GULF News

ಕಾಂಗೋ : ಪರೀಕ್ಷೆ ಬರೆದು ಮನೆಗೆ ಮರಳುವ ವಿಧ್ಯಾರ್ಥಿಗಳಿದ್ದ ದೋಣಿ ಮುಳುಗಡೆ: ಕನಿಷ್ಠ 20 ಮಂದಿ ವಿದ್ಯಾರ್ಥಿಗಳು ದಾರುಣ ಮೃ*ತ್ಯು!

​ಕಿನ್ಶಾಸಾ, ಜುಲೈ 6: ಮಧ್ಯ ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ರಾಜ್ಯ ಮಟ್ಟದ ಪರೀಕ್ಷೆಗಳನ್ನು ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮರದ ದೋಣಿಯೊಂದು ನದಿಯಲ್ಲಿ ಮುಳುಗಡೆಯಾಗಿದೆ. ಈ ಭೀಕರ ಅಪಘಾತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪ್ರಾದೇಶಿಕ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.


​ಕಾಂಗೋದ ಕಸಾಯಿ ಪ್ರಾಂತದಲ್ಲಿ ಸಂಕುರು ಮತ್ತು ಕಸಾಯಿ ನದಿಗಳು ಸಂಧಿಸುವ ಸಂಗಮ ಸ್ಥಳವನ್ನು ಪ್ರವೇಶಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದ ವೇಳೆ ದೋಣಿಯಲ್ಲಿದ್ದ ಕನಿಷ್ಠ 80 ಜನರನ್ನು ರಕ್ಷಿಸಲಾಗಿದ್ದು, ಸದ್ಯದವರೆಗೆ 20 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಇಲೆಬೊ ಪ್ರದೇಶದ ಆಡಳಿತಾಧಿಕಾರಿ ಪ್ರಾನ್ಸಿಸ್ ಕಬುಲಾ ಅವರು ಮಾಹಿತಿ ನೀಡಿದ್ದಾರೆ.


​ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತಕ್ಕೀಡಾದ ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಅಂದರೆ ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಳುಗಿರುವ ಇತರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.


​ಕಾಂಗೋ ದೇಶದಲ್ಲಿ ಮೂಲಸೌಕರ್ಯಗಳ ಕೊರತೆ, ನಿಯಮಬಾಹಿರವಾಗಿ ದೋಣಿಗಳಲ್ಲಿ ಅತಿಯಾದ ಜನರನ್ನು ತುಂಬುವುದು ಮತ್ತು ರಾತ್ರಿ ವೇಳೆಯ ಪ್ರಯಾಣದಿಂದಾಗಿ ಇಂತಹ ಮಾರಣಾಂತಿಕ ದೋಣಿ ಅಪಘಾತಗಳು ನಿಯಮಿತವಾಗಿ ಸಂಭವಿಸುತ್ತಿರುತ್ತವೆ. ಸ್ಥಳೀಯ ನಾಗರಿಕ ಸಂಘಟನೆಯ ಮುಖ್ಯಸ್ಥರು ದೋಣಿ ಮಾಲೀಕರು ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft