
ಬೆಂಗಳೂರು : ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಮಾನ್ಯವಾಗಿರುವ ಈ ರಿಯಾಯಿತಿಯು 1991-92 ಮತ್ತು 2019-20 ರ ನಡುವೆ ದಾಖಲಾದ ಎಲ್ಲಾ ಟ್ರಾಫಿಕ್ ಇ-ಚಲನ್ಗಳು ಮತ್ತು ಆರ್ಟಿಒ ಪ್ರಕರಣಗಳಿಗೆ ಅನ್ವಯಿಸುತ್ತದೆ. ಹೆಚ್ಚಿನ ವಾಹನ ಮಾಲೀಕರು ತಮ್ಮ ಬಾಕಿ ಹಣವನ್ನು ಪಾವತಿಸಲು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಸಂಚಾರ ಚಲನ್ಗಳ ಮೇಲೆ ಇಂತಹ ರಿಯಾಯಿತಿಯನ್ನು ನೀಡುತ್ತಿರುವುದು ಇದು ಐದನೇ ಬಾರಿಯಾಗಿದೆ. ಸಾವಿರಾರು ವಾಹನ ಮಾಲೀಕರು ಈಗಾಗಲೇ ಬಾಕಿ ಇರುವ ದಂಡವನ್ನು ಪಾವತಿಸಿದ್ದು, ಕೋಟ್ಯಂತರ ರೂಪಾಯಿ ಆದಾಯಕ್ಕೆ ಕಾರಣರಾಗಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಈಗಾಗಲೇ ವಿಧಿಸಿರುವ ದಂಡ ಮೊತ್ತದ ಮೇಲೆ 50 ಶೇಕಡಾ ರಿಯಾಯಿತಿ ನೀಡುವ ನಿರ್ಧಾರಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ದಂಡ ಪಾವತಿಸಲು ವಿಳಂಬ ಆಗಿ ಜಮಾ ಆಗಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ನಾಗರಿಕರಿಗೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಈ ರಿಯಾಯಿತಿಯು ಇಂದಿನಿಂದ , ಅಂದರೆ ನವೆಂಬರ್ 21 ಡಿಸೆಂಬರ್ 12 ರ ವರೆಗೆ ಮಾತ್ರ ಸಾಧ್ಯವಾಗಲಿದ್ದು, ಸವಾರರು ತಮ್ಮ ಬಾಕಿಯಿರುವ ದಂಡವನ್ನು ಆದಷ್ಟು ಬೇಗ ಪಾವತಿಸಿ ಈ ಆಫರನ್ನು ಉಪಯುಕ್ತ ಮಾಡಿಕೊಳ್ಳಬೇಕೆಂದು ಸೂಚಿಸಿದೆ.
ದಂಡ ಪಾವತಿಸಲು ,ಟ್ರಾಫಿಕ್ ಪೊಲೀಸ್ ಇಲಾಖೆಯ ಅಧಿಕೃತ ಪೋರ್ಟಲ್ ಅಥವಾ ಸೇವಾ ಕೇಂದ್ರಗಳನ್ನು ಬಳಸಿಕೊಳ್ಳಬಹುದು. ಹೆಲ್ಮೆಟ್ ಇಲ್ಲದೆ ಸವಾರಿ, ವೇಗ ಮೀರಿಸುವುದು, ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ದಾಖಲೆಗಳ ನವೀಕರಣ ವಿಳಂಬ ಸೇರಿದಂತೆ ಹಲವು ಸಾಮಾನ್ಯ ಪ್ರಕರಣಗಳು ಈ ರಿಯಾಯಿತಿಗೆ ಒಳಪಡಲಿವೆ.



