Business News

ಐಸ್‌ಕ್ರೀಂ ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಅಂಬಾನಿ: 10 ರೂಪಾಯಿಂದಲೇ ಆರಂಭಿಸುವ ಅಂಬಾನಿ ರಿಲಯನ್ಸ್‌ನ ‘ಬಾಂಬೆ ಕ್ರೀಮರಿ’ ಐಸ್‌ಕ್ರೀಂ ಮಾರುಕಟ್ಟೆಗೆ

ಹೊಸದಿಲ್ಲಿ, ಸೆಪ್ಟೆಂಬರ್ 2: ದೇಶದ ಗ್ರಾಹಕ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇದೀಗ ಐಸ್‌ಕ್ರೀಂ ಕ್ಷೇತ್ರಕ್ಕೂ ಪ್ರವೇಶಿಸಿದೆ. ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ‘ಬಾಂಬೆ ಕ್ರೀಮರಿ’ ಎಂಬ ಹೊಸ ಐಸ್‌ಕ್ರೀಂ ಬ್ರ್ಯಾಂಡ್‌ನ್ನು ಪರಿಚಯಿಸಿದೆ.

‘ಬಾಂಬೆ ಕ್ರೀಮರಿ’ಯನ್ನು ಕೈಗೆಟುಕುವ ದರದ ಪ್ರೀಮಿಯಂ ಡೇರಿ ಬ್ರ್ಯಾಂಡ್ ಆಗಿ ಪರಿಚಯಿಸಲಾಗಿದ್ದು, ನೈಜ ಹಾಲಿನ ಪದಾರ್ಥಗಳನ್ನು ಬಳಸಿ ಗುಣಮಟ್ಟದ ಐಸ್‌ಕ್ರೀಂ ಒದಗಿಸುವ ಉದ್ದೇಶ ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಈ ಬ್ರ್ಯಾಂಡ್ ಮೂಲಕ ರಿಲಯನ್ಸ್ ಈಗಾಗಲೇ ಸ್ಪರ್ಧಾತ್ಮಕವಾಗಿರುವ ಭಾರತೀಯ ಐಸ್‌ಕ್ರೀಂ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸಿದೆ.

ಕೋನ್‌, ಕಪ್‌, ಟಬ್‌ ಹಾಗೂ ಸ್ಟಿಕ್‌ ಸೇರಿದಂತೆ ವಿವಿಧ ಮಾದರಿಗಳಲ್ಲಿ ‘ಬಾಂಬೆ ಕ್ರೀಮರಿ’ ಉತ್ಪನ್ನಗಳು ಲಭ್ಯವಾಗಲಿವೆ. ವಿಶೇಷವೆಂದರೆ, ಇದರ ಐಸ್‌ಕ್ರೀಂ ಉತ್ಪನ್ನಗಳ ಬೆಲೆ ಕೇವಲ ₹10ರಿಂದ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಪಶ್ಚಿಮ ಭಾರತದಲ್ಲಿ ಉತ್ಪನ್ನಗಳು ಲಭ್ಯವಾಗಲಿದ್ದು, ನಂತರ ಹಂತ ಹಂತವಾಗಿ ದೇಶದಾದ್ಯಂತ ವಿಸ್ತರಿಸುವ ಯೋಜನೆಯನ್ನು ರಿಲಯನ್ಸ್ ಹೊಂದಿದೆ.

ಟೆಲಿಕಾಂ ಹಾಗೂ ಇತರ ಗ್ರಾಹಕ ಉತ್ಪನ್ನಗಳ ಕ್ಷೇತ್ರದಲ್ಲಿ ಕಡಿಮೆ ಬೆಲೆಯ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತಂದಿರುವ ರಿಲಯನ್ಸ್, ಇದೀಗ ಅದೇ ರೀತಿಯ ಬೆಲೆ ತಂತ್ರವನ್ನು ಐಸ್‌ಕ್ರೀಂ ಕ್ಷೇತ್ರದಲ್ಲೂ ಬಳಸುತ್ತಿರುವುದು ಗಮನ ಸೆಳೆದಿದೆ. ಅಮೂಲ್‌, ಮದರ್ ಡೇರಿ, ವಡಿಲಾಲ್‌ ಮತ್ತು ಕ್ವಾಲಿಟಿ ವಾಲ್ಸ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳಿರುವ ಮಾರುಕಟ್ಟೆಯಲ್ಲಿ ‘ಬಾಂಬೆ ಕ್ರೀಮರಿ’ಯ ಪ್ರವೇಶವು ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸುವ ನಿರೀಕ್ಷೆ ಮೂಡಿಸಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft