Sports

ಭಾರತvsಆಸ್ಟ್ರೇಲಿಯಾ:ಮತ್ತೆ ಅವಕಾಶದಿಂದ ವಂಚಿತರಾದ ಸಂಜು ಸ್ಯಾಮ್ಸನ್.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಿಂದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ಮೆಲ್ಬೋರ್ನ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸ್ಯಾಮ್ಸನ್ ಕೇವಲ 2 ರನ್ಗಳಿಸಿ ಔಟಾಗಿದ್ದರು. ಆದಕಾರಣ ಮೂರನೇ ಟಿ20 ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ವಿಶೇಷ ಎಂದರೆ ಕೆಲ ತಿಂಗಳುಗಳ ಹಿಂದೆಯಷ್ಟೇ ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಸೌತ್ ಆಫ್ರಿಕಾ […]

Sports

World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ಏಕದಿನ ವಿಶ್ವಕಪ್‌ ಕಿರೀಟ

India Women’s Cricket Team Wins 2025 World Cup: 2025ರ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಭಾರತ 288 ರನ್ ಗಳಿಸಿ, ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದು ಭಾರತ ಮಹಿಳಾ ಕ್ರಿಕೆಟ್‌ಗೆ ಒಂದು ಸ್ಮರಣೀಯ ಕ್ಷಣ. 150 ಕೋಟಿ ಭಾರತೀಯರು ಬಹಳ ದಿನಗಳಿಂದ ಕಾಯುತ್ತಿದ್ದದ್ದನ್ನು ಭಾರತದ ಹೆಣ್ಣುಮಕ್ಕಳು […]

News

ಮದುವೆ ಆಗ್ತೀನಿ, ಹೊಸ ಕಾರು ಬೇಕು ಅಂತಾ ಲೆಟರ್ ಕೊಟ್ಟಿದ್ದ: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವ್ಯಂಗ್ಯ

ಬೆಂಗಳೂರು: ಟನಲ್ ರೋಡ್ ವಿರೋಧಿಸುತ್ತಿರುವ ಸಂಸದ ತೇಜಸ್ವಿಸೂರ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್ ಹಾಕಿದ್ದಾರೆ. ನಿನಗೆ ಹೊಸ ಕಾರು ಬೇಕು.. ಬೇರೆಯವರು ಕಾರಲ್ಲಿ ಓಡಾಡೋದು ಬೇಡ್ವಾ? ಹೊಸ ಕಾರಿಗೆ ಅರ್ಜಿ ಹಾಕಿದ್ದ, ಬೇಕು ಅಂದ್ರೆ ಅವನ ಲೆಟರ್ ರಿಲೀಸ್ ಮಾಡ್ಲಾ ಅಂತ ಡಿಕೆಶಿ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರು ಬೇಡ ಅಂತಿದ್ದ. ಆಮೇಲೆ ಮದುವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತ ಅರ್ಜಿ ಹಾಕಿದ್ದ. ನಿನಗ್ಯಾಕೆ ಹೊಸ ಕಾರು ಬೇಕಿತ್ತು. ನೀನು […]

Technology

ISRO-Baahubali: ಭಾರತೀಯ ನೌಕಾಪಡೆಗೆ ‘ಬಾಹುಬಲಿ’ ಶಕ್ತಿ! ಅತ್ಯಂತ ಭಾರದ ಉಪಗ್ರಹ ಹಾರಿಸಿದ ಇಸ್ರೋ

ಭಾರತದಲ್ಲಿ ಭೂಮಿಯಿಂದ ಜಿಟಿಒಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ. ಸ್ವದೇಶಿ ನಿರ್ಮಿತ ರಾಕೆಟ್ ಬಳಸಿ ಉಡಾಯಿಸಲಾದ ಇಸ್ರೋದ ಅತ್ಯಂತ ಭಾರವಾದ ಉಪಗ್ರಹ ಬಾಹುಬಲಿಯಾಗಿದೆ. ಶ್ರೀಹರಿಕೋಟಾ, ಆಂಧ್ರ ಪ್ರದೇಶ: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ (ಇಸ್ರೋ – ISRO) (Indian Space Research Organisation) ಭಾನುವಾರ ಸಂಜೆ 5:26 ಕ್ಕೆ ‘ಬಾಹುಬಲಿ’ಯನ್ನು (Baahubali) ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಭಾರತೀಯ ರಾಕೆಟ್‌ನಲ್ಲೇ (Indian rocket) ಅತ್ಯಂತ ಭಾರವಾದ ಉಪಗ್ರಹ (heaviest […]

Sports

IND vs AUS: ಹೋಬಾರ್ಟ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಂ ಇಂಡಿಯಾ

India vs Australia T20: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೋಬಾರ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 186 ರನ್‌ಗಳ ಗುರಿಯನ್ನು ಸೂರ್ಯಕುಮಾರ್ ಪಡೆ ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಭಾರತದ ಈ ಗೆಲುವು ಸರಣಿಯಲ್ಲಿ ಮಹತ್ವದ್ದಾಗಿದೆ. ಹೋಬಾರ್ಟ್‌ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ […]

News

ಬೆಂಗಳೂರು ಪೂರ್ವದ ವಿವಿಧ ಕಡೆ ಗೋಡೆಗಳನ್ನು ಪರೀಕ್ಷಿಸಿ, ಪೋಸ್ಟರ್‌ಗಳನ್ನು ಅಂಟಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ: ಜಿಬಿಎ ಮುಖ್ಯ ಆಯುಕ್ತ.

ಬೆಂಗಳೂರು :ಮಹೇಶ್ವರ್ ರಾವ್ ಅವರು ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಶುಕ್ರವಾರ ಪರಿಶೀಲನೆ ನಡೆಸಿ ,ದೇವರಬೀಸನಹಳ್ಳಿ ಬಳಿಯ ಮರಗಳ ಮೇಲಿನ ಪೋಸ್ಟರ್‌ಗಳನ್ನು ವೀಕ್ಷಿಸಿದರು. ಪೋಸ್ಟರ್ ಗಳು ನಗರದ ಸೌಂದರ್ಯವನ್ನು ನಾಶಪಡಿಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.ಬಳಿಕ ಅಸ್ತಿತ್ವದಲ್ಲಿರುವ ಪೋಸ್ಟರ್‌ಗಳನ್ನು ತೆಗೆದುಹಾಕಲು ಆದೇಶಿಸಿದರು. ಅಲ್ಲದೆ, ಮರಗಳು ಮತ್ತು ಸಾರ್ವಜನಿಕ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು ಕಂಡುಬಂದರೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪಣತ್ತೂರು ಎಸ್ ಕ್ರಾಸ್ ಮತ್ತು ಬಳಗೆರೆ ರಸ್ತೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ […]

News

ಪ್ರತಿ ಮಗುವಿನ ಪಠ್ಯ ಮಾಧ್ಯಮ ಮಾತೃಭಾಷೆಯೇ ಆಗುವಂತಹ ಕಾನೂನು ತರಬೇಕು, ಕೇಂದ್ರವು ಕನ್ನಡವನ್ನು ನಿರ್ಲಕ್ಷಿಸಿ, ಹಿಂದಿಯನ್ನು ಹೇರುತ್ತಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು :ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಕಾನೂನನ್ನು ತರಬೇಕೆಂದು ಒತ್ತಾಯಿಸಿದ ಮುಖ್ಯಮಂತ್ರಿ, ಇಂಗ್ಲಿಷ್ ಮತ್ತು ಹಿಂದಿ “ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ. ಕನ್ನಡ ವಿರೋಧಿಗಳನ್ನು ರಾಜ್ಯದ ಜನತೆ ಒಂದಾಗಿ ವಿರೋಧಿಸಬೇಕು” ಎಂದು ಕನ್ನಡ ರಾಜ್ಯೋತ್ಸವ ಆಚರಣೆಯ ಭಾಷಣದಲ್ಲಿ ಹೇಳಿದರು. ಇಂಗ್ಲಿಷ್, ಹಿಂದಿ ನಮ್ಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಕ್ಕಳು ಮಾತೃಭಾಷೆಯಲ್ಲಿ ಯೋಚಿಸುತ್ತಾರೆ, ಕಲಿಯುತ್ತಾರೆ, ಕನಸು ಕಾಣುತ್ತಾರೆ ಆದರೆ ಇಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ” ಎಂದು ರಾಜ್ಯೋತ್ಸವ ಭಾಷಣದ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು. “ಹಿಂದಿ, ಸಂಸ್ಕೃತದ […]

News

ಬೆಳಗಾವಿಯ ಕನ್ನಡ ರಾಜ್ಯೋತ್ಸವ ಕಂಡೀರಾ..!! ಮಧ್ಯರಾತ್ರಿಯಿಂದಲೇ ಆಚರಣೆಗೆ ಚಾಲನೆ, ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಸಾವಿರಾರು ಜನ..!!

