News

ಲಿವ್-ಇನ್ ಸಂಬಂಧದಿಂದ ಹೊರಬರುವುದು ಅಪರಾಧವಲ್ಲ, ಆದರೆ ಮಗು ಜನಿಸಿದ ನಂತರ ಅತ್ಯಾಚಾರದ ಆರೋಪ ಎಷ್ಟು ಸರಿ: ಸುಪ್ರೀಂ ಪ್ರಶ್ನೆ

ಲಿವ್-ಇನ್ ಸಂಬಂಧದಲ್ಲಿ ದೀರ್ಘಕಾಲ ಬಾಳಿ, ಮಗುವನ್ನು ಪಡೆದ ನಂತರ ಪುರುಷನ ವಿರುದ್ಧ ಅತ್ಯಾಚಾರದ ದೂರು ದಾಖಲಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮದುವೆಯ ಬಂಧವಿಲ್ಲದ ಇಂತಹ ಸಂಬಂಧಗಳಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.ಮದುವೆಯ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂಬ ಮಹಿಳೆಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠವು, ಇದು ಲಿವ್-ಇನ್ ಸಂಬಂಧವಾಗಿದ್ದು, ಮಹಿಳೆ ಆ ವ್ಯಕ್ತಿಯೊಂದಿಗೆ ಮಗುವನ್ನು ಹೊಂದಿದ್ದಾಳೆ.

ಲಿವ್-ಇನ್ ಸಂಬಂಧದಿಂದ ಹೊರಬರುವುದು ಅಪರಾಧವಲ್ಲ, ಆದರೆ ಮಗು ಜನಿಸಿದ ನಂತರ ಅತ್ಯಾಚಾರದ ಆರೋಪ ಎಷ್ಟು ಸರಿ: ಸುಪ್ರೀಂ ಪ್ರಶ್ನೆ

ನವದೆಹಲಿ, ಏಪ್ರಿಲ್ 27: ಲಿವ್-ಇನ್ ಸಂಬಂಧ(Live-In Relationship)ದಲ್ಲಿ ದೀರ್ಘಕಾಲ ಬಾಳಿ, ಮಗುವನ್ನು ಪಡೆದ ನಂತರ ಪುರುಷನ ವಿರುದ್ಧ ಅತ್ಯಾಚಾರದ ದೂರು ದಾಖಲಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮದುವೆಯ ಬಂಧವಿಲ್ಲದ ಇಂತಹ ಸಂಬಂಧಗಳಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಮದುವೆಯ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂಬ ಮಹಿಳೆಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠವು, ಇದು ಲಿವ್-ಇನ್ ಸಂಬಂಧವಾಗಿದ್ದು, ಮಹಿಳೆ ಆ ವ್ಯಕ್ತಿಯೊಂದಿಗೆ ಮಗುವನ್ನು ಹೊಂದಿದ್ದಾಳೆ. ಹೀಗಿರುವಾಗ ಈಗ ಅತ್ಯಾಚಾರ ಮತ್ತು ಹಲ್ಲೆಯ ಆರೋಪ ಮಾಡುತ್ತಿರುವುದು ಆಶ್ಚರ್ಯಕರ ಎಂದು ಅಭಿಪ್ರಾಯಪಟ್ಟಿತು.

ವಯಸ್ಕರು ವಿವಾಹದ ಹೊರಗೆ ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ, ಅಂತಹ ಸಂಬಂಧಗಳಲ್ಲಿ ಕೆಲವು ಅಂತರ್ಗತ ಅಪಾಯಗಳಿರುತ್ತವೆ ಎಂದು ನ್ಯಾಯಾಲಯ ಗಮನಿಸಿದೆ. ಒಪ್ಪಂದದ ಅಥವಾ ಒಮ್ಮತದ ಸಂಬಂಧವಿದ್ದಾಗ ಅಲ್ಲಿ ಅಪರಾಧದ ಪ್ರಶ್ನೆ ಎಲ್ಲಿಂದ ಬರುತ್ತದೆ ವರ್ಷಗಳ ಕಾಲ ಒಟ್ಟಿಗೆ ವಾಸಿಸಿ, ಬೇರ್ಪಟ್ಟ ನಂತರ ಲೈಂಗಿಕ ದೌರ್ಜನ್ಯದ ದೂರು ದಾಖಲಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಲಿವ್-ಇನ್ ಸಂಬಂಧಗಳು ಮುರಿದುಬಿದ್ದಾಗ ಮಹಿಳೆಯರು ಹೆಚ್ಚಾಗಿ ಲೈಂಗಿಕ ದೌರ್ಜನ್ಯದ ದೂರುಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ನ್ಯಾಯಾಲಯ ವಿಷಾದಿಸಿದೆ.ಒಪ್ಪಿಗೆಯ ಸ್ವರೂಪವನ್ನು ಪರಿಶೀಲಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಅರ್ಜಿದಾರರ ಪರ ವಕೀಲರು, ಆರೋಪಿಯು ಮದುವೆಯ ಭರವಸೆ ನೀಡಿ ಮಹಿಳೆಯನ್ನು ನಂಬಿಸಿದ್ದ, ಆದರೆ ಆತನಿಗೆ ಮೊದಲೇ ಮದುವೆಯಾಗಿತ್ತು ಎಂಬ ವಿಷಯ ಮಹಿಳೆಗೆ ತಿಳಿದಿರಲಿಲ್ಲ ಎಂದು ವಾದಿಸಿದರು. ಆದರೆ, ದೀರ್ಘಕಾಲದ ಲಿವ್-ಇನ್ ಸಂಬಂಧದ ನಂತರ ಇಂತಹ ದೂರುಗಳನ್ನು ದಾಖಲಿಸುವ ಕಾನೂನುಬದ್ಧತೆಯನ್ನು ನ್ಯಾಯಾಲಯ ಪ್ರಶ್ನಿಸಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft