News

ಭಾವೈಕ್ಯತೆಗೆ ಸಾಕ್ಷಿಯಾದ ಕೊಪ್ಪಳ: ಮುಸ್ಲಿಂ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ

ಕೊಪ್ಪಳ: ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಜೀರುದ್ದೀನ್ ಮನೆಯಲ್ಲಿ ವರಮಾಹಾಲಕ್ಷ್ಮೀ ಹಬ್ಬ ಆಚರಿಸಲಾಗಿದೆ. ನಜೀರುದ್ದೀನ್ ಮನೆಗೆ ತರಳು ತೋರಣ ಕಟ್ಟಿ ವಿಜೃಂಭಣೆಯಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗಿದೆ. ನಜೀರುದ್ದೀನ್ ಬಿಸರಳ್ಳಿ 5-6 ವರ್ಷದ ಹಿಂದ ವರಮಾಹಾಲಕ್ಷ್ಮೀ ಹಬ್ಬದ ದಿನ ಮನೆ ಗೃಹಪ್ರವೇಶ ಮಾಡಿದ್ದರು. ನಜೀರುದ್ದೀನ್ ಬಿಸರಳ್ಳಿ ಕುಟುಂಬ ಅಂದಿನಿಂದ ಪ್ರತಿ ವರ್ಷ ವರಮಾಹಾಲಕ್ಷ್ಮೀ ಹಬ್ಬ ಅಚರಣೆ ಮಾಡುತ್ತಿದ್ದಾರೆ.

GULF

ಕರ್ನಾಟಕದ ಐವರು ಮಹಿಳೆಯರಿಗೆ ಇಂಗ್ಲೆಂಡ್​​ನಲ್ಲಿ ಓದಲು 40 ಲಕ್ಷ ರೂ. ವಿದ್ಯಾರ್ಥಿವೇತನ

ಕರ್ನಾಟಕದ ಐವರು ವಿದ್ಯಾರ್ಥಿನಿಯರು ಚೆವನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸರ್ಕಾರದಿಂದ ಮಹಿಳೆಯರನ್ನು ಈ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಿಂದ ಮಹಿಳಾ ಪದವೀಧರರನ್ನು ಪರಿಗಣಿಸುವ ಈ ವಿದ್ಯಾರ್ಥಿವೇತನವು ಮುಂದಿನ ಮೂರು ವರ್ಷಗಳವರೆಗೆ ಪ್ರತಿ ವರ್ಷ ಮುಂದುವರಿಯಲಿದ್ದು, ಒಟ್ಟು 15 ಮಹಿಳಾ ಪದವೀಧರರಿಗೆ ಪ್ರಯೋಜನವಾಗಲಿದೆ. ಬೆಂಗಳೂರು, ಆಗಸ್ಟ್ 8: ಕರ್ನಾಟಕದ ಐವರು ಮಹಿಳೆಯರು ಚೆವೆನಿಂಗ್ ವಿದ್ಯಾರ್ಥಿವೇತನದ (Chevening-Karnataka scholarships) ಅಡಿಯಲ್ಲಿ ಇಂಗ್ಲೆಂಡ್​ಗೆ (UK) ಪ್ರಯಾಣಿಸಲಿದ್ದಾರೆ. ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ 5 ಮಹಿಳಾ ವಿದ್ಯಾರ್ಥಿನಿಯರ ಮೊದಲ ಬ್ಯಾಚ್ ಸೆಪ್ಟೆಂಬರ್‌ನಲ್ಲಿ […]

