Health +

ಗರ್ಭಪಾತದ ನಂತರ ಆರೋಗ್ಯ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳ ಸೇವನೆ ಮಾಡಿ

ಜೀವನದಲ್ಲಿ ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನ ಬಹಳ ವಿಶೇಷ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭಪಾತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ಹಲವರಲ್ಲಿ ಕಳವಳ ಉಂಟು ಮಾಡಿದೆ. ಇದಕ್ಕೆ ಕಾರಣಗಳು ಹಲವು. ಆದರೆ ಈ ರೀತಿ ಸಮಸ್ಯೆ ಕಂಡು ಬಂದಾಗ ಯಾವ ರೀತಿ ಆರೈಕೆ ಮಾಡಬೇಕು, ಬಳಿಕ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಜೊತೆಗೆ ಆರೋಗ್ಯ ಕಾಪಾಡಲು ಕೆಲವು ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯ. ಇದು ತ್ವರಿತ ಪರಿಹಾರ ನೀಡುವುದರ ಜೊತೆಗೆ ಒತ್ತಡವನ್ನು ಕೂಡ ನಿವಾರಣೆ ಮಾಡುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಒಳ್ಳೆಯದು, ಅವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.

ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನ ಎನ್ನುವುದು ಒಂದು ವಿಶೇಷ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ತಾಯಿಯಾಗುವುದು ಸುಲಭವಲ್ಲ. ಒತ್ತಡದ ಜೀವನಶೈಲಿ, ಬೇಗನೆ ತಾಯಂದಿರಾಗಲು ಇಷ್ಟಪಡದಿರುವುದು ಸೇರಿದಂತೆ ನಾನಾ ಕಾರಣಗಳು ಕೆಲವೊಂದು ಬಾರಿ ಗರ್ಭಪಾತಕ್ಕೆ (Abortion) ಕಾರಣವಾಗುತ್ತದೆ. ಆದರೆ ಒಮ್ಮೆ ಗರ್ಭಪಾತವಾದರೆ ಸಾಧ್ಯವಾದಷ್ಟು ಆರೈಕೆ ಮಾಡಬೇಕಾಗುತ್ತದೆ. ಹಾಗೆಯೇ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರಗಳ ಸೇವನೆ ಮಾಡಬೇಕಾಗುತ್ತದೆ. ಇದು ತ್ವರಿತ ಪರಿಹಾರ ನೀಡುವುದರ ಜೊತೆಗೆ ಒತ್ತಡವನ್ನು ಕೂಡ ನಿವಾರಣೆ ಮಾಡುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಒಳ್ಳೆಯದು, ಅವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.

ಗರ್ಭಪಾತದ ನಂತರ, ರಕ್ತಸ್ರಾವವಾಗುವುದರಿಂದ ದೇಹ ತುಂಬಾ ದುರ್ಬಲಗೊಳ್ಳುತ್ತದೆ. ಇದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ. ಅಷ್ಟೇ ಅಲ್ಲ, ವಾಕರಿಕೆ, ವಾಂತಿ ಮತ್ತು ಆಯಾಸದಂತಹ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ. ಗರ್ಭಪಾತದ ನಂತರ, ವೈದ್ಯರು ದೇಹ ಚೇತರಿಸಿಕೊಳ್ಳಲು ಸಹಾಯ ಮಾಡುವ ಔಷಧಿಗಳನ್ನು ಮಾತ್ರ ನೀಡುತ್ತಾರೆ. ಆದರೆ ಆ ಪರಿಸ್ಥಿತಿಯಲ್ಲಿ, ದೇಹ ಮತ್ತು ಮನಸ್ಸು ಎರಡನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿರುತ್ತದೆ. ಔಷಧಿಯ ಜೊತೆಗೆ, ಸರಿಯಾದ ರೀತಿಯ ಆಹಾರ ಸೇವನೇ ಮಾಡುವುದರಿಂದ ಸಾಮಾನ್ಯ ಜೀವನಕ್ಕೆ ಮರಳಲು ಸಹಾಯವಾಗುತ್ತದೆ.

ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರ

ಸಾಮಾನ್ಯವಾಗಿ ಗರ್ಭಪಾತದ ನಂತರ ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಉಂಟಾಗುತ್ತದೆ. ಈ ಸಮಯದಲ್ಲಿ, ನೀವು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ಖಿನ್ನತೆಯಿಂದ ಚೇತರಿಸಿಕೊಳ್ಳಲು ಮತ್ತು ಕೆಂಪು ರಕ್ತ ಕಣಗಳ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಈ ಸಮಯದಲ್ಲಿ, ನೀವು ಹೆಚ್ಚು ಬಾದಾಮಿ ಮತ್ತು ವಾಲ್ನಟ್ಗಳನ್ನು ತಿನ್ನಬೇಕು.

ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರ

ಅಲ್ಲದೆ, ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸಬೇಕು. ಅಂದರೆ ಹಾಲು, ಒಣ ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಗರ್ಭಪಾತದ ನಂತರ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು, ಧಾನ್ಯಗಳು, ಓಟ್ಸ್, ಬ್ರೌನ್ ರೈಸ್ ಮತ್ತು ಕ್ವಿನೋವಾದಂತಹ ಆಹಾರಗಳನ್ನು ಸೇವನೆ ಮಾಡಬೇಕು. ಇದರ ಜೊತೆಗೆ ಕೋಳಿ ಮತ್ತು ಮೀನುಗಳನ್ನು ಕೂಡ ಸೇವಿಸಬೇಕು.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft