Health + News

ಡೆಟರ್ಜೆಂಟ್ ಪುಡಿ, ಪಾಮ್ ಆಯಿಲ್‌ನಿಂದ ಕೃತಕ ಹಾಲು ತಯಾರಿ: 2.3 ಕೋಟಿ ಲೀಟರ್ ಹಾಲು ಮಾರುಕಟ್ಟೆಗೆ ಹರಿದ ಶಂಕೆ!

ಮುಂಬೈ ಜು. 14: ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಕೃತಕ ಹಾಲು ತಯಾರಿಕೆ ಮತ್ತು ವಿತರಣೆಯ ಜಾಲ ಬಯಲಾಗಿದ್ದು, ಸುಮಾರು 2.3 ಕೋಟಿ ಲೀಟರ್ ಕಳಪೆ ಹಾಲು ಕಳೆದ ಆರು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ತಲುಪಿರಬಹುದೆಂಬ ಆತಂಕ ವ್ಯಕ್ತವಾಗಿದೆ. ಪೊಲೀಸ್ ಹಾಗೂ ಆಹಾರ ಮತ್ತು ಔಷಧ ಆಡಳಿತ (FDA) ನಡೆಸಿದ ತನಿಖೆಯಲ್ಲಿ ಡಿಟರ್ಜೆಂಟ್ ಪುಡಿ, ಪಾಮ್ ಆಯಿಲ್ ಹಾಗೂ ಇತರ ಕಳಪೆ ರಾಸಾಯನಿಕಗಳನ್ನು ಬಳಸಿ ಕೃತಕ ಹಾಲು ತಯಾರಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ತನಿಖೆಯ ಪ್ರಕಾರ, ಆರೋಪಿಗಳು ಸುಮಾರು 100 ಲೀಟರ್ ಶುದ್ಧ ಹಾಲಿಗೆ 10 ಲೀಟರ್ ಕೃತಕ ಹಾಲನ್ನು ಬೆರೆಸಿ ವಿವಿಧ ಹಾಲು ಸಂಗ್ರಹ ಕೇಂದ್ರಗಳ ಮೂಲಕ ಮಾರುಕಟ್ಟೆಗೆ ಪೂರೈಸುತ್ತಿದ್ದರು. ಈ ಲೆಕ್ಕಾಚಾರದ ಆಧಾರದ ಮೇಲೆ 2.3 ಕೋಟಿ ಲೀಟರ್‌ಗಿಂತಲೂ ಹೆಚ್ಚು ಕಳಪೆ ಹಾಲು ಸಾರ್ವಜನಿಕರಿಗೆ ತಲುಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ವಿಶೇಷ ತನಿಖಾ ತಂಡ (SIT) ಕಾರ್ಯಾಚರಣೆ ನಡೆಸುತ್ತಿದೆ.

ಆಹಾರ ತಜ್ಞರ ಪ್ರಕಾರ, ಡಿಟರ್ಜೆಂಟ್ ಮತ್ತು ರಾಸಾಯನಿಕ ಮಿಶ್ರಿತ ಹಾಲಿನ ದೀರ್ಘಕಾಲದ ಸೇವನೆಯು ಯಕೃತ್ತು, ಮೂತ್ರಪಿಂಡ ಸೇರಿದಂತೆ ದೇಹದ ಪ್ರಮುಖ ಅಂಗಾಂಗಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಗುಣಮಟ್ಟದ ಮೇಲ್ವಿಚಾರಣೆಯನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಹಾಲು ಖರೀದಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft