
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ದೋಷಾರೋಪ ನಿಗದಿಯಾಗಿದೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ದೋಷಾರೋಪ ನಿಗದಿಯಾಗಿದೆ. ತನ್ನ ಮೇಲಿನ ನ್ಯಾಯಾಲಯದಲ್ಲಿ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆ, ನವೆಂಬರ್ 10 ರಂದು ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ.
ಹಲವು ಕಾಲದ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಮತ್ತೆ ಜೈಲು ಸೇರಿದ ನಟ ದರ್ಶನ್ ಹಾಗೂ ಪವಿತ್ರಾ ಗೌಡ 79 ದಿನಗಳ ಬಳಿಕ ಮೊದಲ ಬಾರಿ ಬೆಂಗಳೂರು ನಗರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇತರೆ ಆರೋಪಿಗಳು ಕೂಡ ಭಾಗಿಯಾಗಿದ್ದರು.
ಕೋರ್ಟ್ ಅಂಗಳದಲ್ಲಿ ಮತ್ತು ಒಳ ಭಾಗದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಎದುರಾದರು. ಆದರೆ, ಇಬ್ಬರ ನಡುವೆ ಮಾತುಕತೆಯಾಗಿಲ್ಲ.
ಪ್ರತ್ಯೇಕ ಗಾಡಿಯಲ್ಲಿ ದರ್ಶನ್, ಪವಿತ್ರಾ ಗೌಡ ಕರೆತಂದ ಪೊಲೀಸ್
ನಟ ದರ್ಶನ್ ಸೇರಿ ಪುರುಷ ಆರೋಪಿಗಳನ್ನು ಒಂದು ವಾಹನದಲ್ಲಿ ಹಾಗೂ ಪವಿತ್ರಾ ಗೌಡ ಅವರನ್ನು ಪ್ರತ್ಯೇಕ ವಾಹದಲ್ಲಿ ಪರಪ್ಪನ ಅಗ್ರಹಾರದಿಂದ ಕರೆತರಲಾಗಿತ್ತು. ಕೋರ್ಟ್ ವಿಚಾರಣೆ ಮುಗಿದ ಬಳಿಕವು ಪ್ರತ್ಯೇಕ ವಾಹನಗಳಲ್ಲಿಯೇ ಕರೆದೊಯ್ಯಲಾಯಿತು. ಆ ಬಳಿಕ ಮುಚ್ಚಿದ ಕೊಠಡಿಯ ವಿಚಾರಣೆ ನಡೆಸಲಾಯಿತು. ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಒಬ್ಬೊಬ್ಬರ ಹೆಸರನ್ನೇ ಬೆಂಚ್ ಕ್ಲರ್ಕ್ ಕರೆದರು. ಪ್ರಕರಣದ ಆರೋಪಿ 2 ನಟ ದರ್ಶನ್ ಹಾಗೂ ಆರೋಪಿ 1 ಪವಿತ್ರಾ ಗೌಡಗೆ ಒಂದಷ್ಟು ಪ್ರಶ್ನೆಗಳನ್ನು ನ್ಯಾಯಾಧೀಶರು ಕೇಳಿದರು.
ಜಮಾಯಿಸಿದ್ದ ಅಭಿಮಾನಿಗಳು ನಟ ದರ್ಶನ್ ಕೋರ್ಟ್ಗೆ ಹಾಜರಾಗುತ್ತಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೋರ್ಟ್ ಅಂಗಳದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದರ್ಶನ್ ಹೆಸರಿನಲ್ಲಿ ಜೈಕಾರ ಹಾಕಿದರು. ಅಭಿಮಾನಿಗಳ ನಡುವೆ ಆರೋಪಿಗಳನ್ನು ಕರೆದೊಯ್ಯಿಲು ಪೊಲೀಸರು ಹರಸಾಹಸಪಟ್ಟರು.




