Business News

ಚಿನ್ನದ ಬೆಲೆ ಮತ್ತೆ ಏರಿಕೆ: ಬೆಳ್ಳಿಯ ದರವೂ ಜಿಗಿತ! ಇಂದಿನ ದರವೆಷ್ಟು?

ಬೆಂಗಳೂರು, ಸೆಪ್ಟೆಂಬರ್ 10 : ಚಿನ್ನದ ದರದಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಏರಿಳಿತದ ನಡುವೆಯೇ ಗುರುವಾರ ಮತ್ತೆ ಬೆಲೆ ಏರಿಕೆಯಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಪ್ರತಿ ಗ್ರಾಂಗೆ ₹120 ಏರಿಕೆಯಾಗಿದ್ದು, 10 ಗ್ರಾಂಗೆ ₹1,55,510ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹110 ಹೆಚ್ಚಾಗಿ, 10 ಗ್ರಾಂಗೆ ₹1,42,550ಕ್ಕೆ ಏರಿಕೆಯಾಗಿದೆ.

ಮಂಗಳೂರಿನಲ್ಲಿಯೂ ಚಿನ್ನದ ದರದಲ್ಲಿ ಏರಿಕೆ ದಾಖಲಾಗಿದೆ. ಗುರುವಾರ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹15,551, 22 ಕ್ಯಾರೆಟ್ ಚಿನ್ನ ₹14,255 ಹಾಗೂ 18 ಕ್ಯಾರೆಟ್ ಚಿನ್ನ ₹11,663ಕ್ಕೆ ತಲುಪಿದೆ. 18 ಕ್ಯಾರೆಟ್ ಚಿನ್ನದ ದರದಲ್ಲೂ ಪ್ರತಿ ಗ್ರಾಂಗೆ ₹90 ಏರಿಕೆಯಾಗಿದೆ.

ಇದೇ ವೇಳೆ ಬೆಳ್ಳಿಯ ದರವೂ ಏರಿಕೆಯ ಹಾದಿ ಹಿಡಿದಿದೆ. ಮಂಗಳೂರಿನಲ್ಲಿ ಪ್ರತಿ ಕೆ.ಜಿ. ಬೆಳ್ಳಿಯ ದರ ₹2,50,000ರಿಂದ ₹5,000 ಏರಿಕೆಯಾಗಿ ₹2,55,000ಕ್ಕೆ ತಲುಪಿದೆ. ಆಗಸ್ಟ್‌ನಲ್ಲಿ ₹2,60,000ರವರೆಗೆ ಏರಿದ್ದ ಬೆಳ್ಳಿ ಬಳಿಕ ಸೆಪ್ಟೆಂಬರ್ ಆರಂಭದಲ್ಲಿ ₹2,45,000ಕ್ಕೆ ಇಳಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆ ಕಂಡಿದೆ.

ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ನಿರ್ಧಾರದ ನಿರೀಕ್ಷೆಯೂ ಚಿನ್ನದ ಮಾರುಕಟ್ಟೆಯ ಏರಿಳಿತಕ್ಕೆ ಪ್ರಮುಖ ಕಾರಣವಾಗಿದೆ. ಸೆಪ್ಟೆಂಬರ್ 15-16ರಂದು ನಡೆಯಲಿರುವ ಫೆಡರಲ್ ರಿಸರ್ವ್ ಸಭೆಯತ್ತ ಮಾರುಕಟ್ಟೆ ಗಮನಹರಿಸಿದ್ದು, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮತ್ತಷ್ಟು ಏರಿಳಿತ ಕಂಡುಬರುವ ಸಾಧ್ಯತೆಯಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft