Business

ಈ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ 2008ರಲ್ಲಿ ಕೇವಲ 10 ಲಕ್ಷ ರೂ ಹೂಡಿಕೆ ಮಾಡಿದವರು ಇವತ್ತು ಕೋಟ್ಯಾಧೀಶ್ವರ

ICICI Prudential Large Cap Fund: 2008ರಲ್ಲಿ ಶುರುವಾದ ಐಸಿಐಸಿಐ ಪ್ರುಡೆನ್ಷಿಯಲ್ ಲಾರ್ಜ್ ಕ್ಯಾಪ್ ಫಂಡ್ ಈ 17 ವರ್ಷದಲ್ಲಿ ಶೇ. 15ರ ಸಿಎಜಿಆರ್​ನಲ್ಲಿ ಲಾಭ ತಂದಿದೆ. 2008ರಲ್ಲಿ ಈ ಫಂಡ್​ನಲ್ಲಿ 10 ಲಕ್ಷ ರೂ ಅನ್ನು ಲಂಪ್ಸಮ್ ಆಗಿ ಹೂಡಿಕೆ ಮಾಡಿದವರು ಇವತ್ತು ಕೋಟ್ಯಾಧೀಶ್ವರ ಆಗಿದ್ದಾರೆ. 17 ವರ್ಷದಲ್ಲಿ 10 ಲಕ್ಷ ರೂ ಹೂಡಿಕೆಯು 1.15 ಕೋಟಿ ರೂ ಆಗಿದೆ. ಇನ್ನೂ 10 ವರ್ಷ ಮುಂದುವರಿಸಿದರೆ ನಾಲ್ಕೂವರೆ ಕೋಟಿ ರೂ ಆಗಬಹುದು.

ಅನೇಕ ಮ್ಯೂಚುವಲ್ ಫಂಡ್​ಗಳು (Mutual Fund) ದೀರ್ಘಾವಧಿ ಹೂಡಿಕೆಗೆ ಸೂಕ್ತವಾಗಿರುತ್ತವೆ. ಒಂದು ವರ್ಷ, ಎರಡು ವರ್ಷದಷ್ಟು ಅಲ್ಪಾವಧಿಗೆ ಹೂಡಿಕೆ ಮಾಡಲು ಬಯಸುವವರು ಫಿಕ್ಸೆಡ್ ಡೆಪಾಸಿಟ್, ಡೆಟ್ ಫಂಡ್​ನಂತಹ ಯೋಜನೆಗಳಿಗೆ ಹೋಗಬಹುದು. ದೀರ್ಘಾವಧಿಗೆ ಹೂಡಿಕೆ ಮಾಡುತ್ತೇನೆಂದು ಹೊರಟರೆ ಈಕ್ವಿಟಿ ಫಂಡ್​ಗಳು ಸೂಕ್ತವೆನಿಸುತ್ತವೆ. ಬಹಳಷ್ಟು ಈಕ್ವಿಟಿ ಫಂಡ್​ಗಳು ಲಾಂಗ್ ಟರ್ಮ್​ನಲ್ಲಿ ಉತ್ತಮ ರಿಟರ್ನ್ ತಂದುಕೊಟ್ಟಿವೆ. ಇಂಥ ಮ್ಯೂಚುವಲ್ ಫಂಡ್​ಗಳಲ್ಲಿ ಐಸಿಐಸಿಐ ಪ್ರುಡೆನ್ಷಿಯಲ್ ಲಾರ್ಜ್ ಕ್ಯಾಪ್ ಫಂಡ್ ಒಂದು.

ಐಸಿಐಸಿಐನ ಈ ಲಾರ್ಜ್ ಕ್ಯಾಪ್ ಫಂಡ್ 2008ರಲ್ಲಿ ಆರಂಭವಾಗಿದೆ. ಇಲ್ಲಿಯವರೆಗೆ ಇದರ ಸಾಧನೆ ಸ್ಥಿರವಾಗಿದೆ. ಇದರ ಫಂಡ್ ಮ್ಯಾನೇಜರ್​ಗಳು ತಮ್ಮ ಅನುಭವ ಮತ್ತು ಜಾಣ್ಮೆಯಿಂದ ಸೂಕ್ತವಾದ ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುತ್ತಾ ಬರುತ್ತಿರುವುದು ಇದು ತಂದಿರುವ ಲಾಭದಿಂದ ಕಂಡುಕೊಳ್ಳಬಹುದು. ಈ ಫಂಡ್ ಸಾಮಾನ್ಯವಾಗಿ ಆಯ್ದ ಲಾರ್ಜ್ ಕ್ಯಾಪ್ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದೆ.

ಇದರಲ್ಲಿ ಹೂಡಿಕೆ ಮಾಡಿದವರಿಗೆ ಎಷ್ಟು ಸಿಕ್ಕಿದೆ ರಿಟರ್ನ್ಸ್?

2008ರಲ್ಲಿ ಇದು ಆರಂಭಗೊಂಡಾಗಿನಿಂದ ಈ 17 ವರ್ಷದಲ್ಲಿ ಶೇ. 15ರ ಸಿಎಜಿಆರ್​ನಲ್ಲಿ ರಿಟರ್ನ್ಸ್ ತಂದುಕೊಟ್ಟಿದೆ. 2008ರಲ್ಲಿ ನೀವು ಲಂಪ್ಸಮ್ ಆಗಿ 10 ಲಕ್ಷ ರೂ ಹೂಡಿಕೆ ಮಾಡಿದಿದ್ದರೆ, ಇವತ್ತು ಆ ಹೂಡಿಕೆ ಮೌಲ್ಯ 1.15 ಕೋಟಿ ರೂ ಆಗಿರುತ್ತಿತ್ತು.

ಇಲ್ಲಿ ಐಸಿಐಸಿಐ ಪ್ರು ಲಾರ್ಜ್ ಕ್ಯಾಪ್ ಫಂಡ್ ತನ್ನ ಬೆಂಚ್​ಮಾರ್ಕ್ ಇಂಡೆಕ್ಸ್​ಗಿಂತ ಹೆಚ್ಚಿನ ರಿಟರ್ನ್ ತಂದಿರುವುದು ಗಮನಾರ್ಹ. ಲಾರ್ಜ್ ಕ್ಯಾಪ್ ಇಂಡೆಕ್ಸ್ ಎನಿಸಿರುವ ನಿಫ್ಟಿ50 ಈ 17 ವರ್ಷದಲ್ಲಿ ಶೇ. 13-14ರ ಸಿಎಜಿಆರ್​ನಲ್ಲಿ ಬೆಳೆದಿದೆ. ಒಂದು ವೇಳೆ, ನಿಫ್ಟಿ ಇಂಡೆಕ್ಸ್​ನಲ್ಲಿ ನೀವು 2008ರಲ್ಲಿ 10 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅದು 87 ಲಕ್ಷ ರೂ ಆಗುತ್ತಿತ್ತು. ಐಸಿಐಸಿಐ ಪ್ರು ಲಾರ್ಜ್ ಕ್ಯಾಪ್ ಫಂಡ್ ಸುಮಾರು 27 ಲಕ್ಷ ರೂನಷ್ಟು ಹೆಚ್ಚು ಲಾಭ ತಂದುಕೊಟ್ಟಂತಾಗಿದೆ.

ಇನ್ನೂ 10 ವರ್ಷ ಹೂಡಿಕೆ ಮುಂದುವರಿಸಿದರೆ ಎಷ್ಟು ಲಾಭ?

ಒಂದು ವೇಳೆ, ಈ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ 2008ರಲ್ಲಿ 10 ಲಕ್ಷ ರೂ ಹೂಡಿಕೆ ಮಾಡಿದವರು, ಇನ್ನೂ 10 ವರ್ಷ ಹೂಡಿಕೆ ಮುಂದುವರಿಸಿದರೆ, ಮತ್ತು ಫಂಡ್ ಶೇ. 15ರ ಸಿಎಜಿಆರ್​ನಲ್ಲೇ ಬೆಳೆದರೆ? 2035ರಲ್ಲಿ ಅವರ ಹೂಡಿಕೆ ಮೌಲ್ಯ ಸುಮಾರು 4.50 ಕೋಟಿ ರೂ ಆಗಿರುತ್ತದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft