News Technology

ವೈ-ಫೈ ಹಾಟ್‌ಸ್ಪಾಟ್ ಕೈಕೊಟ್ಟರೂ ಟೆನ್ಷನ್ ಬೇಡ: ಬ್ಲೂಟೂತ್‌ನಲ್ಲೇ ಹಂಚಿಕೊಳ್ಳಿ ಮೊಬೈಲ್ ಇಂಟರ್‌ನೆಟ್!

ಸ್ಮಾರ್ಟ್‌ಫೋನ್‌ನ ಮೊಬೈಲ್ ಡೇಟಾವನ್ನು ಲ್ಯಾಪ್‌ಟಾಪ್ ಅಥವಾ ಮತ್ತೊಂದು ಸಾಧನದಲ್ಲಿ ಬಳಸಬೇಕಾದರೆ ಸಾಮಾನ್ಯವಾಗಿ ವೈ-ಫೈ ಹಾಟ್‌ಸ್ಪಾಟ್‌ ಮೊರೆ ಹೋಗುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ವೈ-ಫೈ ಹಾಟ್‌ಸ್ಪಾಟ್ ಬಳಸಲು ಸಾಧ್ಯವಾಗದಿದ್ದರೂ ಮೊಬೈಲ್‌ನ ಇಂಟರ್‌ನೆಟ್ ಸಂಪರ್ಕವನ್ನು ಮತ್ತೊಂದು ಸಾಧನಕ್ಕೆ ಹಂಚಿಕೊಳ್ಳಬಹುದು. ಇದಕ್ಕೆ ಬ್ಲೂಟೂತ್ ಟೆಥರಿಂಗ್ ಎಂಬ ವೈಶಿಷ್ಟ್ಯ ಸಹಕಾರಿಯಾಗಿದೆ.

ಬ್ಲೂಟೂತ್ ಟೆಥರಿಂಗ್ ಮೂಲಕ ಮೊದಲು ಮೊಬೈಲ್ ಮತ್ತು ಇಂಟರ್‌ನೆಟ್ ಬಳಸಬೇಕಾದ ಮತ್ತೊಂದು ಸಾಧನವನ್ನು ಬ್ಲೂಟೂತ್ ಮೂಲಕ ಜೋಡಿಸಬೇಕು. ಬಳಿಕ ಫೋನ್‌ನ ಸೆಟ್ಟಿಂಗ್ಸ್‌ನಲ್ಲಿ Network & Internet ಅಥವಾ Connections → Hotspot & Tethering → Bluetooth Tethering ಆಯ್ಕೆಯನ್ನು ಆನ್ ಮಾಡಬೇಕು. ವಿವಿಧ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಯ್ಕೆಯ ಹೆಸರು ಅಥವಾ ಸ್ಥಳ ಬದಲಾಗಬಹುದು; ಸೆಟ್ಟಿಂಗ್ಸ್‌ನಲ್ಲಿ ‘Tethering’ ಎಂದು ಹುಡುಕಿದರೂ ಈ ಆಯ್ಕೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು.

ವೈ-ಫೈ ಹಾಟ್‌ಸ್ಪಾಟ್ ಮತ್ತು ಬ್ಲೂಟೂತ್ ಟೆಥರಿಂಗ್ ಎರಡರ ಉದ್ದೇಶವೂ ಒಂದೇ ಆಗಿದ್ದರೂ ಸಂಪರ್ಕದ ವಿಧಾನ ವಿಭಿನ್ನವಾಗಿದೆ. ವೈ-ಫೈ ಹಾಟ್‌ಸ್ಪಾಟ್‌ಗೆ ಹೋಲಿಸಿದರೆ ಬ್ಲೂಟೂತ್ ಟೆಥರಿಂಗ್‌ನ ಇಂಟರ್‌ನೆಟ್ ವೇಗ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಹೀಗಾಗಿ ದೊಡ್ಡ ಫೈಲ್‌ಗಳ ಡೌನ್‌ಲೋಡ್, ಉತ್ತಮ ಗುಣಮಟ್ಟದ ವಿಡಿಯೊ ವೀಕ್ಷಣೆ ಅಥವಾ ವೇಗದ ಇಂಟರ್‌ನೆಟ್ ಅಗತ್ಯವಿರುವ ಕೆಲಸಗಳಿಗೆ ವೈ-ಫೈ ಹಾಟ್‌ಸ್ಪಾಟ್ ಹೆಚ್ಚು ಸೂಕ್ತವಾಗಿದೆ.

ಆದರೆ ಇಮೇಲ್ ಪರಿಶೀಲನೆ, ವೆಬ್‌ಸೈಟ್ ತೆರೆಯುವುದು ಅಥವಾ ಕಡಿಮೆ ಪ್ರಮಾಣದ ಆನ್‌ಲೈನ್ ಕೆಲಸಗಳನ್ನು ಮಾಡಲು ಬ್ಲೂಟೂತ್ ಟೆಥರಿಂಗ್ ಉಪಯುಕ್ತವಾಗಬಹುದು. ಈ ವಿಧಾನದಲ್ಲಿ ಮೊಬೈಲ್ ಡೇಟಾವೇ ಬಳಕೆಯಾಗುವುದರಿಂದ ಮತ್ತೊಂದು ಸಾಧನದಲ್ಲಿ ಬಳಸುವಷ್ಟು ಡೇಟಾ ಖರ್ಚಾಗುತ್ತದೆ. ಜೊತೆಗೆ ಫೋನ್‌ನ ಬ್ಯಾಟರಿಯೂ ಬಳಕೆಯಾಗುತ್ತದೆ. ಆದ್ದರಿಂದ ಕೆಲಸ ಮುಗಿದ ಬಳಿಕ ಬ್ಲೂಟೂತ್ ಟೆಥರಿಂಗ್ ಅನ್ನು ಆಫ್ ಮಾಡುವುದು ಉತ್ತಮ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft