GULF News

ಇರಾನ್ ಸರ್ವೋಚ್ಚ ನಾಯಕ ಅಲಿ ಖಾಮಿನೈ ಅಂತ್ಯಕ್ರಿಯೆ 2 ಕೋಟಿ ಜನ ಸೇರುವ ನಿರೀಕ್ಷೆ! : ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾ ಮಸೀದಿಗೆ ತಲುಪಿದ ಪಾರ್ಥಿವ ಶರೀರ

ಟೆಹ್ರಾನ್, ಜುಲೈ 3: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಪಾರ್ಥಿವ ಶರೀರವನ್ನು ಇರಾನ್ ರಾಜಧಾನಿ ಟೆಹ್ರಾನ್‌ನ ಪ್ರಸಿದ್ಧ ಗ್ರ್ಯಾಂಡ್ ಮೊಸಲ್ಲಾ ಮಸೀದಿಗೆ ತರಲಾಗಿದೆ. ಸುಮಾರು 36 ವರ್ಷಗಳಿಗೂ ಹೆಚ್ಚು ಕಾಲ ಇರಾನ್ ದೇಶವನ್ನು ಸರ್ವಾಧಿಕಾರ ಹಾಗೂ ಅತ್ಯುನ್ನತ ಸ್ಥಾನದಿಂದ ಮುನ್ನಡೆಸಿದ್ದ ಪ್ರಭಾವಿ ನಾಯಕ ಅಲಿ ಖಾಮಿನೈ ಅವರ ಅಂತಿಮ ದರ್ಶನ ಪಡೆಯಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ.

​ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಮತ್ತು ಅವರ ಕುಟುಂಬದ ಸದಸ್ಯರು ಮೃತಪಟ್ಟಿದ್ದರು. ಈ ಭೀಕರ ದಾಳಿಯ ಬಳಿಕ ಉಂಟಾದ ಭದ್ರತಾ ಕಾರಣಗಳು ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳಿಂದಾಗಿ ಖಾಮಿನೈ ಅವರ ಅಂತ್ಯಕ್ರಿಯೆಯ ದಿನಾಂಕವನ್ನು ಇರಾನ್ ಸರ್ಕಾರ ಹಲವು ಬಾರಿ ಮುಂದೂಡಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಜೂನ್ ತಿಂಗಳ ಕೊನೆಯಲ್ಲಿ ಇರಾನ್ ಅಧಿಕಾರಿಗಳು ಅಂತ್ಯಕ್ರಿಯೆಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು.

​ಇರಾನ್‌ನ ಸರ್ಕಾರಿ ಮಾಧ್ಯಮಗಳ ಅಧಿಕೃತ ವರದಿಗಳ ಪ್ರಕಾರ, ಜುಲೈ 4 ರಿಂದಲೇ ಟೆಹ್ರಾನ್ ನಗರದಲ್ಲಿ ಅಂತಿಮ ವಿಧಿವಿಧಾನಗಳ ಸರಣಿ ಕಾರ್ಯಕ್ರಮಗಳು ಆರಂಭವಾಗಲಿವೆ. ಟೆಹ್ರಾನ್‌ನ ನಂತರ ಇರಾನ್‌ನ ಧಾರ್ಮಿಕ ಕೇಂದ್ರಗಳಾದ ಕೋಮ್ ಮತ್ತು ಮಶಾದ್ ನಗರಗಳಲ್ಲಿ ಸಾರ್ವಜನಿಕ ಸರಣಿ ಶ್ರದ್ಧಾಂಜಲಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಅಂತಿಮ ಗೌರವ ಸಲ್ಲಿಸಲು ಇರಾನ್ ಸರ್ಕಾರ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

​ಈ ಐತಿಹಾಸಿಕ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳಿಂದ ಸುಮಾರು 2 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಲ್ ಜಝೀರಾ ಮಾಧ್ಯಮ ವರದಿ ಮಾಡಿದೆ. ಇದು ಇರಾನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಂತ್ಯಕ್ರಿಯೆಯಾಗಿ ದಾಖಲಾಗುವ ಸಾಧ್ಯತೆಯಿದೆ. ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ, ಜುಲೈ 9 ರಂದು ಆಲಿ ಖಾಮಿನೈ ಅವರ ತವರೂರಾದ ಮಶಾದ್‌ನಲ್ಲಿರುವ ಇಮಾಮ್ ರೆಝಾ ಮಸೀದಿಯ ಆವರಣದಲ್ಲಿ ಅವರ ಪಾರ್ಥಿವ ಶರೀರವನ್ನು ಧಪನ (ಅಂತ್ಯಕ್ರಿಯೆ) ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft