
ಬೆಳಗಾವಿ :ಕಬ್ಬು ಬೆಲೆ ಹೆಚ್ಚಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿದಂತಹ ಹೋರಾಟಕ್ಕೆಕೊನೆಗೂ ಜಯ ಸಿಕ್ಕಿದಂತಾಗಿದೆ. ರೈತರ ಹೋರಾಟಕ್ಕೆ ಮಣಿದು ರಾಜ್ಯ ಸರಕಾರವು ಬೆಲೆಯನ್ನು ಟನ್ ಗೆ 3300 ಕ್ಕೆ ಏರಿಕೆ ಮಾಡಲು ,ಕೊನೆಗೂ ತೀರ್ಮಾನ ಕೈಗೊಂಡಿದೆ.
ಹಲವು ವರ್ಷಗಳ ಹೋರಾಟಕ್ಕೆ ಜಯ ಸಂದಿದೆಯೆಂದು ರೈತರು ಗುರ್ಲಾಪುರ ಕ್ರಾಸ ಬಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಈಸಂದರ್ಭದಲ್ಲಿ ರೈತ ನಾಯಕರೊಬ್ಬರು ಮಾತನಾಡಿ “ಗುರ್ಲಾಪುರ ರೈತರ ಶಕ್ತಿಯಿಂದ ಇಂದು ರಾಜ್ಯದ ಎಲ್ಲಾ ಕಬ್ಬು ಬೆಳೆಯುವ ರೈತರಿಗೆ ನ್ಯಾಯ ದೊರಕುವಂತಾಗಿದೆ, ಎಲ್ಲಾ ರೈತ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವಲ್ಲೂ ಈ ಹೋರಾಟ ಯಶಸ್ವಿಯಾಗಿದೆ ರೈತರ ಹೋರಾಟದಿಂದ ಸಚಿವರ ಕೈ ನಡುಗಲು ಪ್ರಾರಂಭಿಸಿತ್ತು ಇದು ರೈತರ ಶಕ್ತಿ” ಎಂದಿದ್ದಾರೆ.