ಬೆಳಗಾವಿ : ತಡರಾತ್ರಿಯಿಂದಲೇ ಬೆಳಗಾವಿಯ ಬೀದಿಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಝೇಂಕಾರಗಳು ಮುಗಿಲು ಮುಟ್ಟಿವೆ.ಪ್ರತಿವರ್ಷದಂತೆ ಈ ಬಾರಿಯೂ ಗಡಿನಾಡ ಕನ್ನಡಿಗರು ರಾತ್ರಿಯೇ ಉತ್ಸವಕ್ಕೆ ಸಮಾವೇಶಗೊಂಡರು. ರಾತ್ರಿ 10ರ ನಂತರ ಏಕಾಏಕಿ ಸೇರಿದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರದ ಜನರಿಂದ ಇಡೀ ವೃತ್ತ ಕಿಕ್ಕಿರಿದು ತುಂಬಿತು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್‌ ಆಯಿತು.ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಇದೇ ಮೊದಲ ಬಾರಿಗೆ ಸಿಡಿ ಮದ್ದಿನ […]

News

ನವೆಂಬರ್ 10,12 ರಂದು ದಕ್ಷಿಣ ಕನ್ನಡದಲ್ಲಿ ಸರ್ದಾರ್@150 ಯುನಿಟಿ ವಾಕ್ : ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡದ ಎರಡು ಕಡೆಗಳಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆದೇಶದ ಮೇರೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ನವೆಂಬರ್ 10 ರಂದು ಮಂಗಳೂರಿನಲ್ಲಿ ಮತ್ತು ನವೆಂಬರ್ 12 ರಂದು ಪುತ್ತೂರಿನಲ್ಲಿ ಸರ್ದಾರ್@150 ಯುನಿಟಿ ವಾಕ್ ಆಯೋಜಿಸಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಪ್ಟನ್ ಚೌಟ, ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ […]

ಸಿನಿಮಾ

ಒಟಿಟಿ ಪ್ರೇಕ್ಷಕರಿಗೆ ಹಬ್ಬ..!! ಕಾಂತಾರ ಎ ಲೆಜೆಂಡ್,ಲೋಕ ಚಾಪ್ಟರ್ 1,ಬ್ಲಾಕ್‌ಮೇಲ್ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯ ಬಿಸಿಯಲ್ಲಿ ..!!

ಸಿನಿಮಾ ಅಭಿಮಾನಿಗಳ ಲೋಕವನ್ನು ತುದಿಗಾಲಲ್ಲಿ ನಿಲ್ಲಿಸಿದ ತ್ರಿಲ್ಲರ್ ,ಡ್ರಾಮಾ , ಸೂಪರ್ ಹೀರೋ ಚಿತ್ರಗಳಾದ ಕಾಂತಾರ ಎ ಲೆಜೆಂಡ್,ಲೋಕ ಚಾಪ್ಟರ್ 1, ಬ್ಲಾಕ್ ಮೇಲ್ ಚಿತ್ರಗಳು ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು‌ ಒಟಿಟಿ ಸೇರುವ ಹಾದಿಯಲ್ಲಿದೆ. ಹಬ್ಬದ ಋತು ಮುಗಿಯುತ್ತಿದ್ದಂತೆ, ದಕ್ಷಿಣ ಭಾರತದ ಕೆಲವು ದೊಡ್ಡ ಮತ್ತು ವೈವಿಧ್ಯಮಯ ಬಿಡುಗಡೆಗಳೊಂದಿಗೆ OTT ಜಾಗವು ಬಿಸಿಯಾಗುತ್ತಿದೆ. ಸೂಪರ್‌ಹೀರೋ ಸಾಹಸಗಳು ಮತ್ತು ಪೌರಾಣಿಕ ನಾಟಕಗಳಿಂದ ಹಿಡಿದು ಭಾವನಾತ್ಮಕ ಸಂಕಲನಗಳು ಮತ್ತು ಸೆರೆಹಿಡಿಯುವ ಥ್ರಿಲ್ಲರ್‌ಗಳವರೆಗೆ, ಈ ವಾರ ಪ್ರತಿಯೊಂದು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft