Business

ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

India GDP grows 8.2pc in Q2 of FY26: ಈ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ. 7.8ರಷ್ಟು ಹೆಚ್ಚಿ ಅಚ್ಚರಿ ಹುಟ್ಟಿಸಿದ್ದ ಭಾರತದ ಆರ್ಥಿಕತೆ ಎರಡನೇ ಕ್ವಾರ್ಟರ್​ನಲ್ಲಿ ಇನ್ನೂ ಹೆಚ್ಚು ಅಚ್ಚರಿ ತಂದಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.2ರಷ್ಟು ಬೆಳೆದಿದೆ. ಹೆಚ್ಚಿನ ಆರ್ಥಿಕ ತಜ್ಞರು ಶೇ. 7ರಿಂದ ಶೇ. 7.50ರ ಶ್ರೇಣಿಯಲ್ಲಿ ಬೆಳೆಯಬಹುದು ಎಂದು ನಿರೀಕ್ಷಿಸಿದ್ದರು ನವದೆಹಲಿ, ನವೆಂಬರ್ 28: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ (GDP) ನಿರೀಕ್ಷೆಮೀರಿ ಭರ್ಜರಿಯಾಗಿ ಬೆಳೆದಿದೆ. […]

Health +

ನಿರಂತರವಾಗಿ ಚರ್ಮದಲ್ಲಿ ತುರಿಕೆ ಕಂಡುಬರುವುದಕ್ಕೆ ಈ ಅಂಶಗಳೇ ಕಾರಣ

ದೇಹದಲ್ಲಿ ನಿರಂತರವಾಗಿ ತುರಿಕೆ ಕಂಡುಬರುತ್ತಿದ್ದರೆ ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು. ಇದು ಕೇವಲ ಚರ್ಮದ ಸಮಸ್ಯೆಯಲ್ಲ; ಗಂಭೀರ ಕಾಯಿಲೆಯ ಸಂಕೇತ ಅಥವಾ ದೇಹದಲ್ಲಿನ ಪೋಷಕಾಂಶಗಳ ಕೊರತೆಯೂ ಆಗಿರಬಹುದು. ಹೌದು, ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಕೆಲವು ಜೀವಸತ್ವ ಅಂದರೆ ವಿಟಮಿನ್ ಗಳ ಕೊರತೆ ಉಂಟಾದಾಗಲೂ ಕೂಡ, ತುರಿಕೆ ಹೆಚ್ಚಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತೆ, ಇದರಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ. ದೇಹದಲ್ಲಿ ನಿರಂತರವಾಗಿ ತುರಿಕೆ […]

News

ಚಳಿಯ ನಡುವೆ “ಇಂದಿನಿಂದ ಡಿಸೆಂ.2″ರ ವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ !

ರಾಜ್ಯದಲ್ಲಿ ಇಂದಿನಿಂದ ಡಿ.2ರವರೆಗೆ ಮಿಶ್ರ ವಾತಾವರಣ ಇರಲಿದ್ದು, ಚಳಿ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯ ಚಂಡಮಾರುತದ ಪ್ರಭಾವದಿಂದ ಬೆಂಗಳೂರು, ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಕೆಲವು ಉತ್ತರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇಲಾಖೆಯ ವರದಿ ಪ್ರಕಾರ ತಾಪಮಾನ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸುಧಾರಿಸಿದೆ ಎಂದು ಹೇಳಿದೆ.

Sports

ಪ್ರಧಾನಿ ನರೇಂದ್ರ ಮೋದಿಯವರಿಗೆ “ಭಾರತ ಭಾಗ್ಯ ವಿಧಾತಾ” ಬಿರುದು ಪ್ರಧಾನ!

ನಿನ್ನೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ‘ಲಕ್ಷಕಂಠ ಗೀತಾ ಪಠಣ’ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿಯವರ ಅದಮ್ಯ ನಾಯಕತ್ವ ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಪುಟ್ಟಿಂಗೇ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಪ್ರಧಾನಿ ಮೋದಿ ಅವರಿಗೆ ಬೆಳ್ಳಿ ‘ಕಡೆಗೋಲು’ ಮತ್ತು ವಿಶೇಷ ಪೇಟ ತೊಡಿಸಿ “ಭಾರತ ಭಾಗ್ಯ ವಿಧಾತಾ” ಎಂಬ ಬಿರುದು ನೀಡಿ ಗೌರವಿಸಲಾಯಿತು.

Business News

14 ತಿಂಗಳ ನಂತರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಷೇರು ಮಾರುಕಟ್ಟೆ: ಯಾವ ವಲಯಗಳು ಉತ್ತಮ ಮತ್ತು ಕಳಪೆ ?

ನವದೆಹಲಿ: ಕಳೆದ 14 ತಿಂಗಳುಗಳ ‘ಏಕೀಕರಣದ ಹಂತ’ದ ನಂತರ, ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ (Sensex) ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಆರ್ಥಿಕ ಚೇತರಿಕೆ, ವಿದೇಶಿ ಹೂಡಿಕೆದಾರರ ಹೊಸ ಪಾಲ್ಗೊಳ್ಳುವಿಕೆ ಮತ್ತು ಆರ್‌ಬಿಐನ ರೆಪೊ ದರ ಕಡಿತದ ನಿರೀಕ್ಷೆಗಳು ಮಾರುಕಟ್ಟೆಯ ಈ ಉತ್ಸಾಹಕ್ಕೆ ಕಾರಣವಾಗಿವೆ.ಆದಾಗ್ಯೂ, ಈ 14 ತಿಂಗಳ ಅವಧಿಯಲ್ಲಿ ಎಲ್ಲಾ ವಲಯಗಳು ಒಂದೇ ರೀತಿ ಕಾರ್ಯನಿರ್ವಹಿಸಿಲ್ಲ. ಕೆಲವು ವಲಯಗಳು ಅತ್ಯುತ್ತಮ ಪ್ರದರ್ಶನ ನೀಡಿದರೆ, ಇನ್ನು ಕೆಲವು ಹಿನ್ನಡೆ […]

Business GULF

ಭಾರತೀಯ ರುಪಾಯಿ ಮೌಲ್ಯ ಕುಸಿತದ ಹಿನ್ನೆಲೆ; ದುಬೈನಲ್ಲಿರುವ ಭಾರತೀಯ ವಲಸಿಗರಿಗೆ ಹಣ ರವಾನೆಯಲ್ಲಿ ಭಾರೀ ಏರಿಕೆ !

ದುಬೈ/ಇಂಡಿಯಾ : ನವೆಂಬರ್ 28, : ಭಾರತೀಯ ರೂಪಾಯಿ (INR) ಅಮೆರಿಕನ್ ಡಾಲರ್ ಎದುರು ಐತಿಹಾಸಿಕ ಕನಿಷ್ಠ ಮಟ್ಟವನ್ನು ತಲುಪಿರುವ ಹಿನ್ನೆಲೆಯಲ್ಲಿ, ಯುಎಇಯಲ್ಲಿ (ಸಂಯುಕ್ತ ಅರಬ್ ಸಂಸ್ಥಾನ) ನೆಲೆಸಿರುವ ಲಕ್ಷಾಂತರ ಭಾರತೀಯ ವಲಸಿಗರು ತಮ್ಮ ತಾಯ್ನಾಡಿಗೆ ಕಳುಹಿಸುವ ಹಣದ (Remittance) ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ರೂಪಾಯಿಯ ಅಪಮೌಲ್ಯವು (Depreciation) ಅನಿವಾಸಿ ಭಾರತೀಯರಿಗೆ (NRI) ಹೆಚ್ಚಿನ ಮೊತ್ತವನ್ನು ಕಳುಹಿಸಲು ಸುವರ್ಣಾವಕಾಶವನ್ನು ಒದಗಿಸಿದ್ದು, ಇದರ ಲಾಭ ಪಡೆಯಲು ಜನರು ಮುಗಿಬಿದ್ದಿದ್ದಾರೆ. ಐತಿಹಾಸಿಕ ಕುಸಿತದ ಪರಿಣಾಮಇತ್ತೀಚೆಗೆ, ರೂಪಾಯಿಯು ಡಾಲರ್ ಎದುರು […]

News Sports

2030 ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಗೆ ಗುಜರಾತಿನ ಅಹಮದಾಬಾದ್ ಆಯ್ಕೆ!

ಅಹಮದಾಬಾದ್, ನವೆಂಬರ್ 28 : ಕ್ರೀಡಾ ಇತಿಹಾಸದಲ್ಲಿ ಭಾರತಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು; ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಗುಜರಾತ್‌ಗೆ ಉನ್ನತ ಸ್ಥಾನ. ದೇಶದ ಕ್ರೀಡಾಭಿಮಾನಿಗಳ ಬಹುಕಾಲದ ಕನಸೊಂದು ನನಸಾಗಿದೆ. 2030ರಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ (Commonwealth Games) ಕ್ರೀಡಾಕೂಟವನ್ನು ಆಯೋಜಿಸಲು ಗುಜರಾತ್ ರಾಜ್ಯದ ಪ್ರಮುಖ ನಗರವಾದ ಅಹಮದಾಬಾದ್ ಅನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ (CGF) ಇಂದು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.ಈ ಆಯೋಜನೆಯ ಹಕ್ಕು ಪಡೆಯುವ ಮೂಲಕ, ಭಾರತವು 2010ರಲ್ಲಿ ದೆಹಲಿಯಲ್ಲಿ […]

News ಸಿನಿಮಾ

GST – ‘Ghosts in Trouble’ ; ಇಂದು ಬಿಡುಗಡೆ. ಇದು ಹಾರರ್ ಕಾಮಿಡಿ ಸಂಯೋಜನೆಯ ಹೊಸ ಪ್ರಯೋಗ.

ಸಿನಿಮಾ ಹಂಗಾಮ, ನವೆಂಬರ್ 28: ಇಂದು ತೆರೆಗೆ ಬಂದಿರುವ ಸೃಜನ್ ಲೋಕೇಶ್ ನಿರ್ದೇಶನದ ‘GST – Ghosts in Trouble’ ಸಿನಿಮಾ ಪ್ರೇಕ್ಷಕರ ಕುತೂಹಲ ಸೆಳೆದಿದೆ. ಹಾರರ್ ಹಾಗೂ ಕಾಮಿಡಿ ಎರಡನ್ನೂ ಸೇರಿಸಿ ಮನರಂಜನೆ ನೀಡುವ ಉದ್ದೇಶದಿಂದ ನಿರ್ಮಿಸಲಾದ ಈ ಚಿತ್ರದಲ್ಲಿ, ಭೂತಗಳ ನಡುವೆ ಸಿಲುಕಿಕೊಂಡಿರುವ ಸಾಮಾನ್ಯ ಜನರ ಗೊಂದಲ, ಭಯ ಹಾಗೂ ಅವುಗಳಿಂದ ಉಂಟಾಗುವ ಹಾಸ್ಯಪ್ರದ ಸಂದರ್ಭಗಳೇ ಕಥೆಯ ಮೂಲ. ಚಿತ್ರದ ನಿರ್ದೇಶಕ ಸೃಜನ್ ಲೋಕೇಶ್ ಹೊಸ ಶೈಲಿಯ ಪ್ರಯೋಗಕ್ಕೆ ಕೈ ಹಾಕಿದ್ದು, ಭಯ ಮೂಡಿಸುವ […]

News

ಚಿನ್ನ ,ಬೆಳ್ಳಿ ಗೆದ್ದ ರಾಜ್ಯದ ಆಟಗಾರ್ತಿಯರಿಗೆ 5 ಲಕ್ಷ ರೂ ಪ್ರೋತ್ಸಾಹಧನ ಸನ್ಮಾನ!

ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಕರ್ನಾಟಕದ ಆಟಗಾರ್ತಿ “ಧನಲಕ್ಷ್ಮಿ” ಹಾಗೂ ಚೈನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ “ಲಕ್ಷ್ಯ ರಾಜೇಶ್” ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಸನ್ಮಾನ ಮಾಡಿ, ತಲಾ ಐದು ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಿ ಗೌರವಿಸಿದ್ದಾರೆ.‌

Business

ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

Post Office Recurring Deposit scheme: ಅಂಚೆ ಕಚೇರಿಯಲ್ಲಿರುವ ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಅಕೌಂಟ್ ಪ್ಲಾನ್ ಒಂದು. ಐದು ವರ್ಷದವರೆಗೆ ಮಾಸಿಕವಾಗಿ ಹಣ ಕಟ್ಟುತ್ತಾ ಹೋಗಬೇಕು. ಇದರ ಹಣ ಪ್ರತೀ ಕ್ವಾರ್ಟರ್​ಗೆ ಕಾಂಪೌಂಡಿಂಗ್ ಆಗುತ್ತದೆ. ಈ ಸ್ಕೀಮ್​ಗೆ ಸದ್ಯ ಶೇ. 6.7 ಬಡ್ಡಿ ನಿಗದಿ ಮಾಡಲಾಗಿದೆ. ಕನಿಷ್ಠ ಮಾಸಿಕ ಹೂಡಿಕೆ 100 ರೂ ಇದೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಮ್ಯೂಚುವಲ್ ಫಂಡ್ ಎಸ್​ಐಪಿ, ಬ್ಯಾಂಕ್ ಆರ್​ಡಿ ರೀತಿ ಪೋಸ್ಟ್ ಆಫೀಸ್ ರೆಕರಿಂಗ್ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft