News

ಕಲಬುರಗಿ ಮಹಾನಗರ ಪಾಲಿಕೆಗೆ ಕಾಂಗ್ರೆಸ್‌ನದ್ದೇ ಮತ್ತೆ ಸಾರಥ್ಯ: ಮೇಯರ್ ಆಗಿ ಅಜ್ಮಲ್ ಗೋಳಾ, ಉಪ ಮೇಯರ್ ಆಗಿ ಫರ್ಹಾನಾಜ್ ಜಹಗೀರ್ದಾರ್ ಆಯ್ಕೆ

ಕಲಬುರಗಿ, ಆಗಸ್ಟ್ 29: ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ತನ್ನದಾಗಿದೆ. ಕಾಂಗ್ರೆಸ್‌ನ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಕಲಬುರಗಿ ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ ಸದಸ್ಯ ಅಜ್ಮಲ್ ಅಹಮದ್ ಗೋಳಾ ಹಾಗೂ ಉಪ ಮೇಯರ್ ಸ್ಥಾನಕ್ಕೆ 20ನೇ ವಾರ್ಡ್‌ನ ಸದಸ್ಯೆ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ನಾಮಪತ್ರ ಸಲ್ಲಿಸಿದ್ದರು. ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಆಗಸ್ಟ್ 7ರಂದು ನಡೆಯಬೇಕಾಗಿದ್ದರೂ ಕೆಲ ಕಾರಣಗಳಿಂದ ಮುಂದೂಡಿಕೆಯಾಗಿತ್ತು.

ಪ್ರಾದೇಶಿಕ ಆಯುಕ್ತೆ ಜಾಹೀರಾ ನಶೀಮ್ ಅವರು ಪರಿಷ್ಕೃತ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜ್ಮಲ್ ಅಹಮದ್ ಗೋಳಾ ಅವರು 35 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾದರೆ, ಬಿಜೆಪಿ ಅಭ್ಯರ್ಥಿ 29 ಮತಗಳನ್ನು ಪಡೆದರು. ಇದರೊಂದಿಗೆ ಕಾಂಗ್ರೆಸ್ ಪಾಲಿಕೆಯ ಆಡಳಿತದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಅಜ್ಮಲ್ ಅಹಮದ್ ಗೋಳಾ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಕ್ರಮವಾಗಿ ಮೇಯರ್ ಮತ್ತು ಉಪ ಮೇಯರ್ ಜವಾಬ್ದಾರಿ ವಹಿಸಿಕೊಂಡಿದ್ದು, ಕಲಬುರಗಿ ನಗರದ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ನಾಗರಿಕ ಸೌಲಭ್ಯಗಳ ಸುಧಾರಣೆಗೆ ಹೊಸ ಆಡಳಿತ ಯಾವ ರೀತಿಯ ಆದ್ಯತೆ ನೀಡಲಿದೆ ಎಂಬುದು ಇದೀಗ ಗಮನ ಸೆಳೆದಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft