Sports

ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ :

ಮಹಿಳಾ ವಿಶ್ವಕಪ್ 2025 : ಭಾರತ ಮಹಿಳಾ ತಂಡವು 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ದ 339 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಫೈನಲ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮಹಿಳಾ ತಂಡವು ಕಾದಾಟ ನಡೆಸಲಿದೆ.ಜೆಮಿಮಾ ರೋಡ್ರಿಗಸ್ ಅವರ ಅಜೇಯ ಶತಕ ಹಾಗೂ ಹರ್ಮನ್ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ಈ ರೋಚಕ ಗೆಲುವನ್ನು ಸಾಧಿಸಿದೆ.

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಭಾರತಕ್ಕೆ 339 ರನ್‌ಗಳ ಬೃಹತ್ ಸವಾಲನ್ನು ಒಡ್ಡಿತ್ತು. ಗುರಿ ದೊಡ್ಡದಿದ್ದರಿಂದ ಹರ್ಮನ್ ಪಡೆ ಈ ಸವಾಲನ್ನು ಬೆನ್ನಟ್ಟಲು ಸಾಧ್ಯವೇ ಎಂಬ ಅನುಮಾನಗಳಿದ್ದವು. ಆದಾಗ್ಯೂ, ಬಲಿಷ್ಠ ಆಸ್ಟ್ರೇಲಿಯಾದೆದುರು ಸ್ಮರಣೀಯ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವು ಇತಿಹಾಸ ಸೃಷ್ಟಿಸಿದೆ. ಈ ಗೆಲುವಿನೊಂದಿಗೆ ಗುಂಪು ಹಂತದಲ್ಲಿನ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿದೆ. ಈಗ ವಿಶ್ವಕಪ್ ಟ್ರೋಫಿಗಾಗಿ ಟೀಂ ಇಂಡಿಯಾ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಆಸೀಸ್ ಪರ ಆಡಿದ್ದ ಆರಂಭಿಕ ಆಟಗಾರ್ತಿ ಲಿಚ್‌ಫೀಲ್ಡ್ ಶತಕ ಬಾರಿಸಿದರು. ಇದರ ಜೊತೆಗೆ ಪೆರ್ರಿ ಅವರೊಂದಿಗೆ ಎರಡನೇ ವಿಕೆಟ್‌ಗೆ 155 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ ಲಿಚ್‌ಫೀಲ್ಡ್ 119 ರನ್‌ಗಳಿಗೆ ಔಟಾದರು. ಆ ಬಳಿಕ ಬಂದ ಬೆತ್ ಮೂನಿ (24) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (3) ಬೇಗನೇ ಪೆವಿಲಿಯನ್ ಸೇರಿಕೊಂಡರು. ಎಲ್ಲಿಸ್ ಪೆರ್ರಿ ಕೂಡ77 ರನ್‌ಗಳಿಗೆ ಔಟಾದರು.ಆ ಬಳಿಕ ಬಂದ ತಹ್ಲಿಯಾ ಮೆಕ್‌ಗ್ರಾತ್ 12 ರನ್‌ಗಳಸಿ ರನೌಟ್ ಆದರೆ ಆಶ್ಲೇ ಗಾರ್ಡ್ನರ್ 63 ರನ್ ಬಾರಿಸಿ ತಂಡವನ್ನು 300 ರನ್ಗಳ ಗಡಿ ದಾಟಿಸಿದರು. ಕೊನೆಯಲ್ಲಿ ದೀಪ್ತಿ ಶರ್ಮಾ, ಅಲಾನಾ ಕಿಂಗ್ (4) ಮತ್ತು ಸೋಫಿ ಮೊಲಿನಿಯಕ್ಸ್ ಅವರನ್ನು ಔಟ್ ಮಾಡಿದರೆ, ಕಿಮ್ ಗಾರ್ತ್ (17) ರನೌಟ್ ಆದ ಕಾರಣ ಆಸ್ಟ್ರೇಲಿಯಾ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಭಾರತ ಪರ ಶ್ರೀ ಚರಣ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್, ಕ್ರಾಂತಿ ಗೌರ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು. ಹಾಗೆ ಒಟ್ಟು 338 ರನ್ ಗಳನ್ನು ಆಸೀಸ್ ತಂಡವು ಕಲೆ ಹಾಕಿತ್ತು.

ನಂತರ ಚೇಸಿಂಗ್ ವೇಳೆ ಭಾರತ ತಂಡದ ಆರಂಭಿಕರಿಬ್ಬರೂ ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ಆ ಬಳಿಕ ಇನ್ನಿಂಗ್ಸ್ ಕಟ್ಟಿದ ಜೆಮಿಮಾ ಹಾಗೂ ಹರ್ಮನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 341 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡು ಫೈನಲ್‌ಗೆ ಲಗ್ಗೆಯಿಟ್ಟಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft