Sports

ಬೆಂಕಿ ಬೌಲಿಂಗ್​… 6 ಎಸೆತಗಳಲ್ಲಿ ರಬಾಡ ಹೊಸ ವಿಶ್ವ ದಾಖಲೆ 

 IPL 2026 RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಮೂಲಕ ಸೌತ್ ಆಫ್ರಿಕನ್ ವೇಗಿ ಕಗಿಸೊ ರಬಾಡ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ತಮ್ಮ ಮಾರಕ ಎಸೆತಗಳ ಮೂಲಕ. ಈ ಎಸೆತಗಳೊಂದಿಗೆ ಉಮ್ರಾನ್ ಮಲಿಕ್ ಹಾಗೂ ಮಾರ್ಕ್​ವುಡ್ ಹೆಸರಿನಲ್ಲಿದ್ದ ದಾಖಲೆಯನ್ನು ರಬಾಡ ಅಳಿಸಿ ಹಾಕಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಹಲವು ಬೌಲರ್​ಗಳು 150 ಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆದಿದ್ದಾರೆ. ಹೀಗೆ ಚೆಂಡೆಸೆದ ಬೌಲರ್​ಗಳಲ್ಲಿ ಒಂದೇ ಓವರ್​ನಲ್ಲಿ ಸತತವಾಗಿ 150+ kmph ವೇಗದಲ್ಲಿ ಬೌಲಿಂಗ್ ಮಾಡಿದ ಏಕೈಕ ವೇಗಿ ಕಗಿಸೊ ರಬಾಡ (Kagiso Rabada). ಅದು ಸಹ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಎಂಬುದು ವಿಶೇಷ.

ಟಿ20 ಕ್ರಿಕೆಟ್​ನಲ್ಲಿ ಹಲವು ಬೌಲರ್​ಗಳು 150 ಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆದಿದ್ದಾರೆ. ಹೀಗೆ ಚೆಂಡೆಸೆದ ಬೌಲರ್​ಗಳಲ್ಲಿ ಒಂದೇ ಓವರ್​ನಲ್ಲಿ ಸತತವಾಗಿ 150+ kmph ವೇಗದಲ್ಲಿ ಬೌಲಿಂಗ್ ಮಾಡಿದ ಏಕೈಕ ವೇಗಿ ಕಗಿಸೊ ರಬಾಡ (Kagiso Rabada). ಅದು ಸಹ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಎಂಬುದು ವಿಶೇಷ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವೇಗಿ ಕಗಿಸೊ ರಬಾಡ ಸತತವಾಗಿ 150+ kmph ವೇಗದಲ್ಲಿ ಚೆಂಡೆಸೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಒಂದೇ ಓವರ್​ನಲ್ಲಿ ಎಲ್ಲಾ ಎಸೆತಗಳನ್ನು 150 kmph ವೇಗದಲ್ಲಿ ಎಸೆದ ವಿಶ್ವದ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ.

ಆರ್​ಸಿಬಿ ವಿರುದ್ಧದ ಈ ಪಂದ್ಯದ ನಾಲ್ಕನೇ ಓವರ್​ನ ಮೊದಲ ಎಸೆತವನ್ನು ರಬಾಡ 153 kmph ವೇಗದಲ್ಲಿ ಎಸೆದಿದ್ದರು. ಇನ್ನು ಎರಡನೇ ಎಸೆತವು  151 kmph ವೇಗದಲ್ಲಿ ಸಾಗಿತು. ಮೂರನೇ ಎಸೆದ ಮೂಡಿ ಬಂದಿದ್ದು ಬರೋಬ್ಬರಿ  154 kmph ವೇಗದಲ್ಲಿ. ನಾಲ್ಕನೇ ಎಸೆತ 152 kmph ವೇಗದಲ್ಲಿ ಸಾಗಿದರೆ, ಐದನೇ ಎಸೆದ ವೇಗ 152 kmph ನಲ್ಲಿತ್ತು. ಇನ್ನು ಕೊನೆಯ ಎಸೆತವನ್ನು   151 kmph ವೇಗದಲ್ಲಿ ಎಸೆದಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 150+ kmph ವೇಗದಲ್ಲಿ ಒಂದು ಓವರ್ ಎಸೆದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ಕಗಿಸೊ ರಬಾಡ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಉಮ್ರಾನ್ ಮಲಿಕ್ ಹಾಗೂ ಮಾರ್ಕ್​ವುಡ್ ಒಂದೇ ಓವರ್​ನಲ್ಲಿ 5 ಎಸೆತಗಳನ್ನು 150+ kmph ವೇಗದಲ್ಲಿ ಎಸೆದಿದ್ದರು.

2022ರ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಉಮ್ರಾನ್ ಮಲಿಕ್ ಒಂದೇ ಓವರ್​ನಲ್ಲಿ 5 ಎಸೆತಗಳನ್ನು 150+ kmph ವೇಗದಲ್ಲಿ ಎಸೆದು ಸಂಚಲನ ಸೃಷ್ಟಿಸಿದ್ದರು. ಇದಾದ ಬಳಿಕ 2024 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್​ವುಡ್​ ಒಂದೇ ಓವರ್​ನಲ್ಲಿ 5 ಎಸೆತಗಳನ್ನು 150+ kmph ವೇಗದಲ್ಲಿ ಎಸೆದಿದ್ದರು. ಇದೀಗ ಈ ಇಬ್ಬರ ದಾಖಲೆಯನ್ನು ಮುರಿದು ಕಗಿಸೋ ರಬಾಡ 6 ಎಸೆತಗಳನ್ನು ಕೂಡ 150+ kmph ವೇಗದಲ್ಲಿ ಎಸೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft