Namma Metro: ಹಳದಿ ಮಾರ್ಗಕ್ಕೆ ಸಿಕ್ತು ಸಂಚಾರ ಅನುಮತಿ: ಪ್ರಯಾಣಿಕರಿಗೆ ಕೊನೆಗೂ ಗುಡ್‌ನ್ಯೂಸ್!
ಬೆಂಗಳೂರು, ಆಗಸ್ಟ್ 01: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್ ಸಂಪರ್ಕಿಸುವ 19.15-ಕಿಮೀ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ (Namma Metro Yellow line) ಹಾಗೂ ಎಲ್ಲ ನಿಲ್ದಾಣಗಳ ತಪಾಸಣೆ ಪೂರ್ಣಗೊಂಡಿದೆ. ಹಳದಿ ಮಾರ್ಗಕ್ಕೆ ಶಾಸನಬದ್ಧ ಸುರಕ್ಷತಾ ಅನುಮತಿಯನ್ನು ದೊರಕಿದೆ. ಇದೇ ಆಗಸ್ಟ್ 15ರಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ನೂತನ ಮಾರ್ಗ ಉದ್ಘಾಟಿಸಲು ಪ್ಲಾನ್ ಮಾಡಿಕೊಂಡಿದೆ. ಬೆಂಗಳೂರು ಮೆಟ್ರೋ ಹಳದಿ ಮಾರ್ಗವನ್ನು ಜುಲೈ 22ರಿಂದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆ ಮಾಡಿದ್ದರು. […]