GULF

ಕುವೈತ್: ಬೇಸಿಗೆಯ ತಾಪ ಅಂತಿಮ ಹಂತಕ್ಕೆ- ಆಗಸ್ಟ್ 11 ರಿಂದ ಹೊಸ ಋತು ಆರಂಭ

ಕುವೈತ್ ಸಿಟಿ: ಕುವೈತ್‌ನಲ್ಲಿ ಬೇಸಿಗೆಯ ಕೊನೆಯ ಹಂತವಾದ ಕೆರಿಬಿಯನ್ ಋತುವು ಪ್ರಾರಂಭವಾಗಿದೆ ಎಂದು ಅಲ್-ಉಜೈರಿ ವೈಜ್ಞಾನಿಕ ಕೇಂದ್ರವು ಘೋಷಿಸಿದೆ. ಈ ಅವಧಿಯು ಆಗಸ್ಟ್ 11 ರಂದು ಪ್ರಾರಂಭವಾಗಲಿದೆ. ಈ ಋತುವು ತೀವ್ರ ಶಾಖದಿಂದ ತಾಪಮಾನವು ಕಡಿಮೆಯಾಗಲು ಪ್ರಾರಂಭಿಸುತ್ತಿದೆ ಎಂಬುದರ ಸಂಕೇತವಾಗಿದೆ. ಕೆರಿಬಿಯನ್ ಋತುವು 13 ದಿನಗಳವರೆಗೆ ಇರಲಿದೆ. ಈ ಅವಧಿಯ ನಂತರ, ಸುಹೈಲ್ ನಕ್ಷತ್ರದ ಗೋಚರಿಸುವಿಕೆಯೊಂದಿಗೆ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಕಠಿಣ ಬೇಸಿಗೆಯು ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಕುವೈತ್‌ನಲ್ಲಿ ಮುಂದಿನ ದಿನಗಳಲ್ಲಿ ಬಿಸಿ ಮತ್ತು ತೇವಾಂಶವುಳ್ಳ ವಾತಾವರಣವಿರಲಿದೆ ಎಂದು […]

Entertainment Sports

ಮತ್ತೆ ಶುರು IPT 12.. ಆಗಸ್ಟ್ 9-15ರವರೆಗೆ ನಡೆಯಲಿದೆ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್

ಸುನಿಲ್ ಕುಮಾರ್ ಬಿ. ಆರ್ ನೇತೃತ್ವದ ಎನ್ 1 ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಪ್ರೇಮಿಗಳಿಗಾಗಿ ಹಲವಾರು ಟೂರ್ನಮೆಂಟ್ ಆಯೋಜಿಸಿ ಯಶಸ್ವಿ ಕಂಡಿದೆ. ಇದೀಗ ಮತ್ತೊಮ್ಮೆ IPT12 ಏರ್ಪಡಿಸಿದೆ.‌ ಕಳೆದ ವರ್ಷ IPT12 ಯಶಸ್ವಿಯಾಗಿ ಜರುಗಿದ್ದು, ಇದೀಗ IPT12 ಸೀಸನ್ 2 ಚಾಲನೆ ದೊರೆತಿದೆ. ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಸಿವಿಲ್ ಕಾಂಟ್ರಾಕ್ಟರ್ಸ್,ಎಕ್ಸ್ಜಿ ಡಿಪಾರ್ಟ್ಮೆನ್ ಕರ್ನಾಟಕ ಪೊಲೀಸ್,ಪ್ರೈವೇಟ್ ಲಿಮಿಟೆಡ್ ಕಂಪನಿ ವಿನ್ ಟೈಮ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 […]

Entertainment

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್​ಗೆ ಜೊತೆಯಾದ ರುಕ್ಮಿಣಿ ವಸಂತ್; ಕನಕವತಿ ಪೋಸ್ಟರ್ ರಿಲೀಸ್

ಸದ್ಯ ನಾಡಿನಾದ್ಯಂತ ಹಬ್ಬದ ಕಲರವ ಇದ್ದರೇ ಇತ್ತ ಕಾಂತಾರ ಸಿನಿಮಾ ತಂಡದವರು ಚಾಪ್ಟರ್​- 1 ರಲ್ಲಿ ಹೀರೋಯಿನ್ ಅವರ ಪಾತ್ರ ಪರಿಚಯ ಮಾಡಿದ್ದಾರೆ. ಈ ಬಗ್ಗೆ ಮೊದಲು ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಆಗಿದ್ದರು. ಈ ಚಿತ್ರದ ಮೂಲಕ ಅವರಿಗೆ ಬೇಡಿಕೆ ಹೆಚ್ಚಿತು. ಈ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ​ಗೆ ನಾಯಕಿ ಯಾರು ಎಂಬ ವಿಚಾರ ಈವರೆಗೆ ರಿವೀಲ್ ಆಗಿರಲಿಲ್ಲ. ಈಗ ಈ ವಿಷಯದ […]

News

ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ.    ಬಿಎನ್ಎಸ್ ಕಾಯ್ದೆಯಡಿ ಸೆಕ್ಷನ್ 108, 352, 351 ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕೇಸ್​ ದಾಖಲಾಗಿದೆ. […]

News

ಮತದಾರರ ಪಟ್ಟಿ ಹಗರಣ: ಅಗತ್ಯವಿದ್ದರೆ ವರುಣಾ, ಚಾಮರಾಜಪೇಟೆಯಲ್ಲೂ ತನಿಖೆಯಾಗಲಿ! ಡಿ.ಕೆ. ಶಿವಕುಮಾರ್

ರಾಜ್ಯದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ. ಚುನಾವಣಾ ಆಯೋಗವು ಅಗತ್ಯವಿದ್ದರೆ ವರುಣಾ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲಿಯೂ ತನಿಖೆ ನಡೆಸಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರು (ಆ.08): ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರಿಯಲಿದೆ. ಯಾವುದೇ ಕ್ಷೇತ್ರದಲ್ಲಿ ಡಬಲ್ ಎಂಟ್ರಿ ಆಗಿದ್ದರೂ ಅದು ತಪ್ಪು. ವರುಣಾ, ಚಾಮರಾಜಪೇಟೆ ಸೇರಿದಂತೆ ಯಾವುದೇ ಕ್ಷೇತ್ರದ ಬಗ್ಗೆ ತನಿಖೆಯಾಗಲಿ, ಅದನ್ನು […]

Business

25 ಲಕ್ಷ ರೂಪಾಯಿ ಉಳಿತಾಯ ಹಣವಿದ್ದರೆ, ಮನೆ ಕಟ್ಟಿಸೋದು ಒಳ್ಳೆಯದೋ, ಎಫ್‌ಡಿ ಇಟ್ಟು ಬಾಡಿಗೆ ಮನೆಯಲ್ಲಿರೋದು ಒಳ್ಳೆಯದೋ?

₹25 ಲಕ್ಷ ಉಳಿತಾಯವನ್ನು ಮನೆ ನಿರ್ಮಾಣಕ್ಕೆ ಬಳಸುವುದೇ ಅಥವಾ ಎಫ್‌ಡಿಯಲ್ಲಿ ಹೂಡಿಕೆ ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸುವುದೇ ಲಾಭದಾಯಕ? ಈ ಲೇಖನವು ಎರಡೂ ಆಯ್ಕೆಗಳ ಲಾಭ-ನಷ್ಟಗಳನ್ನು ವಿಶ್ಲೇಷಿಸಿ, ನಿಮಗೆ ಸೂಕ್ತವಾದ ಆಯ್ಕೆ ಮಾಡಲು ಸಹಾಯ ಮಾಡುತ್ತದೆ. 25 ಲಕ್ಷ ರೂಪಾಯಿಗಳ ಉಳಿತಾಯವು ಒಂದು ಗಣನೀಯ ಮೊತ್ತವಾಗಿದ್ದು, ಇದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗಂಭೀರ ಚಿಂತನೆಯನ್ನು ಬಯಸುವ ನಿರ್ಧಾರವಾಗಿದೆ. ಈ ಮೊತ್ತವನ್ನು ಸ್ವಂತ ಮನೆ ಕಟ್ಟಲು ಬಳಸುವುದು ಒಂದು ಆಯ್ಕೆಯಾದರೆ, ಸ್ಥಿರ ಠೇವಣಿ (ಎಫ್‌ಡಿ)ಯಲ್ಲಿ ಹೂಡಿಕೆ ಮಾಡಿ, ಆ […]

News

ನಿಜವಾದ ಭಾರತೀಯರಾಗಿದ್ದರೇ, ನೀವು ಇದನ್ನೆಲ್ಲಾ ಹೇಳುತ್ತಿರಲಿಲ್ಲ; ರಾಹುಲ್ ಗಾಂಧಿಗೆ ಸುಪ್ರೀಂ ಚಾಟಿ

ಒಂದು ವೇಳೆ ನೀವು ನಿಜವಾದ ಭಾರತೀಯರಾಗಿದ್ದರೇ, ಇದನ್ನೆಲ್ಲಾ ಹೇಳುತ್ತಿರಲಿಲ್ಲ. ಚೀನಾ ದೇಶವು ಭಾರತದ 2 ಸಾವಿರ ಚದರ ಕಿಲೋಮೀಟರ್ ಭೂಮಿ ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತಾಯ್ತು? ಎಂದು ಸುಪ್ರೀಂಕೋರ್ಟ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿರನ್ನು ತರಾಟೆಗೆ ತೆೆಗೆದುಕೊಂಡಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿರನ್ನು ಸುಪ್ರೀಂ ಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಚೀನಾ ದೇಶವು ಅರುಣಾಚಲ ಪ್ರದೇಶದಲ್ಲಿ 2 ಸಾವಿರ ಚದರ ಕಿಲೋ ಮೀಟರ್ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ಭಾರತ್ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft