Sports

IND vs ZIM: ವೈಭವ್ ಆರ್ಭಟ; ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ

India vs Zimbabwe T20: ಹರಾರೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಯನ್ನು 7 ವಿಕೆಟ್‌ಗಳಿಂದ ಮಣಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜಿಂಬಾಬ್ವೆ ನೀಡಿದ 125 ರನ್‌ಗಳ ಗುರಿಯನ್ನು ಭಾರತ 14ನೇ ಓವರ್‌ನಲ್ಲಿ ತಲುಪಿತು. ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ನಾಯಕ ಶ್ರೇಯಸ್ ಅಯ್ಯರ್ ಯಶಸ್ವಿ ನಾಯಕತ್ವಕ್ಕೆ ಇದು ಶುಭಾರಂಭ.

IND vs ZIM: ವೈಭವ್ ಆರ್ಭಟ; ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ

ಹರಾರೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ಜಿಂಬಾಬ್ವೆ (India vs Zimbabwe) ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್ ಗಳಿಸಿತು. ತಂಡದ ಪರ ವೆಸ್ಲಿ ಮಾಧೇವೆರೆ 39 ಮತ್ತು ಮರುಮಾನಿ 27 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್‌ಗಳನ್ನು ಕಳೆದುಕೊಂಡು 14ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ತಂಡದ ಪರ ವೈಭವ್ ಸೂರ್ಯವಂಶಿ ( Vaibhav Sooryavanshi) ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಗೆಲುವಿನೊಂದಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿ ತಮ್ಮ ಗೆಲುವಿನ ಖಾತೆಯನ್ನು ತೆರೆದರು.

ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಕಳಪೆ ಆರಂಭ ಪಡೆಯಿತು. ಸುಮಾರು ಎರಡೂವರೆ ವರ್ಷಗಳ ನಂತರ ಮೈದಾನಕ್ಕಿಳಿದ ಮಯಾಂಕ್ ಯಾದವ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಮೊದಲ ಎಸೆತವನ್ನೇ 149 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಬ್ರಿಯಾನ್ ಬೆನೆಟ್ ವಿಕೆಟ್ ಪಡೆದರು. ಇದಾದ ಬಳಿಕವೂ ಜಿಂಬಾಬ್ವೆಯ ಪೆವಿಲಿಯನ್ ಪರೇಡ್ ನಿಲ್ಲಲಿಲ್ಲ. ಆದಾಗ್ಯೂ 7ನೇ ವಿಕೆಟ್​ಗೆ ಜೊತೆಯಾದ ವೆಸ್ಲಿ ಮಾಧೇವೆರೆ 39 ಮತ್ತು ಮರುಮಾನಿ 27 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದಾಗಿ ಜಿಂಬಾಬ್ವೆ 125 ರನ್ ಕಲೆಹಾಕಿತು.

ಮಿಂಚಿದ ಮಯಾಂಕ್

ಇತ್ತ ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಮಯಾಂಕ್ ಯಾದವ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಪ್ರಿನ್ಸ್ ಯಾದವ್ ಕೂಡ 4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಅಶೋಕ್ ಶರ್ಮಾ 4 ಓವರ್‌ಗಳಲ್ಲಿ 29 ರನ್ ನೀಡಿದರು. ಆದರೆ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಶಿವಂ ದುಬೆ 4 ಓವರ್‌ಗಳಲ್ಲಿ ಬೌಲಿಂಗ್ ಮಾಡಿ 32 ರನ್ ನೀಡಿ 1 ವಿಕೆಟ್ ಪಡೆದರು. ಸ್ಪಿನ್ನರ್ ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ 24 ರನ್ ನೀಡಿ 1 ವಿಕೆಟ್ ಪಡೆದರು.

ವೈಭವ್ ಗೆಲುವಿನ ಅರ್ಧಶತಕ

ಗೆಲುವಿಗೆ 126 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಉತ್ತಮ ಆರಂಭ ನೀಡಿದರು. ಆದರೆ ವೈಭವ್‌ಗೆ ಅಭಿಷೇಕ್ ಶರ್ಮಾ ಅವರಿಂದ ಯಾವುದೇ ಬೆಂಬಲ ಸಿಗಲಿಲ್ಲ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 8 ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್ ಗಳಿಸಿ ಟೆಂಟ್‌ಗೆ ಮರಳಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳೊಂದಿಗೆ 263 ಸ್ಟ್ರೈಕ್ ರೇಟ್‌ನಲ್ಲಿ 50 ರನ್‌ ಬಾರಿಸಿ ಔಟಾದರು. ವೈಭವ್ ಅವರ ಈ ಅರ್ಧಶತಕ ತಂಡದ ಗೆಲುವನ್ನು ಸುಲಭಗೊಳಿಸಿತು. ಈ ಪಂದ್ಯದಲ್ಲಿ ಇಶಾನ್ ಕಿಶಾನ್ ಕೂಡ 35 ರನ್‌ಗಳ ಕಾಣಿಕೆ ನೀಡಿದರು.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft