣಿಬೆನ್ನೂರು ವಲಯದ ಕಛೇರಿ ಉದ್ಘಾಟನಾ ಸಮಾರಂಭ.

ರಾಣಿಬೆನ್ನೂರು, ಡಿಸೆಂಬರ್ 3 : ಡ್ರೀಮ್ ಡೀಲ್‌ನ ರಾಣಿಬೆನ್ನೂರು ವಲಯದ ಕಚೇರಿ ಭವ್ಯವಾಗಿ ಉದ್ಘಾಟನೆಗೊಂಡಿದೆ .

ಈ ಕಾರ್ಯಕ್ರಮದಲ್ಲಿ , ರಾಣಿಬೆನ್ನೂರು ಶಾಸಕರಾದ ಪ್ರಕಾಶ ಕೆ. ಕೋಳಿವಾಡ, ರಾಣಿಬೆನ್ನೂರು ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಜೆಡಿಎಸ್ ಮುಖಂಡರಾದ ಮಂಜುನಾಥ ಗೌಡ ಶಿವಣ್ಣನವರ, ನಿವೃತ್ತ ಆರ್ಮಿ ಸಿಬ್ಬಂದಿ; ಎಂ.ಡಿ. ಚಿಕ್ಕಣ್ಣನವರ, ಅಕ್ಕಿಮಠ ಅಗಡಿ ಮತ್ತು ವಿರಕ್ತಮಠ ಚಿಕ್ಕೇರೂರು ಮಹಾಸ್ವಾಮಿಗಳಾಗಿರುವ ಶ್ರೀ ಮ.ನಿ.ಪ್ರ ಗುರುಲಿಂಗ , ಜೊತೆಗೆ ಹಲವು ಗಣ್ಯರು ಹಾಗೂ ಸಾಮಾಜಿಕ-ರಾಜಕೀಯ ಮುಖಂಡರು ವಿಶೇಷವಾಗಿ ಹಾಜರಿದ್ದರು.

ಹಲವಾರು ಗಣ್ಯರ ಸಮ್ಮುಖದಲ್ಲಿ ಪ್ರಕಾಶ ಕೆ. ಕೋಳಿವಾಡ ಶಾಸಕರು ರಾಣೇಬೆನ್ನೂರು ಇವರು ಡ್ರೀಮ್ ಡೀಲ್ ರಾಣಿಬೆನ್ನೂರು ವಲಯ ಕಚೇರಿಯ ಉದ್ಘಾಟನೆ ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಶುಭಾರಂಭವನ್ನು ಶ್ರೀ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು ದೀಪ ಬೆಳಗುವ ಮೂಲಕ ನೆರವೇರಿಸಿ ಕಾರ್ಯಕ್ರಮಕ್ಕೆ ಅಧ್ಯಾತ್ಮಿಕ ವಾತಾವರಣವನ್ನು ನೀಡಿದರು.

ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಕಾಶ ಕೆ. ಕೋಳಿವಾಡ; ಮಲ್ಲಿಕಾರ್ಜುನ ಅಂಗಡಿ; ಮಂಜುನಾಥ ಗೌಡ ಶಿವಣ್ಣನವರ; ಎಂ.ಡಿ. ಚಿಕ್ಕಣ್ಣನವರ ಹಾಗೂ ಹಾಜರಾಗಿದ್ದ ಗಣ್ಯರಿಗೆ ಮನೋಜ್ಞ ಅಭಿನಂದನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು ಹಿತೋಪದೇಶ ನೀಡಿ ಸಂತೋಷ ವ್ಯಕ್ತಪಡಿಸಿ ಸಂಸ್ಥೆಯ ಭವಿಷ್ಯ ಅಭಿವೃದ್ಧಿಗೆ ಹಾರೈಕೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಗಯ ಅಡ್ವೈಸರಿ ಬೋರ್ಡ್ ಸದಸ್ಯರಾದ ರಾಜೇಸಾಬ ಸರ್ ,ಸರಿತಾ ಮೇಡಂ ಹಾಗೂ 3KH ಸೀಸನ್ ಡೈರೆಕ್ಟರ್ ಆಗಿರುವ ಆರ್ ಮಲ್ಲಿಕಾರ್ಜುನ್ ಅನೇಕ ನಾಯಕರು ಹಾಗೂ ಸ್ಥಳೀಯ ಸಾಮಾಜಿಕ-ರಾಜಕೀಯ ಮುಖಂಡರು ಉಪಸ್ಥಿತರಿದ್ದು ಉದ್ಘಾಟನಾ ಕಾರ್ಯಕ್ರಮಕ್ಕೆ ಗೌರವದ ಚೈತನ್ಯ ತುಂಬಿದರು.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft