ಮೈಗ್ರೇನ್‌ನಿಂದ ಪರಿಹಾರ ಪಡೆಯಲು ಪ್ರತಿನಿತ್ಯ ಈ ಹಣ್ಣುಗಳನ್ನು ಸೇವನೆ ಮಾಡಬೇಕಂತೆ
ಕಳಪೆ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡದಿಂದಾಗಿ ಜನರು ಮೈಗ್ರೇನ್ ತಲೆನೋವಿಗೆ ಒಳಗಾಗುತ್ತಾರೆ. ಈ ತಲೆನೋವು ವಿಪರೀತ ನೋವಿನಿಂದ ಕೂಡಿದ್ದು, ಕೆಲವರಿಗೆ ವಾಂತಿ, ತಲೆತಿರುಗುವಿಕೆ, ಆಯಾಸ ಉಂಟಾಗುತ್ತದೆ. ಹಾಗಿರುವಾಗ ಈ ಸಂದರ್ಭದಲ್ಲಿ ಈ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಬಹುದಂತೆ. ಹಾಗಿದ್ದರೆ, ಮೈಗ್ರೇನ್‌ನಿಂದ ಬಳಲುತ್ತಿರುವವರು ಯಾವೆಲ್ಲಾ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂಬುದನ್ನು ನೋಡಿ. ಪ್ರತಿಯೊಬ್ಬರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆಗಳಲ್ಲಿ ತಲೆನೋವು ಸಹ ಒಂದು. ನಿರಂತರ ಒತ್ತಡ, ಕೆಲಸದ ಹೊರೆ, ನಿದ್ರೆಯ ಕೊರತೆ […]






