
ಬೆಳಗಾವಿ, ನವೆಂಬರ್ 03: ಕಾಂಗ್ರೆಸ್ ಆಂತರಿಕ ಸಮಸ್ಯೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಅಲ್ಲಿ ಯಾರು ಏಕನಾಥ ಸಿಂಧೆ, ಅಜಿತ್ ಪವಾರ್ ಆಗಲ್ಲ. ಬದಲಾಗಿ ಸರ್ಕಾರ ಮುಂದುವರಿದ್ರೆ ನಮಗೆ ಅನುಕೂಲ ಆಗಲಿದೆ. ನಾವು ವಿರೋಧ ಪಕ್ಷದ ಕೆಲಸವನ್ನ ಸರಿಯಾಗಿ ಮಾಡಬೇಕಿದೆ ಎಂದು ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಸ್ವ ಪಕ್ಷದ ಮೇಲೆ
ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುತ್ತಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು,ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಕ್ರಾಂತಿ ಆಗಲ್ಲ, ಅದನ್ನು ಅವರ ಹೈಕಮಾಂಡ್ ತೀರ್ಮಾನಿಸುತ್ತದೆ, ಡಿಸಿಎಂ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ ಅಥವಾ ಯಾರನ್ನಾದ್ರೂ ಸಿಎಂ ಮಾಡಲಿ. ನಮಗೆ ಹೋರಾಟ ಮಾಡಲು ನಮಗೆ ಸಾಕಷ್ಟು ವಿಷಯಗಳಿವೆ ಅದನ್ನು ನಾವು ಸರಿಯಾಗಿ ಮಾಡಬೇಕು ಎಂದಿದ್ದಾರೆ.




