ಬಾಗಲಕೋಟೆ ಕಬ್ಬು ಬೆಳೆಗಾರರ ಹೋರಾಟ: ವಿಕೋಪಕ್ಕೆ ತಿರುಗಿ ಕಿಡಿಗೇಡಿಗಳಿಂದ ಕಲ್ಲು ತೂರಾಟ..!!
ಬಾಗಲಕೋಟೆ: ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿಯಿರುವ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಬಾಕಿ ಬಿಲ್ ಪಾವತಿ, ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ರೈತರು ನಡೆಸಿದ್ದ ಹೋರಾಟ ವಿಕೋಪಕ್ಕೆ ತಿರುಗಿದ್ದು ಕಿಡಿಗೇಡಿಗಳಿಂದ ಕಲ್ಲು ತೂರಾಟ ಮಾಡಿರುವಂತಹ ಘಟನೆ ನಡೆದಿದೆ.ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳು ಮತ್ತು ಕಚೇರಿ ಮೇಲೆ ಕಲ್ಲೆಸೆಯಲಾಗಿದ್ದು, ಬೊಲೆರೊ ವಾಹನ ಸೇರಿ ಹಲವು ವಾಹನಗಳ ಗಾಜು ಪುಡಿಪುಡಿ ಆಗಿವೆ. ಸದ್ಯ ಕಬ್ಬು ಬೆಳೆಗಾರ ರೈತರ ಪ್ರತಿಭಟನೆ ಶಾಂತ ಸ್ಥಿತಿಗೆ ಮರಳಿದೆ. ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರು ಬಾಕಿ […]










