ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು; ಗಾಜಾ ಶಾಂತಿ ಯೋಜನೆ ಕುರಿತು ಚರ್ಚೆ
ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ನೇಹಿತ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇನ್ನೂ ಹೆಚ್ಚು ದೃಢನಿಶ್ಚಯದಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುವ ಸಂಕಲ್ಪವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದ್ದಾರೆ. ಹಾಗೇ, ಗಾಜಾ ಶಾಂತಿ ಯೋಜನೆಯ ಸ್ಥಿತಿಗತಿಯ ಕುರಿತು ನೆತನ್ಯಾಹು ಅವರಿಂದ ಪ್ರಧಾನಿ ಮೋದಿ ಸಂಕ್ಷಿಪ್ತ ಮಾಹಿತಿ ಪಡೆದರು. ನವದೆಹಲಿ, ಜನವರಿ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿದ್ದರು. ಫೋನ್ನಲ್ಲಿ ತಮ್ಮ ಗೆಳೆಯ ನೆತನ್ಯಾಹು ಜೊತೆ ಮಾತನಾಡಿದ ಮೋದಿ […]











