News

ಧರ್ಮಸ್ಥಳ ಪ್ರಕರಣ: ಕುತೂಹಲಕಾರಿ ತಿರುವು ಮೂಡಿಸಲಿದೆ ಹೊಸ SIT !?17 ವರ್ಷಗಳಲ್ಲಿ 1,480 ಅಸ್ವಾಭಾವಿಕ ಸಾವುಗಳು; ವಿವಿಧ ದಾಖಲೆಗಳಲ್ಲಿ 1,510 ಪ್ರಕರಣ ಪತ್ತೆ, 30 ಪ್ರಕರಣಗಳ ವ್ಯತ್ಯಾಸದ ಜಾಡು ಹಿಡಿಯುತ್ತಾ SIT

ಬೆಂಗಳೂರು, ಸೆ.30 : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) 1998ರಿಂದ 2014ರವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 1,480 ಅಸ್ವಾಭಾವಿಕ ಸಾವು (UDR) ಪ್ರಕರಣಗಳು ದಾಖಲಾಗಿರುವುದನ್ನು ಪತ್ತೆಹಚ್ಚಿದೆ. ಇದೇ ಅವಧಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ದಾಖಲೆಗಳಲ್ಲಿ 1,510 ಪ್ರಕರಣಗಳ ಮಾಹಿತಿ ಲಭ್ಯವಾಗಿದ್ದು, ಎರಡೂ ದಾಖಲೆಗಳ ನಡುವೆ ಇರುವ 30 ಪ್ರಕರಣಗಳ ವ್ಯತ್ಯಾಸವನ್ನು SIT ಪರಿಶೀಲಿಸುತ್ತಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯ ಮೊ.ಸಂ.39/2025ರ ಸಮಗ್ರ ತನಿಖೆಗಾಗಿ 2025ರ ಜುಲೈ 19ರಂದು ಸರ್ಕಾರ SIT ರಚಿಸಿತ್ತು. ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ 1998ರಿಂದ 2014ರವರೆಗೆ ನಡೆದ ಅಸ್ವಾಭಾವಿಕ ಸಾವುಗಳು, ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಹಾಗೂ ಅನುಮಾನಾಸ್ಪದ ಸಾವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಂಡ ಪರಿಶೀಲಿಸುತ್ತಿದೆ. ಈ ಕುರಿತು SIT ಮುಖ್ಯಸ್ಥ ಡಾ. ಪ್ರಣವ್ ಮಹಾಂತಿ ಅವರು 2026ರ ಮಾರ್ಚ್ 24ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಗ್ರ ವರದಿ ಸಲ್ಲಿಸಿದ್ದಾರೆ.

ತನಿಖೆಯ ವೇಳೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಶೋಧ ನಡೆಸಿದಾಗ ಏಳು ತಲೆಬುರುಡೆಗಳು ಹಾಗೂ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದು, ಅವುಗಳ ಗುರುತು ಮತ್ತು ಸಾವಿನ ಕಾರಣ ತಿಳಿಯಲು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು SIT ವರದಿಯಲ್ಲಿ ತಿಳಿಸಿದೆ. ಹಳೆಯ UDR ಹಾಗೂ ಕೊಲೆ ಪ್ರಕರಣಗಳನ್ನೂ ಪರಿಶೀಲಿಸಲಾಗುತ್ತಿದ್ದು, 2009ರ ಅಪರಿಚಿತ ಮಹಿಳೆಯ ಕೊಲೆ, 2010ರ ಶರಾವತಿ ವಸತಿಗೃಹದ ಕೊಲೆ ಹಾಗೂ 2003ರ ನೇತ್ರಾವತಿ ನದಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ದಾಖಲೆಗಳನ್ನು ಮರುಪರಿಶೀಲಿಸಲಾಗುತ್ತಿದೆ.

ಇದೇ ವೇಳೆ, ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಕೊಲೆ, ಅತ್ಯಾಚಾರ ಹಾಗೂ ಅಸಹಜ ಸಾವುಗಳ ತನಿಖಾ ಪ್ರಗತಿ ವರದಿ ನೀಡುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿತ್ತು. SIT ಈವರೆಗೆ 73 ದೂರು ಅರ್ಜಿಗಳನ್ನು ಸ್ವೀಕರಿಸಿದ್ದು, ವಿವಿಧ ಪೊಲೀಸ್ ಘಟಕಗಳು, ಗ್ರಾಮ ಪಂಚಾಯಿತಿಗಳು ಹಾಗೂ ಇತರ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವ ಪ್ರಕ್ರಿಯೆ ಮುಂದುವರಿದಿದೆ. ಸರ್ಕಾರದ ಆದೇಶದಂತೆ ಎಲ್ಲ ಆಯಾಮಗಳಲ್ಲೂ ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತಿದೆ ಎಂದು SIT ತಿಳಿಸಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft