
:ನವದೆಹಲಿ, 29 ನವೆಂಬರ್ 2025:ಭಾರತದ ಮಾಜಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್, ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತೋರಿದ ಭಾವನಾತ್ಮಕ ಸಂಭ್ರಮದ ಹಿಂದೆ ಇರುವ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ನಿರಂತರವಾಗಿ ಶತಕ ಬಾರಿಸಿದ ಬಳಿಕ ತೋರಿದ ಉತ್ಸಾಹಮಯ ಸಂಭ್ರಮ, cricket ಪ್ರೇಮಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಅಶ್ವಿನ್ ಹೇಳುವುದರಲ್ಲಿ, “ಕೊಹ್ಲಿ ಈಗ ತುಂಬಾ ಶಾಂತ, ದೃಢನಿಶ್ಚಯದ ಮನಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಅವರ ಮೇಲೆ ಕೇಳಿಬಂದ ಕೆಲವು ಟೀಕೆಗಳಿಗೆ ಅವರು ಮೈದಾನದಲ್ಲೇ ಉತ್ತರ ಕೊಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ‘ನನ್ನ ಮೇಲೆ ಸಂಶಯ ಮಾಡ್ತೀರಾ? ಇಲ್ಲಿದೆ ಉತ್ತರ’ ಎಂದು ಅವರ ಆಟವೇ ಹೇಳುತ್ತಿದೆ,” ಎಂದರು.
ಇತ್ತೀಚಿನ ಪಂದ್ಯಗಳಲ್ಲಿ ಕೊಹ್ಲಿಯ ಬ್ಯಾಟಿಂಗ್ ಕ್ರಮ, ಬೌಂಡರಿ ಹೊಡೆಯುವ ನಿಖರತೆ ಮತ್ತು ಒತ್ತಡದ ಕ್ಷಣಗಳಲ್ಲಿನ ತಾಳ್ಮೆ ,ಇವೆಲ್ಲವೂ ಮತ್ತೆ ಆತನ ಶ್ರೇಷ್ಟತೆಯನ್ನೇ ತೋರಿಸುತ್ತಿದೆ ಎಂದು ಅಶ್ವಿನ್ ಪ್ರಶಂಸಿಸಿದರು.
ಅವರು ಮುಂದೆ ಹೇಳಿದರು, “ಕೊಹ್ಲಿ ಮತ್ತೆ ಸ್ವದೇಶಿ ಕ್ರಿಕೆಟ್ ಆಡಲು ಮುಂದಾಗಿರುವುದು, ತಮ್ಮ ಮೇಲೆ ನಡೆದ ಗಾಸಿಪ್ ಮತ್ತು ಸಂಶಯಗಳನ್ನು ಮೌನವಾಗಿ ಜವಾಬು ಕೊಡಲು ತೆಗೆದುಕೊಂಡ ನಿರ್ಧಾರ. ಈಗ ಅವರು ಮಾತುಗಳಿಂದಲ್ಲ, ಕ್ರೀಡೆಯಿಂದಲೇ ಎಲ್ಲರಿಗೂ ಉತ್ತರ ನೀಡುತ್ತಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮತ್ತು ಸಂಭ್ರಮದ ಮೂಲಕ ಟೀಕೆಗಳಿಗೆ ನೇರವಾದ ಉತ್ತರ ನೀಡುತ್ತಿದ್ದಾರೆ. ಅವರ ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ಮೈದಾನದಲ್ಲಿ ತೋರಿಸುತ್ತಿರುವ ತೀವ್ರ ಕೇಂದ್ರೀಕರಣ ಮತ್ತೆ ಭಾರತದ ಕ್ರಿಕೆಟ್ ಪ್ರೇಮಿಗಳಲ್ಲಿ ಭರವಸೆ ಮೂಡಿಸಿದೆ.



